Saturday, 14th December 2024

ಸೂಟ್ ಧರಿಸಿದ ಸುಜಯ್

ದಿ ಸೂಟ್ ಇದೇ ವಾರ ತೆರೆಗೆ ಬರಲಿದೆ. ಶಿರ್ಷಿಕೆಯೇ ಹೇಳುವಂತೆ ಇದು ಸೂಟ್ ಸುತ್ತ ಸಾಗುವ ಕಥೆ ಚಿತ್ರದಲ್ಲಿ ಮಿಳಿತವಾಗಿದೆ. ಈ ಚಿತ್ರದ ಪ್ರಮುಖ ಪಾತ್ರ ದಲ್ಲಿ ಸುಜಯ್ ಆರ್ಯ ಅಭಿನಯಿಸಿದ್ದಾರೆ. ಸುಜಯ್ ಈ ಹಿಂದೆ ಅಧಿಕಾರ ಚಿತ್ರದಲ್ಲಿ ನಟಿಸಿದ್ದರು

ಅಧಿಕಾರ ಚಿತ್ರದಲ್ಲಿ ಸುಜಯ್ ಆರ್ಯ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಸೂಟ್ ಧರಿಸಿರುವ ಸುಜಯ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ.

ಕಲಾವಿದರಿಗೆ ಇಂತಹದೇ ಪಾತ್ರಬೇಕು ಎಂಬ ಬೇಡಿಕೆ ಇರಬಾರದು ಯಾವುದೇ ಪಾತ್ರ ನೀಡಿದರೂ ನಟಿಸಲು ಸಿದ್ಧವಿರಬೇಕು ಅಂತೆಯೇ ನಾನೂ ಕೂಡ ಅಭಿನಯದ ಅಭಿರುಚಿಯಿಂದ ಖಳನ ಪಾತ್ರದಲ್ಲಿ ಬಣ್ಣಹಚ್ಚಲು ಒಪ್ಪಿಕೊಂಡೆ ಎನ್ನುತ್ತಾರೆ ಸುಜಯ್.

ಕಮಲ್ ನಾಯಕನಾಗಿ ನಟಿಸಿದ್ದು, ಸುಜಯ್, ಮಂಜುನಾಥ್ ಪಾಟೀಲ್, ದೀಪ್ತಿ ಕಾಪ್ಸೆ, ಕುಸುಮಾ ರಾಮಯ್ಯ, ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್ ಮತ್ತಿತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಭಗತ್ ರಾಜ್ ನಿರ್ದೇಶನದ ಈ ಚಿತ್ರವನ್ನು ಬಿ.ರಾಮಸ್ವಾಮಿ ಹಾಗೂ ಮಾಲತಿ ಗೌಡ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಕಿರಣ್ ಶಂಕರ್ ಸಂಗೀತ ಸಂಯೋಜಿಸಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ ಈ ಚಿತ್ರಕ್ಕಿದೆ.