Thursday, 12th December 2024

ಹಾಸ್ಯ ನಟಿ ಸುನೇತ್ರಾ ಪಂಡಿತ್ ದ್ವಿಚಕ್ರ ವಾಹನ ಅಪಘಾತ

ಬೆಂಗಳೂರು: ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಹಾಸ್ಯ ನಟಿ ಸುನೇತ್ರಾ ಪಂಡಿತ್ ಅವರ ದ್ವಿಚಕ್ರ ವಾಹನ ಅಪಘಾತಕ್ಕೀಡಾ ಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವರದಿಯಾಗಿದೆ.

ಶನಿವಾರ ತಡರಾತ್ರಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭ ದಲ್ಲಿ ಅಪಘಾತ ಸಂಭವಿಸಿದೆ. ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಈ ಅಪಘಾತ ಸಂಭವಿ ಸಿದೆ ಎಂದು ಎನ್ನಲಾಗಿದೆ.

ಅಪಘಾತದಲ್ಲಿ ಸುನೇತ್ರಾರಿಗೆ ಗಂಭೀರವಾದ ಗಾಯಗಳಾಗಿದೆ. ಸ್ಥಳೀಯರು ಸುನೇತ್ರ ಅವರನ್ನು ಬಸವನಗುಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಹಾಸ್ಯ, ಗಂಭೀರ ಎಲ್ಲ ಪಾತ್ರಗಳಿಗೂ ಸುನೇತ್ರಾ ಸೈ ಅನ್ನಿಸಿಕೊಂಡಿದ್ದಾರೆ. ಜೊತೆಗೆ ಸುನೇತ್ರ ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿ ದ್ದಾರೆ. ಸುನೇತ್ರಾ ಅವರ ಸಿಲ್ಲಿ ಲಲ್ಲಿ ಧಾರಾವಾಹಿಯ ವಿಶಾಲು ಪಾತ್ರ ಎಲ್ಲರ ಮನಗೆದ್ದಿತ್ತು. ಸುನೇತ್ರಾ ಅವರ ಪತಿ ರಮೇಶ್ ಪಂಡಿತ್ ಕೂಡ ಕಲಾವಿದರಾಗಿದ್ದು, ಚಂದನವನದಲ್ಲಿ ಖಳನಟರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ರಮೇಶ್ ಪಂಡಿತ್ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.