Sunday, 19th May 2024

ಬಾಲಿವುಡ್‌ ನ ಗಾಯಕಿ ಮೇಲೆ ಬಾಟಲಿ ಎಸೆದು ಅಗೌರವ..!

ಡೆಹ್ರಾಡೋನ್: ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್‌ ನ ಗಾಯಕಿ ಮೇಲೆ ಅಭಿಮಾನಿಯೊಬ್ಬ ಬಾಟಲಿ ಎಸೆದು ಅಗೌರವ ತೋರಿಸಿರುವ ಘಟನೆ ನಡೆದಿದೆ.

ಸುನಿಧಿ ಚೌಹಾಣ್ ಬಿಟೌನ್‌ ಖ್ಯಾತ ಗಾಯಕಿ.

ಡೆಹ್ರಾಡೋನ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸುನಿಧಿ ಹಾಡುತ್ತಿದ್ದಾಗ ಅವರತ್ತ ಅಭಿಮಾನಿಯೊಬ್ಬ ಪ್ಲ್ಯಾಸ್ಟಿಕ್‌ ಬಾಟಲಿ ಎಸೆದಿದ್ದಾನೆ. ವಿಚಲಿತರಾಗದ ಸುನಿಧಿ, “ಬಾಟಲಿಗಳನ್ನು ಎಸೆಯುವುದರಿಂದ ಏನಾಗುತ್ತದೆ? ಏನೂ ಇಲ್ಲ. ಇದು ಶೋಗೆ ಅಡ್ಡಿ ಆಗುತ್ತದೆ. ನಿಮಗೆ ಅದು ಬೇಕೇ?” ಎಂದು ಕೇಳಿದ್ದಾರೆ. ಇದಕ್ಕೆ ಎಲ್ಲರೂ ಒಟ್ಟಾಗಿ ಒಂದೇ ಧ್ವನಿಯಲ್ಲಿ “ಇಲ್ಲ” ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಬಳಿ ಸುನಿಧಿ ಕಾನ್ಸಾರ್ಟ್ ಹಲವು ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಲ್ಲಿ ‘ಶೀಲಾ ಕಿ ಜವಾನಿ’, ‘ಕಮ್ಲಿ’, ‘ಕ್ರೇಜಿ ಕಿಯಾ ರೇ’, ‘ಆಜಾ ನಾಚ್ಲೆ’, ‘ಬೀಡಿ, ‘ದೇಸಿ ಗರ್ಲ್’, ‘ಧೂಮ್ ಮಚಾಲೆ’, ಹೀಗೆ ಹತ್ತಾರು ಸೂಪರ್‌ ಹಿಟ್‌ ಹಾಡುಗಳಿಗೆ ಸುನಿಧಿ ಧ್ವನಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!