Saturday, 14th December 2024

ಹಿರಿಯ ಪತ್ರಕರ್ತ, ಚಿತ್ರನಟ ಸುರೇಶ್​ಚಂದ್ರ ವಿಧಿವಶ

ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ, ಚಿತ್ರನಟ ಸುರೇಶ್​ಚಂದ್ರ ಅವರು ಶುಕ್ರವಾರ ಮಧ್ಯಾಹ್ನ ಮೃತ ಪಟ್ಟಿದ್ದಾರೆ.

ಇತ್ತೀಚಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

80ರ ದಶಕದಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ್ದ ಸುರೇಶ್​ಚಂದ್ರ ಅವರು, ಚಂದನವನದ ಶಂಕರ್​ನಾಗ್​, ವಿಷ್ಣುವರ್ಧನ್​, ಅಂಬರೀಶ್​, ದೇವರಾಜ್​ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ನಟ, ನಿರ್ದೇಶಕ ಎಸ್​.ನಾರಾಯಣ್​ ಅವರ ಆಹ್ವಾನದ ಮೇರೆಗೆ ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಪೋಷಕ ನಟರಾಗಿ ತೆರೆ ಮೇಲೆ ಕಾಣಿಸಿಕೊಂಡ ಸುರೇಶ್​ಚಂದ್ರ ಅವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.