Monday, 14th October 2024

ಸಲ್ಲುನ ರಾಧೆಗಾಗಿ ತಮಿಳು ನಟ ಭರತ್

ಮುಂಬೈ: ಈಗಾಗಲೇ ಬಾಯ್ಸ್ ಹಾಗೂ ಕಾದಲ್ ಚಿತ್ರದ ಮೂಲಕ ಖ್ಯಾತಿ ಪಡೆದ ತಮಿಳು ನಟ ಭರತ್ ನಿವಾಸ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ರಾಧೆ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ ವಹಿಸಲಿದ್ದಾರೆ. ಚಿತ್ರಕ್ಕೆ ಪ್ರಭುದೇವ ನಿ‌ರ್ದೇಶನ ನೀಡಿದ್ದಾರೆ.

ಮುಂಬೈನಲ್ಲಿ ಮೂರು ದಿನಗಳ ಶೂಟಿಂಗ್ ಮುಗಿಸಿರುವ ಭರತ್,  ಎರಡನೇ ಸುತ್ತಿನ ಶೂಟಿಂಗಗೆ ಸಿದ್ದತೆ ನಡೆಸಿದ್ದಾರೆ. ಈ ಮೊದಲು ಜ್ಯಾಕ್’ಪಾಟ್ ಚಿತ್ರದಲ್ಲೂ ನಟಿಸಿದ್ದರು. ವಾಂಟೆಡ್ ಮತ್ತು ದಬಾಂಗ್ 3 ಬಳಿಕ ಮೂರನೇ ಬಾರಿ ರಾಧೆಗಾಗಿ
ಸಲ್ಲು, ಭರತ್ ಹಾಗೂ ಪ್ರಭುದೇವ ಒಟ್ಟಾಗಿದ್ದಾರೆ. ತನ್ನ ಪಾತ್ರ ಪೊಲೀಸ್ ಅಧಿಕಾರಿಯದ್ದು, ವಿಲನ್ ಪಾತ್ರಕ್ಕೆ ರಣದೀಪ್ ಹೂಡ
ಇದ್ದಾರೆ.

ಪೊಲೀಸ್‌ ಪಾತ್ರಕ್ಕಾಗಿ ಕಳದ ಹಲವು ತಿಂಗಳಿಂದ ವರ್ಕ್‌ ಔಟ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿತ್ತು.  ಭರತ್‌ 30 ಕ್ಕಿಂತಲೂ ಹೆಚ್ಚು ತಮಿಳು ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೂ ಕೈಯಲ್ಲಿ ಆರಕ್ಕಿಂತ ಹೆಚ್ಚು ಸಿನೆಮಾ ಶೂಟಿಂಗ್ ಇನ್ನೂ ಬಾಕಿ ಇದೆ. ತಮಿಳಿನ ಕಾಳಿದಾಸ್ ಚಿತ್ರದಲ್ಲೂ ಪೊಲೀಸ್‌ ಅಧಿಕಾರಿಯ ಪಾತ್ರ ಮಾಡಿದ್ದರು.