ಬೆಂಗಳೂರು: ಪುನೀತ್ ಅವರ ಅಗಲಿಕೆಯಿಂದ ಅನಾಥಪ್ರಜ್ಞೆಯಿಂದ ಬಳಲುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ಯನ್ನು ತಾವು ಹೊತ್ತುಕೊಳ್ಳುವುದಾಗಿ ತಮಿಳು ನಟ ವಿಶಾಲ್ ಘೋಷಿಸಿದ್ದಾರೆ.
ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ಘೋಷಣೆ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರಾದ, ತಮಿಳು ನಟ ವಿಶಾಲ್ ಅವರು ಅಪ್ಪು ಮೇಲಿನ ಅಭಿಮಾನದೊಂದಿಗೆ ತಾವು ತೆಗೆದುಕೊಂಡಿರುವ ನಿರ್ಣಯವನ್ನು ಶ್ರದ್ಧಾಂಜಲಿ ಸಭೆ ಯಲ್ಲಿ ತೆಗೆದುಕೊಂಡಿದ್ದಾರೆ.
ಕನ್ನಡಿಗರಂತೂ ಜಾಲತಾಣದಲ್ಲಿ ವಿಶಾಲ್ ಅವರ ವಿಶಾಲ ಹೃದಯವನ್ನು ಕೊಂಡಾಡಿ ದ್ದಾರೆ. ನಟ, ರಾಜಕಾರಣಿಗೂ ಇಂತಹ ಯೋಚನೆ ಬರದಿರುವಾಗ ತಮಿಳು ನಟನೊಬ್ಬ ಈ ರೀತಿ ಮಾತನಾಡಿರುವುದು ಗ್ರೇಟ್ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಮಾಡಿರುವ ಸಮಾಜ ಸೇವೆಗಳ ಮೂಲಕ ಸದಾ ಅವರು ಎಲ್ಲರ ಹೃದಯದಲ್ಲಿ ನೆಲೆಸಿರುತ್ತಾರೆ. ಅವರು 1800 ಮಕ್ಕಳನ್ನು ಓದಿಸುತ್ತಿದ್ದರು. ಅವರ ಓದಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಹುಟ್ಟಿದ್ದು ತಮಿಳುನಾಡಿ ನಲ್ಲಾದರೂ ಕನ್ನಡನಾಡಿಗಾಗಿ ಮಾಡಿದ ಸೇವೆ ಅಷ್ಟಿಷ್ಟಲ್ಲ,