Thursday, 12th December 2024

ಮಾರ್ಚ್ ಕೊನೆಯಲ್ಲಿ ನಟಿ ತಾಪ್ಸಿ ಪನ್ನು ವಿವಾಹ

ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ಬಹುಕಾಲದ ಗೆಳೆಯ, ಡೆನ್ಮಾರ್ಕ್ ನ ಬ್ಯಾಡ್ಮಿಂಟನ್ ತಾರೆ ಮಥಿಯಾಸ್ ಬೋ ಜೊತೆ ತಾಪ್ಸಿ ಸಪ್ತಪದಿ ತುಳಿಯಲಿದ್ದಾರೆ.

ಡೆನ್ಮಾರ್ಕ್ ಮೂಲದ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಜೊತೆ ತಾಪ್ಸಿ ಹಲವು ಸಮಯದಿಂದ ಡೇಟಿಂಗ್ ನಲ್ಲಿದ್ದಾರೆ.

ಮಾರ್ಚ್ ಕೊನೆಯಲ್ಲಿ ಇಬ್ಬರ ಮದುವೆ ನಡೆಯಲಿದೆ. ಮಥಿಯಾಸ್ ಕ್ರಿಶ್ಚಿಯನ್ ಧರ್ಮೀಯರು. ತಾಪ್ಸಿ ಸಿಖ್ ಧರ್ಮೀಯರಾಗಿದ್ದಾರೆ. ಹೀಗಾಗಿ, ಎರಡೂ ಧರ್ಮದ ಸಂಪ್ರದಾಯದಂತೆ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ.

ಇಬ್ಬರ ನಡುವೆ ಬರೋಬ್ಬರಿ 7 ವರ್ಷಗಳ ಅಂತರವಿದೆ. ಮಥಿಯಾಸ್ ಯುರೋಪಿಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತ. ಯುರೋಪಿಯನ್ ಚಾಂಪಿ ಯನ್ ಶಿಪ್, ಸಮ್ಮರ್ ಒಲಿಂಪಿಕ್ಸ್ ಸೇರಿದಂತೆ ಅನೇಕ ಕ್ರೀಡಾ ಕೂಟಗಳಲ್ಲಿ ಮಥಿಯಾಸ್ ಪದಕ ಗೆದ್ದು ಸಾಧನೆ ಮಾಡಿದ್ದರು.

ತಾಪ್ಸಿ 2010ರಲ್ಲಿ ಮೊದಲ ಬಾರಿಗೆ ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಬಳಿಕ 2013 ರಲ್ಲಿ ಬಾಲಿವುಡ್ ನತ್ತ ಪ್ರಯಾಣ ಬೆಳೆಸಿದರು.