Thursday, 12th December 2024

ವಿಮಾನ ದುರಂತ: ಟಾರ್ಜನ್ ನಟ ಜೋ ಲಾರಾ, ಪತ್ನಿ ಸೇರಿ ಏಳು ಮಂದಿ ಸಾವು

ವಾಷಿಂಗ್ಟನ್: ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಬಾಲಿವುಡ್ ಟಾರ್ಜನ್ ಸಿನಿಮಾದ ನಟ ಜೋ ಲಾರಾ, ಪತ್ನಿ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ಫ್ಲೋರಿಡಾದ ಪಾಮ್ ಬೀಚ್ ನ ಸ್ಮ್ಥರ್ನಾದ ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಜೆಟ್ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ರುದರ್ ಫೋರ್ಡ್ ಕೌಂಟಿಯ ಅಗ್ನಿ ಮತ್ತು ರಕ್ಷಣಾ ತಂಡ ತಿಳಿಸಿದೆ.

ವಿಮಾನದಲ್ಲಿ ಬಾಲಿವುಡ್ ನಟ ಲಾರಾ ಸೇರಿದಂತೆ ಏಳು ಮಂದಿ ಇದ್ದಿರುವು ದಾಗಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಖಚಿತಪಡಿಸಿದೆ. ಶನಿವಾರ ರಾತ್ರಿಯಿಂದ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಆರ್ ಸಿಎಫ್ ಆರ್ ಕಮಾಂಡರ್ ಕ್ಯಾಪ್ಟನ್ ಜೋಶುವಾ ಸ್ಯಾಂಡರ್ಸ್ ತಿಳಿಸಿದ್ದಾರೆ.

1989ರ ಟೆಲಿವಿಷನ್ ಸಿನಿಮಾ “ಟಾರ್ಜನ್ ಇನ್ ಮ್ಯಾನಹಟ್ಟನ್” ನಲ್ಲಿ ನಟಿಸಿದ್ದು, ಟೆಲಿವಿಷನ್ ಸರಣಿಯಾದ ಟಾರ್ಜನ್: ದ ಎಪಿಕ್ ಅಡ್ವೆಂಚರಸ್ ನಲ್ಲಿ ನಟಿಸುವ ಮೂಲಕ ಜನಪ್ರಿಯಗೊಂಡಿದ್ದರು.