ಮುಂಬೈ: ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿರುವ ತೆಲುಗಿನ ‘ಕಣ್ಣಪ್ಪ’ ಸಿನಿಮಾದ ಪಾತ್ರ ವರ್ಗ ಹಿರಿದಾಗುತ್ತಿದೆ. ವಿಷ್ಣು ಮಂಚು ಅವರು ಹೀರೋ ಆಗಿ ನಟಿಸುತ್ತಿದ್ದಾರೆ.
ಪುರಾಣದ ಕಥೆಯನ್ನು ಆಧರಿಸಿ ಸಿದ್ಧವಾಗುತ್ತಿರುವ ಈ ಸಿನಿಮಾ ತಂಡಕ್ಕೆ ಈಗ ನಟ ಅಕ್ಷಯ್ ಕುಮಾರ್ ಅವರು ಸೇರ್ಪಡೆ ಆಗಿದ್ದಾರೆ. ಇದು ಅಕ್ಷಯ್ ಕುಮಾರ್ ಒಪ್ಪಿಕೊಂಡ ಮೊದಲ ತೆಲುಗು ಸಿನಿಮಾ. ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಗಳನ್ನು ಮಾಡುತ್ತಿರುವ ಅಕ್ಷಯ್ ಕುಮಾರ್ ಅವರು ತೆಲುಗಿನ ‘ಕಣ್ಣಪ್ಪ’ ಚಿತ್ರದಲ್ಲಿ ಯಾವ ಪಾತ್ರ ಮಾಡಲಿದ್ದಾರೆ.
‘ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ವಿಷ್ಣು ಮಂಚು ಅವರ ಮಹತ್ವಾಕಾಂಕ್ಷಿ ಸಿನಿಮಾವಾದ ‘ಕಣ್ಣಪ್ಪ’ ಚಿತ್ರದ ಪಾತ್ರವರ್ಗಕ್ಕೆ ಬಾಲಿವುಡ್ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಸೇರ್ಪಡೆ ಆಗಿದ್ದಾರೆ. ಪ್ರಭಾಸ್, ಪ್ರಭುದೇವ, ಮೋಹನ್ಲಾಲ್, ಶರತ್ಕುಮಾರ್ ಮುಂತಾ ದವರ ಬಳಿಕ ಅಕ್ಷಯ್ ಕುಮಾರ್ ಅವರ ಗ್ರ್ಯಾಂಡ್ ಎಂಟ್ರಿ ಆಗಿದೆ’ ಎಂದು ಅವರು ಪೋಸ್ಟ್ ಮಾಡಿ ದ್ದಾರೆ.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಕೂಡ ಒಂದು ಪಾತ್ರ ಮಾಡುತ್ತಾರೆ ಎಂದು ಸುದ್ದಿ ಇದೆ.. ಮೋಹನ್ ಬಾಬು, ಮಧೂ, ಬ್ರಹ್ಮಾನಂದಂ, ಮುಖೇಶ್ ರಿಷಿ, ಕುಶಾಲ್ ಮುಂತಾದವರು ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ‘ಕಣ್ಣಪ್ಪ’ ಸಿನಿಮಾ ಹೊಸ ಕ್ರೇಜ್ ಸೃಷ್ಟಿ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಹಲವು ಸಿನಿಮಾಗಳು ಸೋಲು ಕಂಡಿವೆ. ಆದ್ದರಿಂದ ಅವರು ದಕ್ಷಿಣ ಭಾರತದ ಸಿನಿಮಾ ಒಪ್ಪಿಕೊಂಡಿರಬಹುದು ಎಂದು ನೆಟ್ಟಿಗರು ಮಾತನಾಡಿ ಕೊಳ್ಳುತ್ತಿದ್ದಾರೆ. ಅಕ್ಷಯ್ ಕುಮಾರ್ ಅಭಿನಯಿಸಿರುವ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಏ.10ರಂದು ಈದ್ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.