ವಿಶ್ವಾದ್ಯಂತ ಈ ಸಿನಿಮಾ ಒಟ್ಟು 20 ಕೋಟಿ ಗಳಿಕೆ ಮಾಡಿದ್ದು ಈಗಲೂ ಬಾಕ್ಸ್ ಆಫೀಸ್ ರನ್ ಮುಗಿದಿಲ್ಲ. ಸಿನಿಮಾ ರಿಲೀಸ್ ಆಗಿ 21ನೇ ದಿನ ಆಗಿದೆ. ಸುದಿಪ್ತೋ ಸೇನ್ ನಿರ್ದೇಶನದ ಈ ಸಿನಿಮಾ ಪ್ರಶಂಸೆ ಪಡೆದಷ್ಟೇ ಟೀಕೆಯನ್ನೂ ಎದುರಿಸಿದೆ.
ಸುದಿಪ್ತೋ ಸೇನ್ ಅವರು ನಿರ್ದೇಶಿಸಿದ ಸಿನಿಮಾ ಥಿಯೇಟರ್ನಲ್ಲಿ ಮೇ 5ರಂದು ರಿಲೀಸ್ ಆಗಿತ್ತು. ಟ್ರೈಲರ್ ರಿಲೀಸ್ ಆಗಿ ಸಾಕಷ್ಟು ವಿವಾದ ಸೃಷ್ಟಿಯಾಗಿದ್ದಾಗಲೇ ಅದರ ಮಧ್ಯೆಯೇ ಸಿನಿಮಾ ರಿಲೀಸ್ ನಡೆದಿತ್ತು. ಸಿನಿಮಾವನ್ನು ಆರಂಭದಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಬ್ಯಾನ್ ಮಾಡಲಾಗಿತ್ತು.200 ಕೋಟಿ ಕ್ಲಬ್ ಸೇರಿದ ಸಿನಿಮಾ 21ನೇ ದಿನ ಮೇ 25ರಂದು 3 ಕೋಟಿ ರೂಪಾಯಿ ಗಳಿಸಿದೆ. 21ನೇ ದಿನದಂದು 213.17 ಕೋಟಿ ಕಲೆಕ್ಷನ್ ಆಗಿದೆ. ಸಿನಿಮಾ ಟೀಕೆಯ ಮಧ್ಯೆಯೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಂಡಿದೆ.
ಸುದಿಪ್ತೋ ಸೆನ್ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನಿರ್ದೇಶಕ ಸುದಿಪ್ತೋ ಸೆನ್ ಹಾಗೂ ವಿಪುಲ್ ಅಮೃತ್ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು.
ಹಲವಾರು ಕೇರಳ ಥಿಯೇಟರ್ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕಿವೆ.