Saturday, 27th July 2024

215 ಮಹಿಳೆಯರಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾ ಉಚಿತ ವೀಕ್ಷಣೆ

ಮೈಸೂರು: ಮೈಸೂರಿನಲ್ಲಿ ವಿಶ್ವ ಹಿಂದೂ ಪರಿಷತ್​ ವತಿಯಿಂದ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಹಿಳೆಯರು ಸಿನಿಮಾ ವೀಕ್ಷಿಸಿದ್ದಾರೆ.
ಈ ವೇಳೆ ‘ಭಾರತ್​ ಮಾತಾ ಕಿ ಜೈ, ವಂದೇ ಮಾತರಂ, ಸನಾತನ ಧರ್ಮಕ್ಕೆ ಜೈ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಗಿದೆ.

ದೇಶಾದ್ಯಂತ ಸಂಚಲನ ಮೂಡಿಸಿದ ಈ ಚಿತ್ರವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ಸತತ ನಾಲ್ಕನೇ ವಾರವೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿದೆ. ಒಂದಷ್ಟು ಕಡೆಗಳಲ್ಲಿ ಚಿತ್ರವನ್ನು ಉಚಿತವಾಗಿ ತೋರಿಸುವ ಕೆಲಸ ಆಗಿದೆ. ಮೈಸೂರಿನಲ್ಲಿ ವಿಶ್ವ ಹಿಂದೂ ಪರಿಷತ್​ ವತಿಯಿಂದ 215 ಮಹಿಳೆಯರಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಮೈಸೂರಿನ ಐನಾಕ್ಸ್​ ಮಲ್ಟಿಪ್ಲೆಕ್ಸ್​ನಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.

ಹಿಂದೂ ಪರ ಸಂಘಟನೆಗಳು ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಬೆಂಬಲ ಸೂಚಿಸಿವೆ. ವಿಶ್ವ ಹಿಂದೂ ಪರಿಷತ್​ ವತಿ ಯಿಂದ ಮೈಸೂರಿನಲ್ಲಿ ಆಯೋಜಿಸ ಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಹಿಳೆಯರು ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ‘ಭಾರತ್​ ಮಾತಾ ಕಿ ಜೈ, ವಂದೇ ಮಾತರಂ, ಸನಾತನ ಧರ್ಮಕ್ಕೆ ಜೈ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಗಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾ 25 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡು, ಮುನ್ನುಗ್ಗುತ್ತಿದೆ. ಮೇ 5ರಂದು ಈ ಚಿತ್ರ ಬಿಡುಗಡೆ ಆಯಿತು.

error: Content is protected !!