Sunday, 15th December 2024

ಐಸಿಯುನಲ್ಲಿ ಟಾಲಿವುಡ್‌ ನಟ ಕತ್ತಿ ಮಹೇಶ್’ಗೆ ಚಿಕಿತ್ಸೆ

ಹೈದರಾಬಾದ್: ಟಾಲಿವುಡ್‌ ನಟ, ನಿರ್ದೇಶಕ, ವಿಮರ್ಶಕ, ಬಿಗ್‌ಬಾಸ್‌ ಖ್ಯಾತಿಯ ಕತ್ತಿ ಮಹೇಶ್‌ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ತೂರಿನಿಂದ ಹೈದರಾಬಾದ್​ಗೆ ಮರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ  ಮಹೇಶ್‌ ಇನೋವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ನೆಲ್ಲೂರಿನ ಹೊರವಲಯದ ಚಂದ್ರಶೇಖರಪುರಂ ಬಳಿ ಈ ಅಪಘಾತ ಸಂಭವಿಸಿದೆ.

ಕಾರ್‌ನಲ್ಲಿ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಮಹೇಶ್‌ಗೆ ಪ್ರಾಣಾಪಾಯವಾಗಲಿಲ್ಲ. ಪ್ರಜ್ಞೆ ಕಳೆದುಕೊಂಡಿರುವ ಅವರನ್ನು ಸದ್ಯ ನೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಮಹೇಶ್‌ ಅವರು ಸಿನಿಮಾ ವಿಮರ್ಶೆಯಲ್ಲಿ ವಿವಾದಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ. ನೇನೆ ರಾಜು ನೇನೆ ಮಂತ್ರಿ, ಕ್ರ್ಯಾಕ್​, ಅಮ್ಮ ರಾಜ್ಯಂ ಲೋ ಕಡಪ ಬಿದ್ದಲು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ಪೆಸರಟ್ಟು ಸಿನಿಮಾ ಮೂಲಕ ಮಹೇಶ್ ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.