Thursday, 12th December 2024

ಸೆಪ್ಟೆಂಬರ್ 28ಕ್ಕೆ ‘ತೋತಾಪುರಿ 2’ ಚಿತ್ರ ಬಿಡುಗಡೆ

ಬೆಂಗಳೂರು: ಗ್ಗೇಶ್ ಹಾಗೂ ಡಾಲಿ ಧನಂಜಯ್ ಅಭಿನಯದ ‘ತೋತಾಪುರಿ ೨’ ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ.
ತೋತಾಪುರಿ 1 ರಲ್ಲಿ ಜಾತಿ-ಧರ್ಮ ಹಾಗೂ ಮಡಿವಂತಿಕೆ ಬಗ್ಗೆ ಕಾಮಿಡಿ ಮೂಲಕ ಹೇಳಲಾಗಿತ್ತು. ಈ ಚಿತ್ರ ಕಳೆದ ವರ್ಷ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿತ್ತು.
ಇದೀಗ ತೋತಾಪುರಿ 2 ಚಿತ್ರ ರಿಲೀಸ್​ಗೆ ರೆಡಿಯಾಗಿದ್ದು, ಚಿತ್ರದ ಮುಂದುವರೆದ ಭಾಗ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಗಳನ್ನು ಕೆರಳಿಸಿದೆ.
ನಟ ಡಾಲಿ ಧನಂಜಯ್ ಈ ಚಿತ್ರದಲ್ಲಿ ಜಗ್ಗೇಶ್ ಅವರ ಜೊತೆ ಇಡೀ ಸಿನಿಮಾದುದ್ದಕ್ಕೂ ಸಾಗಿ ಬಂದಿದ್ದಾರೆ. ಚಿತ್ರದ ಕುರಿತು ಮಾತನಾಡಿರುವ ನಿರ್ಮಾಪಕ ಕೆ.ಎ.ಸುರೇಶ್ ಅವರು, ತೋತಾಪುರಿ ಮೊದಲ ಭಾಗದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಎರಡನೇ ಭಾಗದಲ್ಲೂ ಇದೇ ರೀತಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ, ವಿಶೇಷ ವಾಗಿ ಹಬ್ಬಗಳು ಮತ್ತು ರಜಾದಿನವಾದ ವಾರಾಂತ್ಯದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದಾರೆ.

ವಿಜಯಪ್ರಸಾದ್ ನಿರ್ದೇಶನದ ಈ ಚಿತ್ರದ ಎರಡನೇ ಭಾಗದಲ್ಲಿ ನವರಸ ನಾಯಕ ಜಗ್ಗೇಶ್, ಅದಿತಿ ಪ್ರಭುದೇವ, ಸುಮನಾ ರಂಗನಾಥ್, ದತ್ತಾತ್ರೇಯ, ವೀಣಾ ಸುಂದರ್ ಮತ್ತು ಹೇಮಾ ಹತ್ತಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣವನ್ನು ನಿರಂಜನ್ ಪ್ರಭು ನಿರ್ವಹಿಸಿದ್ದಾರೆ.