Sunday, 17th November 2024

Tripti Dimri: ತೃಪ್ತಿ ಡಿಮ್ರಿಯ  ಸೌಂದರ್ಯ ರಹಸ್ಯ ತಿಳಿಯುವ ಕುತೂಹಲವೇ? ಇಲ್ಲಿದೆ ನೋಡಿ ಎಲ್ಲ ವಿವರ

Tripti Dimri

ಮುಂಬೈ : ನಟಿ  ತೃಪ್ತಿ ಡಿಮ್ರಿ(Tripti Dimri) ಕೆಲವು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರೂ ಕೂಡ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರದ ಮೂಲಕ ಫೇಮಸ್ ಆಗಿದ್ದಾರೆ. ಅವರು ತಮ್ಮ ನಟನೆಯ ಮೂಲಕವೇ  ಜನರ ಗಮನ ಸೆಳೆದಿದ್ದಾರೆ.  ಆಕೆ ಮಹಾನ್ ನಟಿ ಮಾತ್ರವಲ್ಲ ಆಕರ್ಷಕ ಸೌಂದರ್ಯ ಕೂಡ ಹೊಂದಿದ್ದಾರೆ. ಹಾಗಾಗಿ ಅವರ ಸೌಂದರ್ಯದ ರಹಸ್ಯವನ್ನು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಹಾಗಾಗಿ  ತೃಪ್ತಿ ದಿಮ್ರಿ ಇತ್ತೀಚೆಗಷ್ಟೇ ತಮ್ಮ ಸೌಂದರ್ಯದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಅವರ ಸೌಂದರ್ಯದ ಕೆಲವು ರಹಸ್ಯಗಳನ್ನು ತಿಳಿದುಕೊಳ್ಳೋಣ.

Tripti Dimri

ತೃಪ್ತಿ ಡಿಮ್ರಿ ಅವರು ತಮ್ಮ ಚರ್ಮವನ್ನು ಆರೈಕೆ ಮಾಡಲು  ಪ್ರತಿದಿನ ಕೆಲವು  ಕ್ರಮಗಳನ್ನು ಅನುಸರಿಸುತ್ತಾರೆ. ಮೊದಲನೆಯದಾಗಿ ತೃಪ್ತಿ ಅವರು ಬೆಳಿಗ್ಗೆ ತನ್ನ ಮುಖಕ್ಕೆ ಕ್ಲೆನ್ಸರ್ ಅನ್ನು ಬಳಸುತ್ತಾರೆ. ಇದು ಅವರ ಚರ್ಮ ತೇವಭರಿತವಾಗುವಂತೆ ಮಾಡುತ್ತಾರೆ ಮತ್ತು ಕಲ್ಮಶಗಳನ್ನು ನಿವಾರಿಸುತ್ತದೆ ಎಂಬುದಾಗಿ ನಟಿ ತಿಳಿಸಿದ್ದಾರೆ.

ತೃಪ್ತಿ ಅವರು  ತಮ್ಮ  ಮುಖಕ್ಕೆ ಪ್ರತಿದಿನ  ವಿಟಮಿನ್ ಸಿ ಸೀರಮ್ ಹಚ್ಚುತ್ತಾರೆ. ಇದು ಅವರ ಚರ್ಮದ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮವನ್ನು ಆರೋಗ್ಯವಾಗಿಡುತ್ತದೆ. ಹಾಗೇ ಅವರು ರಾಸಾಯನಿಕಗಳನ್ನು ಒಳಗೊಂಡಿರುವ ಯಾವುದೇ ಸ್ಕಿನ್ ಕೇರ್ ಪ್ರೊಡಕ್ಟ್‌ಗಳನ್ನು  ಬಳಸುವುದಿಲ್ಲ ಎಂದು ಹೇಳಿದ್ದಾರೆ.

Tripti Dimri

ನಟಿ ಮುಖದ ಸೌಂದರ್ಯವನ್ನು ಹೆಚ್ಚಿಸಲು ಮುಖದ ಚರ್ಮಕ್ಕೆ ಐಸ್ ಕ್ಯೂಬ್‍ಗಳಿಂದ ಮಸಾಜ್ ಮಾಡುತ್ತಾರೆ. ಯಾಕೆಂದರೆ ಇದು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ನಟಿ ತೃಪ್ತಿ ಮಾಯಿಶ್ಚರೈಸರ್ ಅನ್ನು ಬಳಸುತ್ತಾರಂತೆ. ಇದು ಅವರ ಚರ್ಮವನ್ನು ಮೃದುವಾಗಿರಿಸುತ್ತದೆ. ಹಾಗಾಗಿ ಮಾಯಿಶ್ಚರೈಸರ್ ಹಚ್ಚುವುದನ್ನು ಅವರು ತಪ್ಪಿಸುವುದಿಲ್ಲ ಎಂದಿದ್ದಾರೆ.

ನಟಿ ತೃಪ್ತಿ ಅವರು  ಮುಖಕ್ಕೆ ಸನ್ ಸ್ಕ್ರೀನ್ ಹಚ್ಚದೇ ಮನೆಯಿಂದ ಹೊರಗೆ ಹೋಗುವುದಿಲ್ಲ.  ಸನ್‍ಸ್ಕ್ರೀನ್ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ಅವರು ಎಸ್‍ಪಿಎಫ್ ಸನ್‍ಸ್ಕ್ರೀನ್‍ಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.

Tripti Dimri

ಅಷ್ಟೇ ಅಲ್ಲದೆ ನಟಿ ಚರ್ಮದ ಆರೋಗ್ಯಕ್ಕಾಗಿ, ಸಾಕಷ್ಟು ನೀರನ್ನು  ಕುಡಿಯುತ್ತಾರೆ, ಮತ್ತು ಸಾಕಷ್ಟು ನಿದ್ರೆ ಮಾಡುತ್ತಾರೆ. ಉತ್ತಮ ನಿದ್ರೆ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ಬೇಗ ವಯಸ್ಸಾಗುವುದನ್ನು ತಡೆಯುತ್ತದೆ ಎಂದಿದ್ದಾರೆ.

ಹಾಗೇ ಅವರು ಮಲಗುವ ಮುನ್ನ ತಮ್ಮ ಚರ್ಮಕ್ಕೆ ರೆಟಿನಾಲ್ ಅನ್ನು ಬಳಸುತ್ತಾರೆ. ಅದು ಅವರ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಹಾಗೇ ರಾತ್ರಿ ವೇಳೆ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುತ್ತಾರೆ. ಅದು ಚರ್ಮವನ್ನು ಆಳವಾಗಿ ಪುನರ್ಯೌವನಗೊಳಿಸುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಬ್ರಾ ಮಾತ್ರ ಧರಿಸಿ, ಇದೇ ನನ್ನ ಶರ್ಟ್‌ ಎಂದು ವಾದಿಸಿದ ನಟಿ! ಅಪ್ಪ ಸಿಡಿಮಿಡಿ; ವಿಡಿಯೊ ನೋಡಿ

ಪ್ರತಿದಿನ ಈ ಸರಳ ದಿನಚರಿಯನ್ನು ಫಾಲೋ ಮಾಡುವ ಮೂಲಕ ತೃಪ್ತಿ ದಿಮ್ರಿ ತನ್ನ ಸುಂದರ ಚರ್ಮವನ್ನು ಕಾಪಾಡಿಕೊಳ್ಳುತ್ತಾರೆ ಎಂಬುದಾಗಿ ಅಭಿಮಾನಿಗಳಿಗೆ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.