Trisha: ನಟ ವಿಜಯ್ ಜತೆಗಿನ ಫೋಟೊ ಹಂಚಿಕೊಂಡ ತ್ರಿಶಾ; ಡೇಟಿಂಗ್ ರೂಮರ್‌ಗೆ ಬಂತು ರೆಕ್ಕೆಪುಕ್ಕ
ಇತ್ತೀಚೆಗಷ್ಟೇ ನಟಿ ತ್ರಿಶಾ ಕೃಷ್ಣನ್ ಮತ್ತು ನಟ ದಳಪತಿ ವಿಜಯ್ ಒಟ್ಟಿಗೆ ಕಾಣಿಸಿಕೊಂಡಿದ್ದು ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ನಟಿ ತ್ರಿಶಾ ಮತ್ತು ನಟ ವಿಜಯ್ ಯಾವ ಪ್ರತಿಕ್ರಿಯೆ ಸಹ ನೀಡಿರಲಿಲ್ಲ. ಈ ಮಧ್ಯೆ ತ್ರಿಶಾ ಇದೀಗ ವಿಜಯ್ ಹುಟ್ಟುಹಬ್ಬಕ್ಕೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಅಪ್‌ಲೋಡ್ ಮಾಡಿ ವದಂತಿಗೆ ಪುಷ್ಟಿ ನೀಡಿದ್ದಾರೆ.

Trisha

ಚೆನ್ನೈ: ನಟ ದಳಪತಿ ವಿಜಯ್ ಇತ್ತೀಚೆಗೆ ಸಿನಿಮಾ ಕ್ಷೇತ್ರಕ್ಕಿಂತಲೂ ರಾಜಕೀಯ ಮತ್ತು ವೈಯಕ್ತಿಕ ವಿಚಾರದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಜೂನ್ 22ರಂದು ಅವರು ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಶುಭ ಕೋರಿದ್ದಾರೆ. ಜತೆಗೆ ಬಹುಭಾಷಾ ನಟಿ ತ್ರಿಶಾ ಕೂಡ ಶುಭಾಶಯ ಕೋರಿದ್ದು, ವಿಶೇಷವಾಗಿ ಗಮನ ಸೆಳೆದಿದೆ. ಸದ್ಯ ಇವರ ಪೋಸ್ಟ್ ಕಂಡು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ನಟ ವಿಜಯ್ ಅವರ ಅಪರೂಪದ ಫೋಟೊವನ್ನು ತ್ರಿಶಾ ಹಂಚಿಕೊಂಡಿದ್ದಾರೆ. ಇವರು ಡೇಟಿಂಗ್ ನಡೆಸಿತ್ತಿದ್ದಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಈ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ನಟಿ ತ್ರಿಶಾ ಕೃಷ್ಣನ್ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಬಗ್ಗೆ ತ್ರಿಶಾ ಮತ್ತು ವಿಜಯ್ ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಅದಾಗ್ಯೂ ತ್ರಿಶಾ ಇದೀಗ ವಿಜಯ್ ಹುಟ್ಟುಹಬ್ಬಕ್ಕೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ತ್ರಿಶಾ ಅವರ ಸಾಕು ನಾಯಿ ಜತೆ ನಟ ವಿಜಯ್ ಪೋಸ್ ನೀಡರುವ ಫೋಟೊ ಇದಾಗಿದೆ. ಇದೇ ಫೋಟೊದಲ್ಲಿ ತ್ರಿಶಾ ಯೆಲ್ಲೊ ಕಲರ್ ವೆಸ್ಟರ್ನ್ ಔಟ್ ಫಿಟ್‌ನಲ್ಲಿ ಆಕರ್ಷಕವಾಗಿ ಕಂಡಿದ್ದಾರೆ. ಹುಟ್ಟುಹಬ್ಬದ ವಿಶ್ ಮಾಡಿ, ಅಪ್ಪಿಕೊಳ್ಳುವ ಇಮೋಜಿಗಳನ್ನು ತ್ರಿಶಾ ಬಳಸಿದ್ದಾರೆ.
ಈ ಫೋಟೊ ಕಂಡು ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಇಬ್ಬರು ಒಳ್ಳೆ ಜೋಡಿ. ಬೇಗ ಶುಭ ಸುದ್ದಿ ಕೊಡಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ರೀಲ್ ಜೋಡಿ, ರಿಯಲ್ ಲೈಫ್ ಜೋಡಿ ಆಗುವುದನ್ನು ನೋಡಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: Kothalavadi Movie: ಯಶ್ ತಾಯಿ ನಿರ್ಮಾಣದ ಮೊದಲ ಚಿತ್ರ 'ಕೊತ್ತಲವಾಡಿ' ರಿಲೀಸ್ ಡೇಟ್ ಅನೌನ್ಸ್
ತ್ರಿಶಾ ಮತ್ತು ವಿಜಯ್ ಆನ್‌ಸ್ಕ್ರೀನ್‌ನಲ್ಲಿ ಜನಪ್ರಿಯ ಜೋಡಿಯಾಗಿದ್ದು, ʼಗಿಲ್ಲಿʼ ಮತ್ತು ʼಲಿಯೋʼ ಮುಂತಾದ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ʼದಿ ಗೋಟ್ʼ ಸಿನಿಮಾದಲ್ಲಿ ತ್ರಿಶಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಜಯ್ 1999ರಲ್ಲಿ ಸಂಗೀತಾಳನ್ನು ವಿವಾಹವಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ (ಸಂಜಯ್ ಮತ್ತು ದಿವ್ಯಾ). ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡುತ್ತಾರೆ ಎನ್ನವ ವದಂತಿಯೂ ಹಬ್ಬಿದ್ದು, ತ್ರಿಶಾ ಜತೆ ವೈವಾಹಿಕ ಜೀವನ ನಡೆಸಲಿದ್ದಾರೆ ಎಂಬ ಗಾಳಿಸುದ್ದಿಯೂ ಇದೆ.