ಸಾಮಾನ್ಯವಾಗಿ ಬಿಗ್ ಬಾಸ್ (Bigg Boss) ಮನೆಯಲ್ಲಿ ದಿನ ಕಳೆದಂತೆ ಸ್ಪರ್ಧಿಗಳು ಇತರೆ ಸ್ಪರ್ಧಿಗಳನ್ನು ಅರ್ಥ ಮಾಡಿಕೊಂಡು ಮನೆಯಲ್ಲಿ ತಮ್ಮದೇ ಗೇಮ್ ಪ್ಲ್ಯಾನ್ ರೂಪಿಸುತ್ತಾರೆ. ಕ್ರಮೇಣ ಟಾಸ್ಕ್ ಬಿಟ್ಟು ಇತರೆ ಜಗಳಗಳು ಕಡಿಮೆ ಆಗುತ್ತಾ ಹೋಗುತ್ತದೆ. ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್ 11 ಇವೆಲ್ಲದಕ್ಕೂ ವಿರುದ್ಧವಾಗಿದೆ. ಶೋ ಆರಂಭವಾದಾಗಿನಿಂದ ಶುರುವಾದ ಜಗಳ, ಮನಸ್ತಾನ ಇನ್ನೂ ನಿಂತಿಲ್ಲ. ಹಿಂದೆ ನಡೆದ ಘಟನೆಯನ್ನು, ಅಂದು ಆಡಿದ ಮಾತನ್ನೇ ಹೇಳಿ ಹೇಳಿ ಜಗಳ ಮಾಡುತ್ತಿದ್ದಾರೆ.
ಸೋಮವಾರದ ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆಯಿಂದ ಹಂಸ ಪ್ರತಾಪ್ ಹೊರಹೋದರು. ಇವರ ನಿರ್ಗಮನದ ಬಳಿಕ ಮನೆ ಮತ್ತೊಮ್ಮೆ ರಣರಂಗವಾಯಿತು. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ದೊಡ್ಡ ಮಾತಿನ ಚಕಮಕಿ ನಡೆಯಿತು. ಇದು ಇಂದು ಕೂಡ ಮುಂದುವರೆದಿದೆ. ತ್ರಿವಿಕ್ರಮ್ ಹಾಗೂ ಐಶ್ವರ್ಯಾ ನಡುವೆ ಯಾರು ಕ್ಯಾಪ್ಟನ್ ಆಗಲು ಅರ್ಹರು ಎಂಬ ಪ್ರಶ್ನೆ ಬಂದಾಗ ಮಾನಸಾ ಜೊತೆ ಹೆಚ್ಚಿನವರು ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದಿದ್ದಾರೆ.
ಮೋಕ್ಷಿತಾ ಹೇಳಿದ್ದೇನು?:
ಕ್ಯಾಪ್ಟನ್ಗಳ ಬಗ್ಗೆ ಬಿಗ್ ಬಾಸ್ ಒಂದು ಟಾಸ್ಕ್ ಅನ್ನ ಕೊಟ್ಟಿದ್ದಾರೆ. ಯಾರು ಅನರ್ಹರು ಅನ್ನೋದೇ ಈ ಒಂದು ಟಾಸ್ಕ್ ಆಗಿದೆ. ಇದರಲ್ಲಿ ಹೆಚ್ಚಾಗಿ ತ್ರಿವಿಕ್ರಮ್ ಹೆಸರು ಕೇಳಿ ಬಂದಿದೆ. ಈ ಹಿಂದಿನ ಪೋಸ್ಟರ್ ಟಾಸ್ಕ್ನಲ್ಲಿ ತ್ರಿವಿಕ್ರಮ್ ತುಂಬಾನೆ ಅಗ್ರೇಷನ್ನಲ್ಲಿಯೇ ಆಡಿದ ವಿಚಾರವನ್ನು ಮನೆಮಂದಿ ಮತ್ತೆ ಎತ್ತಿದ್ದಾರೆ. ಮೋಕ್ಷಿತಾ ಪೈ ಅವರು, ಕ್ಯಾಪ್ಟನ್ ಆಗಿ ಎಲ್ಲರನ್ನು ಒಂದೇ ರೀತಿ ನೋಡಬೇಕು. ರೂಲ್ ಈಸ್ ಈ ರೂಲ್, ಇವನ್ ಫಾರ್ ಅ ಫೂಲ್ ಅಂತ ಹೇಳ್ತಾರೆ. ಕ್ಯಾಪ್ಟನ್ ಆಗಲು ತ್ರಿವಿಕ್ರಮ್ಗೆ ಅರ್ಹತೆ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಮೋಕ್ಷಿತಾ ಆಡಿದ ಮಾತು ಕೇಳಿದ ತ್ರಿವಿಕ್ರಮ್ ತಮ್ಮದೇ ಒಂದು ಎಕ್ಸಪ್ರೆಷನ್ ಕೊಟ್ಟರು. ಜೊತೆಗೆ ಅಯ್ಯಯ್ಯೋ ಅಯ್ಯಯ್ಯೋ ಎಂದು ಹೇಳಿದ್ದಾರೆ.
ಕೆಂಡದ ಹೊಂಡವಾಯ್ತಾ ಕ್ಯಾಪ್ಟನ್ಸಿಯ ಹಾದಿ?
— Colors Kannada (@ColorsKannada) October 29, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/PJSwAV1LjQ
ಇನ್ನು ಉಗ್ರಂ ಮಂಜು ಸೇರಿದಂತೆ ಧರ್ಮ ಕೀರ್ತಿರಾಜ್ ಕೂಡ ತ್ರಿವಿಕ್ರಮ್ ಅವರನ್ನು ವಿರೋಧಿಸಿದರು. ಧರ್ಮ ಮಾತನಾಡಿ, ನೀವು ಇಲ್ಲಿದೆ ಬಂದ ಉದ್ದೇಶ ಮರೆತು ಆಟದಲ್ಲಿ ಅಗ್ರೆಸ್ಸಿವ್ನೆಸ್ ತೋರಿಸಿದ್ದೀರಿ ಎಂದು ಹೇಳಿದ್ದಾರೆ. ಉಗ್ರಂ ಮಂಜು ಮಾತನಾಡಿ, ನೋಡಿಕೊಂಡು ಕುಕ್ಕಿದೆ ಅಂತ ಹೇಳ್ತಾರೆ, ಎತ್ತುಹಾಕಿದ್ದು ಏನು ಎತ್ತ ಅಂತ ಎಲ್ಲರೂ ನೋಡಿದ್ದಾರೆ ಎಂದಿದ್ದಾರೆ. ಚೈತ್ರಾ ಕುಂದಾಪುರ ಅವರು ಐಶ್ವರ್ಯ ಹೆಸರು ತೆಗೆದುಕೊಂಡಿದ್ದಾರೆ.