ಬಿಗ್ ಬಾಸ್ (Bigg Boss Kannada 11) ರಿಯಾಲಿಟಿ ಶೋ ತನ್ನದೇ ಆದ ಒಂದಿಷ್ಟು ಕಠಿಣ ನಿಯಮಗಳನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯವಾದ ರೂಲ್ಸ್ ಎಂದರೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ವರೆಗೆ ಆ ಸ್ಪರ್ಧಿ ನಾನು ಬಿಗ್ ಬಾಸ್ಗೆ ಹೋಗುತ್ತಿದ್ದೇನೆ ಎಂದು ಎಲ್ಲೂ ಹೇಳುವ ಹಾಗಿಲ್ಲ. ಅಂದರೆ ಸ್ಪರ್ಧಿಯ ಹೆಸರು ಇಲ್ಲೂ ಲೀಕ್ ಮಾಡುವಂತಿಲ್ಲ. ಸಾಮಾಜಿಕ ತಾಣಗಳಲ್ಲಿ ಕೆಲವು ಹೆಸರು ಹರಿದಾಡುತ್ತಾ ಇರುತ್ತದೆ. ಆದರೆ, ಅಧಿಕೃತವಾಗಿ ಯಾರೂ ಎಲ್ಲೂ ಹೇಳುವಂತಿಲ್ಲ. ಆದರೆ, ಇದೀಗ ಮನೆಯೊಳಗೆ ಇರುವ ಸ್ಪರ್ಧಿ ತ್ರಿವಿಕ್ರಮ್ ಆಡಿರುವ ಮಾತು ಸಂಚಲನ ಸೃಷ್ಟಿಸಿದೆ.
ಸ್ಪರ್ಧಿಗಳ ಲಿಸ್ಟ್ ಬಂದ್ಮೇಲೆ ನಾನು ಈ ಶೋಗೆ ಬರಲು ಓಕೆ ಹೇಳಿದ್ದು ಎಂದು ಬಿಗ್ ಬಾಸ್ ಮನೆಯಲ್ಲೇ ತ್ರಿವಿಕ್ರಮ್ ಹೇಳಿದ್ದಾರಂತೆ. ಈ ಒಂದು ಮಾತಿನಿಂದ ತ್ರಿವಿಕ್ರಮ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೌತಮಿ ಜಾಧವ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಅವರು ತ್ರಿವಿಕ್ರಮ್ ಈ ರೀತಿ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ನಿಜವೇ ಆಗಿದ್ದರೆ ಬಿಗ್ ಬಾಸ್ ಕಾರ್ಯಕ್ರಮದ ಬಹುದೊಡ್ಡ ನಿಯಮ ಮುರಿದಂತಾಗುತ್ತದೆ
ಎಲಿಮಿನೇಷನ್ನಿಂದ ಪಾರಾಗಿ ವಾಪಸ್ ಬಂದಮೇಲೆ ತ್ರಿವಿಕ್ರಮ್ ವಿರುದ್ಧ ಮೋಕ್ಷಿತಾ ಪೈ ಸಿಡಿದೆದ್ದಿದ್ದರು. ಈ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಈ ವಿಚಾರ ಬಂದಿದೆ. ಬರುವ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಈ ವಿಚಾರವಾಗಿ ಮಾತನಾಡುವುದು ಖಚಿತ. ಏಕೆಂದರೆ ಇಲ್ಲಿ ಬಿಗ್ ಬಾಸ್ ನಿಯಮದ ಪ್ರಸ್ತಾವನೆ ಬಂದಿದ್ದು, ಹೀಗಾಗಿ ಸುದೀಪ್ ಮಧ್ಯ ಪ್ರವೇಶಿಸಬಹುದು.
ತ್ರಿವಿಕ್ರಮ್ ಎಲ್ಲ ಸ್ಪರ್ಧಿಗಳ ಇನ್ಸ್ಟಾ ಅಕೌಂಟ್ ನೋಡಿ ಬಂದಿದ್ದರು: ಈ ಗಲಾಟೆ ಮಧ್ಯೆ ಮೋಕ್ಷಿತಾ ಅವರು ಕೆಲವು ವಿಚಾರ ಬಾಯಿಬಿಟ್ಟಿದ್ದಾರೆ. ತ್ರಿವಿಕ್ರಮ್ ಅವರು ನಮ್ಮೆಲ್ಲರ ಇನ್ಸ್ಟಾಗ್ರಾಮ್ ಅಕೌಂಟ್ ನೋಡಿ, ಅವರಿಗೆ ಎಷ್ಟೆಲ್ಲ ಫಾಲೋವರ್ಸ್ ಇದ್ದಾರೆಂದು ತಿಳಿದು ಒಳಗೆ ಬಂದಿದ್ದಾರಂತೆ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ, ಈ ಬಾರಿ ಯಾರೆಲ್ಲ ಬಿಗ್ ಬಾಸ್ಗೆ ಬರುತ್ತಾರೆ ಎಂಬುದು ಗೊತ್ತಾಗ ನಂತರವೇ ನಾನು ಇಲ್ಲಿಗೆ ಬರಲು ಒಪ್ಪಿದ್ದು ಎಂಬರ್ಥದಲ್ಲಿ ತ್ರಿವಿಕ್ರಮ್ ಮಾತನಾಡಿದ್ದರು. ಆಗ ಲಿಸ್ಟ್ ನಿಮಗೆ ಮೊದಲೇ ಗೊತ್ತಿತ್ತಾ ಎಂದು ಮೋಕ್ಷಿತಾ ಹಾಗೂ ಗೌತಮಿ ಅವರು ಮರುಪ್ರಶ್ನೆ ಮಾಡಿದ್ದರು. ನಾನು ತಿಳಿದುಕೊಂಡೇ ಬಂದಿದ್ದು ಎಂದು ತ್ರಿವಿಕ್ರಮ್ ಹೇಳಿದ್ದಾರೆ.
BBK 11: ಮೋಕ್ಷಿತಾ ಪೈ ಅತಿರೇಕದ ವರ್ತನೆ: ಮುಗ್ಧ ಹನುಮಂತನ ಮೇಲೆಯೂ ಸಿಟ್ಟು