ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಮನೆಯ ಸದಸ್ಯರು ಎರಡು ತಂಡಗಳಾಗಿ ವಿಂಗಡನೆ ಆಗಿದ್ದು, ಟಿವಿ ಚಾನೆಲ್ ಟಾಸ್ಕ್ ನೀಡಲಾಗಿತ್ತು. ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಒಂದು ತಂಡದಲ್ಲಿದ್ದರೆ, ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಮತ್ತೊಂದು ತಂಡದಲ್ಲಿದ್ದಾರೆ.
ಮೊದಲ ದಿನ ನ್ಯೂಸ್ ರೀಡಿಂಗ್ ಮತ್ತು ಅಡುಗೆ ಮಾಡುವ ಟಾಸ್ಕ್ಗಳನ್ನು ನೀಡಲಾಗಿತ್ತು. ಬಳಿಕ ಒಂದು ವಾಹಿನಿಯ ತಂಡ, ಇನ್ನೊಂದು ವಾಹಿನಿಗೆ ಸವಾಲು ನೀಡುವ ಟಾಸ್ಕ್ ನೀಡಲಾಗಿದೆ. ಈ ಸವಾಲನ್ನು ಒಪ್ಪಿಕೊಂಡು, ಟಾಸ್ಕ್ ಮುಗಿಸಿದರೆ ತಂಡಕ್ಕೆ ಒಂದು ಪಾಯಿಂಟ್ ಸಿಗುತ್ತದೆ. ಈ ಟಾಸ್ಕ್ ವೇಳೆ ಮಂಜು ಅವರು ರಜತ್‌ಗೆ ತಲೆ ಬೋಳಿಸಿಕೊಳ್ಳುವ ಸವಾಲು ನೀಡಿದ್ದರು. ಸವಾಲನ್ನು ಒಪ್ಪಿಕೊಂಡ ರಜತ್ ತಲೆ ಬೋಳಿಸಿಕೊಂಡಿದ್ದರು.
ಇದೀಗ ತ್ರಿವಿಕ್ರಮ್ ಸರದಿ. ರಜತ್ ಟೀಮ್ ತ್ರಿವಿಕ್ರಮ್ಗೆ ನೇರವಾದ ಸವಾಲ್ ಹಾಕಿದೆ. ಅದುವೆ ಕೂದಲು, ಮೀಸೆ ಹಾಗೂ ಗಡ್ಡವನ್ನು ಬೋಳಿಸಿಕೊಳ್ಳಬೇಕು ಅಂತ. ಆದರೆ ಅದಕ್ಕೆ ತ್ರಿವಿಕ್ರಮ್ ತಲೆ ಕೂದಲನ್ನು ಮಾತ್ರ ಬೋಳಿಸೋದಾಗಿ ಹೇಳಿದ್ದಾರೆ. ತ್ರಿವಿಕ್ರಮ್ ಅವರಿಗೆ ಹನುಮಂತು ತಲೆ ಮೀಸೆ ಹಾಗೂ ಗಡ್ಡವನ್ನ ಬೋಳಿಸಬೇಕು ಎಂಬ ಸವಾಲನ್ನು ನೀಡುತ್ತಾರೆ. ಆದರೆ, ಈ ಸವಾಲನ್ನು ಚೇಂಜ್ ಮಾಡಬೇಕು ಎಂದಾಗ ಐಶ್ವರ್ಯ ಅವರ ಬೆನ್ನಿನ ಮೇಲೆ ಭವ್ಯ ಅವ್ರು ನಿಂತುಕೊಳ್ಳಬೇಕು ಎಂದು ಹೇಳುತ್ತಾರೆ.
ಇದೇ ವಿಚಾರವಾಗಿ ಎರಡು ಟೀಮ್ಗಳ ನಡುವೆ ಜಗಳ ನಡೆಯುತ್ತದೆ. ಬಳಿಕ ಮತ್ತೊಮ್ಮೆ ಸವಾಲು ಬದಲಾಯಿಸಿ ತ್ರಿವಿಕ್ರಮ್ ತಲೆ ಕೂದಲನ್ನು ಮಾತ್ರ ಬೋಳಿಸೋದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ಮತ್ತೊಂದು ತಂಡ ಒಪ್ಪಲಿಲ್ಲ. ಅಂತಿಮವಾಗಿ ಏನಾಗುತ್ತೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದುಬರಬೇಕಿದೆ.
ಇನ್ನು ಇದೇ ಸವಾಲು ಟಾಸ್ಕ್ನಲ್ಲಿ ಶಿಶಿರ್ ಅವರು ಐಶ್ವರ್ಯಾ ಅವರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಇದಕ್ಕೆ ಯೆಸ್ ಎಂದು ಐಶ್ವರ್ಯಾ ಈ ಸವಾಲು ಸ್ವೀಕರಿಸಿದ್ದಾರೆ. ಕಷ್ಟಪಟ್ಟು ಹಾಗಲಕಾಯಿ ತಿನ್ನುವ ಪ್ರಯತ್ನ ಮಾಡಿದ್ದಾರೆ. ಆದರೆ, ಸಂಪೂರ್ಣವಾಗಿ ತಿನ್ನಲು ಆಗಲಿಲ್ಲ. ಅದೇ ರೀತಿ ಗೌತಮಿಗೆ ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿದೆ. ಮೆಣಸಿನಕಾಯಿ ತಿಂದ ಗೌತಮಿ ನೆಲಕ್ಕೆ ಬಿದ್ದು ಹೊರಳಾಡಿ ಕಣ್ಣೀರು ಇಟ್ಟಿದ್ದಾರೆ.
BBK 11: ಶಿಶಿರ್ನ ಹೆಣ್ಮಕ್ಕಳ ಹಿಂದೆ ತಿರುಗೋ ಜೊಲ್ಲ ಅಂದ್ರಾ ಚೈತ್ರಾ?: ತ್ರಿವಿಕ್ರಮ್ ಶಾಕಿಂಗ್ ಸ್ಟೇಟ್ಮೆಂಟ್