ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸ್ಪರ್ಧಿಗಳಿಗೆ ಹೊಸ ಹೊಸ ಬಗೆಯ ವಿಶೇಷ ಟಾಸ್ಕ್ ನೀಡಲಾಗುತ್ತಿದೆ. ಇದರ ನಡುವೆ ಮನೆಗೆ ವಿಶೇಷ ಅತಿಥಿಗಳ ಆಗಮನವಾಗಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ರಾಮಚಾರಿ ಖ್ಯಾತಿಯ ರಾಮಚಾರಿ (ರಿತ್ವಿಕ್ ಕೃಪಾಕರ್) ಮತ್ತು ಚಾರು (ಮೌನ ಗುಡ್ಡೇಮನೆ) ದೊಡ್ಮನೆಗೆ ಅತಿಥಿಗಳಾಗಿ ಎಂಟ್ರಿ ನೀಡಿದ್ದಾರೆ. ಇದರಲ್ಲಿ ಟ್ವಿಸ್ಟ್ ಎಂದರೆ ಬಿಗ್ ಬಾಸ್ ಮನೆಯ ಇತರೆ ಜೋಡಿಗಳ ಹಾಗೆ ರಾಮಾಚಾರಿ – ಚಾರುಲತಾ ಸಹ ಬೆಲ್ಟ್ ಧರಿಸಿಕೊಂಡಿದ್ದಾರೆ.
ಇವರು ಇರುವಾಗಲೇ ಮನೆಯ ಸದಸ್ಯರಿಗೆ ಬಿಗ್ ಬಾಸ್ ಸರ್ಪ್ರೈಸ್ ಕೊಟ್ಟಿದ್ದಾರೆ. ಎಲ್ಲ ಸದಸ್ಯರ ಬಾಲ್ಯದ ನೆನಪುಗಳನ್ನು ಮರುಕಳಿಸಿದ್ದಾರೆ. ಬಿಗ್ಬಾಸ್, ಎಲ್ಲ ಸದಸ್ಯರ ಬಾಲ್ಯದ ಚಿತ್ರಗಳನ್ನು ತೋರಿಸಿ ಯಾರೆಂದು ಊಹಿಸುವಂತೆ ಇತರರಿಗೆ ಸೂಚಿಸಿದ್ದರು. ಎಲ್ಲರೂ ಖುಷಿಯಿಂದ ಟಾಸ್ಕ್ನಲ್ಲಿ ಭಾಗಿಯಾಗಿದ್ದಾರೆ. ಸಾಕಷ್ಟು ತಮಾಷೆಯ ಹಾಗೂ ಭಾವುಕ ಸನ್ನಿವೇಶಗಳು ಕೂಡ ಇಲ್ಲಿ ನಡೆದಿವೆ.
ಬಾಲಕನಾಗಿದ್ದಾಗ ತ್ರಿವಿಕ್ರಮ್ ಅವರು ತಂದೆಯ ಜೊತೆ ಇರುವ ಫೋಟೋವನ್ನ ಬಿಗ್ ಬಾಸ್ ಹಾಕಿದರು. ಇದನ್ನ ಕಂಡು ತಮ್ಮ ಜೀವನದ ಕಹಿ ಘಟನೆಯನ್ನ ತ್ರಿವಿಕ್ರಮ್ ಮೆಲುಕು ಹಾಕಿದ್ದಾರೆ. ಚಿಕ್ಕವನಾಗಿದ್ದಾಗ ನಾನು ಫ್ರೆಂಡ್ಸ್ ಜೊತೆ ಕಳೆದ ನೆನಪಿಲ್ಲ. ಯಾಕಂದ್ರೆ, ನನಗೆ ಕೈ ಫ್ರ್ಯಾಕ್ಚರ್ ಆಗಿತ್ತು. ನಾನು 2ನೇ ಕ್ಲಾಸ್‌ನಲ್ಲಿ ಇದ್ದೆ ಅನಿಸುತ್ತದೆ. ಅಟ್ಟದ ಮನೆಯಲ್ಲಿ ಮೊಟ್ಟೆ ತೆಗೆಯುವಾಗ ನಾನು ಬಿದ್ದೆ. ನನ್ನ ಕೈ ಕಟ್ ಆಗಿತ್ತು. ಡಾಕ್ಟರ್ ನೋಡಿ ಕೈ ಕಟ್ ಮಾಡಬೇಕು, ಏನೂ ಇಲ್ಲ ಅದರಲ್ಲಿ ಬಿಡಿ ಎಂದರು. ಆಗ ಡಾಕ್ಟರ್ ಮುಂದೆ ನನ್ನ ತಂದೆ ಕಾಲಿಗೆ ಬಿದ್ದಿದ್ದು ನನಗೆ ಈಗಲೂ ನೆನಪಿದೆ.
ಡಾಕ್ಟರ್ ಆಪರೇಷನ್ ಮಾಡಬೇಕು ಎಂದರು. ಆಪರೇಷನ್ ಮಾಡಿದ ನಂತರವೂ ನನ್ನ ಕೈ ವರ್ಕ್ ಆಗ್ತ್ತಿರಲಿಲ್ಲ. ಯಾಕಂದ್ರೆ, ಒಂದು ಮೇಜರ್ ನರ್ವ್ ಪಂಚರ್ ಆಗಿತ್ತು. ಹೀಗೆ ಒಟ್ಟು ಮೂರು ಆಪರೇಷನ್ ಮಾಡಿಸಿದ್ರು. ನನ್ನ ಕೈಯಲ್ಲಿ 2 ಬೆರಳುಗಳು ವರ್ಕ್ ಕೂಡ ವರ್ಕ್ ಆಗುತ್ತಿರಲಿಲ್ಲ ಎಂದಿದ್ದಾರೆ. ಆದರೆ, ಇದನ್ನೆಲ್ಲ ಮೆಟ್ಟಿನಿಂತ ತ್ರಿವಿಕ್ರಮ್ ಜಿಮ್ಗೆ ಸೇರಿ, ಧಾರಾವಾಹಿಯಲ್ಲಿ ನಟಿಸಿ ಇಂದು ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.
BBK 11: ನನ್ ಎಕ್ಕಡ ತಗೊಂಡ್ ನಾನೇ ಹೊಡ್ಕೋಬೇಕು, ಥೂ..: ಚೈತ್ರಾ ಮೇಲೆ ಕಡಿಮೆಯಾಗದ ಶಿಶಿರ್ ಕೋಪ