ತುಮಕೂರು: ನಟ ರವಿಚಂದ್ರನ್ ಅವರ ಪುತ್ರ ವಿಕ್ರಮ ನಟಿಸಿರುವ ಪ್ರೀತಿಯ ಪಯಣವನ್ನು ಆಧರಿಸಿದ ತ್ರಿವಿಕ್ರಮ ಚಲನಚಿತ್ರ ಜೂ.24ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿದ್ದು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡಿ, ಆಶೀರ್ವದಿಸುವಂತೆ ಚಿತ್ರದ ನಿರ್ದೇಶಕ ಸಹನಾಮೂರ್ತಿ ಮನವಿ ಮಾಡಿದ್ದಾರೆ.
ನಗರದ ಸ್ಯಾಂಡಲ್‌ವುಡ್ ಫಿಲ್ಮಂ ಇನ್ಸಿಟೂಟ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು,ಇದು ನನ್ನ ಮೂರನೇ ಸಿನಿಮಾವಾಗಿದ್ದು, ಮದ್ಯಮ ವರ್ಗದ ಯುವನೋರ್ವ ಪ್ರೀತಿಯ ಬೆಲೆಯಲ್ಲಿ ಸಿಲುಕಿದಾಗ ನಡೆಯುವ ಘಟನೆಗಳೇ ಕಥವಸ್ತುವಾಗಿದೆ.ವಿ.ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ಈ ಸಿನಿಮಾದ ನಾಯಕನಾಗಿದ್ದು, ನಾಯಕಿಯಾಗಿ ದೆಹಲಿ ಮೂಲದ ಆಕಾಂಕ್ಷ ಶರ್ಮ ನಟಿಸುತ್ತಿದ್ದಾರೆ. ರಾಜ್ಯದ 250ಕ್ಕೂ ಹೆಚ್ಚು ಟಾಕೀಸ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ತ್ರಿವಿಕ್ರಮ ಸಿನಿಮಾದಲ್ಲಿ ನುರಿತ ತ್ರಂತಜ್ಞರ,ಕಲಾವಿದರ ಬಳಗವಿದ್ದು, ಹಿರಿಯ ಕಲಾವಿದ ರಾದ ಸಾಧುಕೋಕಿಲ,ಚಿಕ್ಕಣ್ಣ, ಸುಚ್ಚೇಂದ್ರ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶಕನ, ಕವಿರಾಜ್, ಯೋಗರಾಜ್ ಭಟ್ ಅವರ ಸಾಹಿತ್ಯ ವಿದ್ದು,ಆರು ಹಾಡುಗಳನ್ನು ನೀಡಲಾಗಿದ್ದು, ಎಲ್ಲಾ ಹಾಡುಗಳ ಈಗಾಗಲೇ ಜನಮಾನಸದಲ್ಲಿ ಇವೆ ಎಂದು ಸಹನಾಮೂರ್ತಿ ತಿಳಿಸಿದರು.
ನಾಯಕನಟ ವಿಕ್ರಮ ಮಾತನಾಡಿ, ನನಗೆ ವಿಕ್ರಮ ಎಂದು ಹೆಸರಿಟ್ಟವರು ಡಾ.ರಾಜಕುಮಾರ್,ನನ್ನ ಮೊದಲ ಸಿನಿಮಾದ ಮೊದಲ ಶಾಟ್‌ಗೆ ಕ್ಲಾಪ್ ಮಾಡಿದ್ದು,ಡಾ.ಪುನಿತ್ ರಾಜಕುಮಾರ್, ಇತ್ತೀಚಿನ ನನ್ನ ಸಿನಿಮಾ ಪ್ರಿಮಿಯರ್ ವೀಕ್ಷಿಸಿ, ಬೆನ್ನುತಟ್ಟಿ ದವರು ಡಾ.ಶಿವರಾಜಕುಮಾರ್, ಹಾಗೆಯೇ ಚಿತ್ರರಂಗದ ಎಲ್ಲಾ ಗಣ್ಯರು ನನ್ನನು ಆರಸಿದ್ದಾರೆ. ಇದೊಂದು ಒಳ್ಳೆಯ ಪ್ರಯತ್ನ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಖಂಡಿತವಾಗಿ ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನಮ್ಮದು.ನಮ್ಮ ತಂದೆ, ತಾತ ಎಲ್ಲರೂ ಈಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ಮಾಡಿದವರು. ನಮ್ಮ ಸಿನಿಮಾಕ್ಕೆ ರಾಮ್‌ಕೋ ಸೋಮಣ್ಣ ಎಂಬುವರು ಹಣ ಹೂಡಿಕೆ ಮಾಡಿದ್ದಾರೆ. ನನ್ನ ಕೆರಿಯರ್‌ಗೆ ಒಂದು ಬ್ರೆಕ್ ನೀಡಬಲ್ಲ ಸಿನಿಮಾ ಇದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರನಟಿ ಆಕಾಂಕ್ಷ ಶರ್ಮ ಮಾತನಾಡಿ,ನನಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ, ಸಾಧ್ಯವಾದಷ್ಟು ಕನ್ನಡ ಕಲಿತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ. ಥೇಟರಿಗೆ ಬಂದು ಸಿನಿಮಾ ನೋಡಿ ಎಂದು ಕೇಳಿಕೊಂಡರು.
ಸಿನಿಮಾ ತಂಡ ಇದಕ್ಕೂ ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಸಿದ್ದಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ತುಮಕೂರು ವಿಶ್ವವಿದ್ಯಾಲಯ,ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜು,ಸ್ಯಾಂಡಲ್‌ವುಡ್ ಫಿಲ್ಮಂ ಇನ್ಸಿಟ್ಯೂಟ್ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾದ ಪ್ರಮೋಷನ್ ಕಾರ್ಯಕ್ರಮ ನಡೆಸಿತ್ತು. ಸಿನಿಮಾ ಹಾಡುಗಳಿಗೆ ಯುವಜನತೆ ಕುಣಿದು ಕುಪ್ಪಳಿಸಿದರು.ಈ ವೇಳೆ ಸಿನಿಮಾ ತಾರೆಯರೊಂದಿಗೆ ಸೆಲ್ಪಿಗಾಗಿ ಪ್ರೇಕಕರು ಮುಗಿಬಿದ್ದರು.