Monday, 18th November 2024

BBK 11: ಬಿಗ್ ಬಾಸ್ ಮನೆಯಲ್ಲಿ ಹೊತ್ತಿ ಉರಿದ ನಾಮಿನೇಷನ್ ಬೆಂಕಿ: ತಾರಕಕ್ಕೇರಿದ ಮಂಜು-ತ್ರಿವಿಕ್ರಮ್ ಗಲಾಟೆ

Trivikram Mokshitha and Ugramm Manju

ಎಂಟನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮನೆಯೊಳಗೆ ಹೊಸದಾಗಿ ಇಬ್ಬರು ಸ್ಪರ್ಧಿಗಳು ಶೋಭಾ ಶೆಟ್ಟಿ ಮತ್ತು ರಜತ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶಿಸಿದ್ದಾರೆ. ಇದರ ನಡುವೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದರೆ, ಈ ಬಾರಿಯ ನಾಮಿನೇಷನ್ ವೇಳೆ ಮನೆ ಹೊತ್ತಿ ಉರಿದಿದೆ. ಅದರಲ್ಲೂ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವಣ ಗಲಾಟೆ ತಾರಕಕ್ಕೇರಿದೆ.

ಮಡಿಕೆ ಒಡೆದು ನಾಮಿನೇಟ್ ಮಾಡುವ ಹೆಸರು ಸೂಚಿಸುವಂತೆ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಸೂಚಿಸಿದ್ದಾರೆ. ಈ ನಾಮಿನೇಷನ್​ ಪ್ರಕ್ರಿಯೆ ವೇಳೆ ಮಂಜು ಮತ್ತು ತ್ರಿವಿಕ್ರಮ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಪರ್ಸನಲ್​ ಟಾರ್ಗೆಟ್​ ಎಂದು ತ್ರಿವಿಕ್ರಮ್​ ಹೇಳಿದ್ರೆ, ಇನ್ನೊಬ್ಬರನ್ನು ತುಳಿದು ಮೇಲೆ ಬರುತ್ತಾರೆ ಎಂದು ಮಂಜು ಆರೋಪಿಸಿದ್ದಾರೆ. ರೊಚ್ಚಿಗೆದ್ದ ತ್ರಿವಿಕ್ರಮ್​ ದನಿ ಏರಿಸಿ ಮಾತನಾಡಲು ನಮಗೂ ಬರುತ್ತದೆ. ನೀವೇನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.

ಕೆಲಸ ಆಗೋವರೆಗೂ ಮಾತ್ರ ಅವರು ಕೆಲಸ ಆದ್ಮೇಲೆ ಅವನ್ಯಾರೋ ಗೊತ್ತಿಲ್ಲ ಎನ್ನುವಂತವರು ತ್ರಿವಿಕ್ರಮ್ ಎಂದು ಮಂಜು ಹೇಳಿದ್ದಾರೆ. ಇದಕ್ಕೆ ಎಲ್ಲರೂ ಕೂಡ ಅಷ್ಟೇನೇ ಎಂದು ತ್ರಿವಿಕ್ರಮ್ ಕೂಗಾಡಿದ್ದಾರೆ. ಒಟ್ಟಾರೆ ಇವರಿಬ್ಬರ ನಡುವೆ ಪ್ರತಿ ವಾರದಂತೆ ಈ ವಾರ ಕೂಡ ದೊಡ್ಡ ಜಗಳ ನಡೆದಿದೆ.

ಇನ್ನು ಇದೇ ನಾಮಿನೇಷನ್​ ಪ್ರಕ್ರಿಯೆಯಲ್ಲಿ ಮೋಕ್ಷಿತಾ ಪೈ ಅವರು, ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ​ಮಂಜಣ್ಣನ ಕೆಲವು ಮಾತುಗಳು ನನಗೆ ಕುಗ್ಗಿಸುತ್ತದೆ ಅಂತ ಹೇಳಿದ್ದಾರೆ. ಅದಕ್ಕೆ ಮಂಜಣ್ಣ ಇನ್ಮುಂದೆ ನನಗೆ ಅಣ್ಣ ಅಂತ ಕರಿಬೇಡ ಎಂದು ಹೇಳಿ ಮೋಕ್ಷಿತಾಗೆ ನಾಮಿನೇಟ್​ ಮಾಡಿದ್ದಾರೆ. ಇಷ್ಟು ದಿವಸ ಅಣ್ಣ ತಂಗಿಯಂತೆ ಇದ್ದವರು ಮೋಕ್ಷಿತಾ ಮತ್ತು ಉಗ್ರಂ ಮಂಜು. ಆದರೆ ಮಂಜು ಅವರನ್ನೇ ಮೋಕ್ಷಿತಾ ನಾಮಿನೇಟ್ ಮಾಡಿದ್ದು ಹೊಸ ತಿರುವು ನೀಡಿದಂತಿದೆ.

ಶೋಭಾ Vs ಗೌತಮಿ:

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದ ಶೋಭಾ ಹಾಗೂ ರಜತ್ ಅವರಿಗೆ ಇತರೆ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಬಿಗ್ ಬಾಸ್ ಕೊಟ್ಟಿದ್ದಾರೆ. ಜೊತೆಗೆ, ಕಾಯಿ ಒಡೆಯಬೇಕಿದೆ. ಈ ಸಂದರ್ಭ ಶೋಭಾ ಅವರು ಗೌತಮಿ ಜಾಧವ್ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ, ಗೌತಮಿ ಮನೆಯಲ್ಲಿ ಮುಖವಾಡ ಹಾಕಿಕೊಂಡಿದ್ದಾರೆ. ಅದನ್ನ ತೆಗೆದು ಬಿಸಾಕುವೆ ಅನ್ನೋ ಗತ್ತಿನಲ್ಲಿಯೇ ಶೋಭಾ ಡೈಲಾಗ್ ಹೊಡೆದಿದ್ದಾರೆ. ತೆಂಗಿನ ಕಾಯಿ ಒಡೆದು ಈ ಒಂದು ಮಾತು ಹೇಳಿದ್ದಾರೆ. ಈ ಒಂದು ಮಾತಿಗೆ ಗೌತಮಿ ಸೈಲೆಂಟ್ ರಿಯಾಕ್ಷನ್ ಕೊಟ್ಟಿದ್ದಾರೆ.

BBK 11: ಮನೆಯೊಳಗೆ ಕಾಲಿಟ್ಟ ದಿನವೇ ಬೆಂಕಿ ಹಚ್ಚಿದ ಶೋಭಾ ಶೆಟ್ಟಿ: ಏನಾಯಿತು?