Friday, 22nd November 2024

BBK 11: ಮುರಿದು ಬಿತ್ತು ಮಂಜು-ಗೌತಮಿ-ಮೋಕ್ಷಿತಾ ಫ್ರೆಂಡ್​ಶಿಪ್: ಏನು ಕಾರಣ?

Gowthami and Manju

ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಸ್ನೇಹ-ಪ್ರೀತಿ ಹುಟ್ಟಿಕೊಳ್ಳುವುದು ಕಾಮನ್. ಆದರೆ, ಅದನ್ನು ಉಳಿಸಿಕೊಳ್ಳುವುದು ದೊಡ್ಡ ಕಷ್ಟ. ಟಾಸ್ಕ್ ಮಧ್ಯೆ ಜಗಳ ನಡೆದಾಗ ಆ ಸ್ನೇಹಕ್ಕೆ ಕುತ್ತು ಬಂದಿರುವುದು ಈ ಹಿಂದೆ ಅನೇಕ ಬಾರಿ ನಾವು ಕಂಡಿದ್ದೇವೆ. ಅದರಂತೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲೂ ಮೂರು ಜನರ ಫ್ರೆಂಡ್​ಶಿಪ್ ಕೊನೆಗೊಂಡಿದೆ. ಆರಂಭದಿಂದಲೂ ಜೊತೆಯಾಗಿ ಉತ್ತಮ ಬಾಂಡಿಂಗ್ ಕಾಪಾಡಿಕೊಂಡು ಬಂದಿದ್ದ ಉಗ್ರಂ ಮಂಜು-ಗೌತಮಿ ಜಾಧವ್ ಹಾಗೂ ಮೋಕ್ಷಿತಾ ನಡುವಣ ಸ್ನೇಹದಲ್ಲಿ ಬಿರುಕು ಮೂಡಿದೆ.

ಮಂಜು-ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಫ್ರೆಂಡ್​ಶಿಪ್ ಮುರಿದು ಬೀಳಲು ಕಾರಣವಾಗಿದ್ದು ಬಿಗ್ ಬಾಸ್ ನೀಡಿರುವ ಒಂದು ಟಾಸ್ಕ್. ಚೆಂಡನ್ನು ಗೋಲ್​ಗೆ ತಳ್ಳುವ ಆಟದಲ್ಲಿ ಉಗ್ರಂ ಮಂಜು ಇನ್ನೊಂದು ತಂಡದ ಜೊತೆಗೆ ಕೈಜೋಡಿಸಿ ಗೆಳೆಯರಾದ ಗೌತಮಿ ಮತ್ತು ಮೋಕ್ಷಿತಾಗೆ ಕೈಕೊಟ್ಟಿದ್ದಾರೆ. ಇದು ಗೌತಮಿಗೆ ತೀವ್ರ ಸಿಟ್ಟು ತರಿಸಿರುವಂತೆ ಕಾಣುತ್ತಿದೆ.

ಬಿ ಪಾಸಿಟಿವ್​ ಎಂದು ಹೆಚ್ಚಾಗಿ ಪ್ರಬುದ್ಧತೆಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸುವ ಗೌತಮಿ ಅವರು ತಮ್ಮ ಅಸಮಧಾನ ಹೊರಹಾಕಿ, ನೀನು ಮಂಜಣ್ಣನ ಎಂಬ ಪ್ರಶ್ನೆ ಎದ್ದಿದೆ. ನಾವು ನೋಡಿದ ಮಂಜಣ್ಣ ಹೀಗೆ ಮಾಡುತ್ತಾ ಇರೋದು?, ಇನ್ನೊಬ್ಬರ ಸಹಾಯ ಬೇಕಾಗಿಲ್ಲ ನಿಮಗೆ, ನನ್ನ ಕೆಪಾಸಿಟಿ ಇಷ್ಟೇ ಎಂದು ನೀವೇ ತಿಳಿಸ್ತಾ ಇದ್ದೀರ ಎಂದು ಮಂಜು ಆಟದ ಬಗ್ಗೆ ದೂರಿದ್ದಾರೆ.

ಅತ್ತ ಮಂಜು ಅವರು ಮೂರ್ನಾಲ್ಕು ದಿನಗಳಿಂದ ಮಿಸ್​ ಹೊಡೆಯುತ್ತಿದೆ ಎಂದಾಗ ನಾವು ಆಡಿದ ಆಟ ಫೇರ್​ ಗೇಮ್​ ಅಲ್ಲ, ಬುದ್ಧಿವಂತರ ಆಟ ಎಂದು ಹೇಳಿದ್ದಾರೆ. ಆಗ ಜೋರಾಗಿ ಚಪ್ಪಾಳೆ ತಟ್ಟಿದ ಗೌತಮಿ, ನನ್ನ ಗೆಳೆಯ ಇಷ್ಟೊಂದು ಬುದ್ಧಿವಂತ ಅನ್ನೋದು ಗೊತ್ತಿರಲಿಲ್ಲ ನನಗೆ ಎಂದು ಭಾವುಕರಾಗಿದ್ದಾರೆ. ಸಮಾಧಾನ ಪಡಿಸಲು ಬಂದ ಮೋಕ್ಷಿತಾ ಅವರು, ಮಂಜು ಹೈಲೆಟ್​ ಆಗೋದಿಕ್ಕೆ ನೋಡುತ್ತಿದ್ದಾರೆ ಬಂದಾಗಿನಿಂದಲೂ. ನೀವು ಒಬ್ಬರೇ ಬಂದಿರೋದು, ನಿಮಗಾಗಿ ಅಷ್ಟೇ ಆಡಿ ಎಂದು ಹೇಳಿದ್ದಾರೆ.

ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಮನಸ್ಸುಗಳು ಹಾಳಾದಂತೆ ಕಾಣುತ್ತಿದೆ. ಮತ್ತೊಂದೆಡೆ ಗೌತಮಿ ಅವರು ಟಾಸ್ಕ್ ಮಧ್ಯೆ ಹನುಮಂತ ಮೇಲೆಯೂ ತಾಳ್ಮೆ ಕಳೆದುಕೊಂಡಿದ್ದಾರೆ. ಚೈತ್ರಾ ಕುಂದಾಪುರ ಕೂಡ ರೊಚ್ಚಿಗೆದ್ದಿದ್ದಾರೆ. ಮಂಜು – ಶಿಶಿರ್‌ ಫಿಕ್ಸಿಂಗ್ ಮಾಡಿಕೊಂಡು ಆಟವಾಡುತ್ತಿದ್ದಾರೆ ಅಂತ ಚೈತ್ರಾ ಕುಂದಾಪುರ ಹಾಗೂ ಗೌತಮಿ ಜಾಧವ್ ಸಿಡಿದೆದ್ದಿದ್ದಾರೆ.

BBK 11: ನಿಖರ ಫಲಿತಾಂಶ ನೀಡುವಲ್ಲಿ ಎಡವಿದ ಹನುಮಂತ?: ಸಿಡಿದೆದ್ದ ಚೈತ್ರಾ-ಗೌತಮಿ