Friday, 25th October 2024

ಟ್ವಿಟರ್‌ನಲ್ಲಿ ‘ಅನ್‌ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್

ಮುಂಬೈ: ಪ್ರಭಾಸ್​ ಅಭಿನಯದ ‘ಸಾಹೋ’ ಚಿತ್ರದ ಕ್ಲಿಪ್ಪಿಂಗ್​ ಒಂದಕ್ಕೆ ಸಿಡಿದೆದ್ದಿರುವ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ಅನ್‌ ಸಬ್‌ಸ್ಕ್ರೈಬ್ ನೆಟ್‌ಫ್ಲಿಕ್ಸ್’ ಟ್ರೆಂಡಿಂಗ್ ಶುರು ಮಾಡಿದ್ದಾರೆ.

ನೆಟ್‌ಫ್ಲಿಕ್ಸ್ ಇಂಡೋನೇಷ್ಯಾ ಖಾತೆಯಿಂದ ಹಂಚಿಕೊಂಡ ‘ಸಾಹೋ’ ಕ್ಲಿಪ್‌ನಿಂದ ಪ್ರಭಾಸ್ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ಈ ಕ್ಲಿಪ್ಪಿಂಗ್​ನಲ್ಲಿ ಇರುವುದು ಏನೆಂದರೆ, ನಾಯಕ ಪ್ರಭಾಸ್ ಸ್ಕೈಡೈವಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋ ದಲ್ಲಿ ತೋರಿಸಲಾಗಿದೆ. ಅಲ್ಲಿ ನಾಯಕ ಬಂಡೆಯಿಂದ ಒಂದು ಚೀಲವನ್ನು ಕೆಳಕ್ಕೆ ಎಸೆಯುತ್ತಾರೆ. ನಂತರ ಧುಮುಕಿ ಆ ಚೀಲ ವನ್ನು ಹಿಡಿದುಕೊಳ್ಳುತ್ತಾರೆ, ನಂತರ ಆ ಚೀಲವು ಪ್ಯಾರಾಚೂಟ್​ ರೂಪದಲ್ಲಿ ತೆರೆದು ಕೊಳ್ಳುತ್ತದೆ. ಈ ಮೂಲಕ ನಾಯಕ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಗುತ್ತಾನೆ.

ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಇದೆಂಥ ವಿಚಿತ್ರನಪ್ಪ ಎಂದು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಾಯಕ ನನ್ನು ಈ ರೀತಿ ವಿಚಿತ್ರವಾಗಿ ತೋರಿಸಲಾಗಿದೆ ಎಂದು ಜನರು ನಗುತ್ತಿದ್ದಾರೆ. ಈ ಮೂಲಕ ತಮ್ಮ ನಾಯಕನಿಗೆ ನೆಟ್​ ಫ್ಲಿಕ್ಸ್​ ಅವಮಾನ ಮಾಡಿದೆ ಎಂದು ಅಭಿಮಾನಿಗಳು ಅದನ್ನು ಬಾಯ್ಕಾಟ್​ ಮಾಡಿಕೊಂಡಿದ್ದಾರೆ.

ಸಾಹೋದ ಕಥಾವಸ್ತು ಪೊಲೀಸ್‌ ಇಲಾಖೆ ಮತ್ತು ಭೂಗತ ಜಗತ್ತಿನ ಡಾನ್‌ಗಳ ನಡುವಿನ ಕಣ್ಣಾ ಮುಚ್ಚಾಲೆ ಆಟ. ಈ ಸ್ಟೋರಿ ಯಲ್ಲಿ ನಟ ಪ್ರಭಾಸ್‌ ಪೊಲೀಸನೋ ಅಥವಾ ಕಳ್ಳನೋ ಎನ್ನುವುದೇ ಚಿತ್ರದ ಮೇಜರ್‌ ಟ್ವಿಸ್ಟ್‌.