ಈ ಕ್ಲಿಪ್ಪಿಂಗ್ನಲ್ಲಿ ಇರುವುದು ಏನೆಂದರೆ, ನಾಯಕ ಪ್ರಭಾಸ್ ಸ್ಕೈಡೈವಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋ ದಲ್ಲಿ ತೋರಿಸಲಾಗಿದೆ. ಅಲ್ಲಿ ನಾಯಕ ಬಂಡೆಯಿಂದ ಒಂದು ಚೀಲವನ್ನು ಕೆಳಕ್ಕೆ ಎಸೆಯುತ್ತಾರೆ. ನಂತರ ಧುಮುಕಿ ಆ ಚೀಲ ವನ್ನು ಹಿಡಿದುಕೊಳ್ಳುತ್ತಾರೆ, ನಂತರ ಆ ಚೀಲವು ಪ್ಯಾರಾಚೂಟ್ ರೂಪದಲ್ಲಿ ತೆರೆದು ಕೊಳ್ಳುತ್ತದೆ. ಈ ಮೂಲಕ ನಾಯಕ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಗುತ್ತಾನೆ.
ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಇದೆಂಥ ವಿಚಿತ್ರನಪ್ಪ ಎಂದು ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ನಾಯಕ ನನ್ನು ಈ ರೀತಿ ವಿಚಿತ್ರವಾಗಿ ತೋರಿಸಲಾಗಿದೆ ಎಂದು ಜನರು ನಗುತ್ತಿದ್ದಾರೆ. ಈ ಮೂಲಕ ತಮ್ಮ ನಾಯಕನಿಗೆ ನೆಟ್ ಫ್ಲಿಕ್ಸ್ ಅವಮಾನ ಮಾಡಿದೆ ಎಂದು ಅಭಿಮಾನಿಗಳು ಅದನ್ನು ಬಾಯ್ಕಾಟ್ ಮಾಡಿಕೊಂಡಿದ್ದಾರೆ.
ಸಾಹೋದ ಕಥಾವಸ್ತು ಪೊಲೀಸ್ ಇಲಾಖೆ ಮತ್ತು ಭೂಗತ ಜಗತ್ತಿನ ಡಾನ್‌ಗಳ ನಡುವಿನ ಕಣ್ಣಾ ಮುಚ್ಚಾಲೆ ಆಟ. ಈ ಸ್ಟೋರಿ ಯಲ್ಲಿ ನಟ ಪ್ರಭಾಸ್ ಪೊಲೀಸನೋ ಅಥವಾ ಕಳ್ಳನೋ ಎನ್ನುವುದೇ ಚಿತ್ರದ ಮೇಜರ್ ಟ್ವಿಸ್ಟ್.