ಮುಂಬೈ: ಸದಾ ತಮ್ಮ ಡೇಟಿಂಗ್ ಹಾಗೂ ವೈಯಕ್ತಿಕ ಜೀವನದ ಕುರಿತು ಸುದ್ದಿಯಲ್ಲಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಇದೀಗ ಮತ್ತೆ ತಮ್ಮ ಡೇಟಿಂಗ್ ಕುರಿತು ಸುದ್ದಿಯಲ್ಲಿದ್ದಾರೆ. ಹೌದು ಇಷ್ಟು ದಿನ ಕ್ರಿಕೆಟಿಗ ರಿಷಭ್ ಪಂತ್ ಜತೆ ಸದಾ ಊರ್ವಶಿ ಹೆಸರು ಕೇಳಿ ಬರುತ್ತಿತ್ತು. ಊರ್ವಶಿ ಕೂಡಾ ರಿಷಭ್ ಬೆನ್ನು ಬಿದ್ದಂತೆ ತೋರುತ್ತಿತ್ತು. ಆದರೆ ಇದೀಗ ಈ ಖ್ಯಾತ ನಟಿಗೀಗ ಫುಟ್‌ಬಾಲ್ ದಂತಕತೆ ಸ್ಟಿಯಾನೋ ರೊನಾಲ್ಡೊ (Cristiano Ronaldo) ಮತ್ತು ಲಿಯೋನೆಲ್ ಮೆಸ್ಸಿ(Lionel Messi) ಮೇಲೆ ಪ್ರೇಮಾಂಕುರವಾಗಿದೆಯಂತೆ. ಈ ಟ್ರಯಾಂಗಲ್ ಲವ್‌ಸ್ಟೋರಿ ಬಗ್ಗೆ ಸ್ವತಃ ಊರ್ವಶಿ ಬಾಯ್ಬಿಟ್ಟಿದ್ದಾರೆ.
ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ತ್ರಿಕೋನ ಪ್ರೇಮ ಕಥೆಯ ಬಗ್ಗೆ ನಟಿ ಹಂಚಿಕೊಂಡಿದ್ದಾರೆ. ರ್ಯಾಪಿಡ್ ಫೈರ್ ಸುತ್ತಿನಲ್ಲಿ ನಿರೂಪಕರು ಬಾಲಿವುಡ್‌ನಲ್ಲಿ ನೀವು ಯಾರೊಂದಿಗೆ ತ್ರಿಕೋನ ಪ್ರೇಮದಲ್ಲಿ ಇರಲು ಇಷ್ಟಪಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಊರ್ವಶಿ ಬಾಲಿವುಡ್‌ನಲ್ಲಿ ಯಾರ ಜತೆಯೂ ಇಲ್ಲ ಬದಲಾಗಿ “ತಾನು ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯೊಂದಿಗೆ ತ್ರಿಕೋನ ಪ್ರೇಮದಲ್ಲಿ ಇರಲು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.
ರಿಷಭ್ ಪಂತ್ ಹಾಗೂ ಊರ್ವಶಿಯ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುತ್ತದೆ. ಸಂದರ್ಶನವೊಂದರಲ್ಲಿ ಆರ್‌ಪಿ ಎಂದು ಊರ್ವಶಿ ರಿಷಭ್ ಹೆಸರು ಬಳಸಿದ್ದಾರೆ ಎಂದು ಹೇಳಲಾಗಿತ್ತು. ವಾರಣಾಸಿಯಲ್ಲಿ ಶೂಟಿಂಗ್‌ನಲ್ಲಿದ್ದೆ. ಇದಾದ ಬಳಿಕ ದಿಲ್ಲಿಯಲ್ಲಿದ್ದ ಶೋವೊಂದಕ್ಕೆ ನಾನು ತೆರಳಬೇಕಿತ್ತು. ಅದರಂತೆ ವಾರಣಾಸಿಯಿಂದ ದಿಲ್ಲಿಗೆ ನೇರವಾಗಿ ಪ್ರಯಾಣ ಬೆಳೆಸಿದ್ದೆ. ಹೊಸದಿಲ್ಲಿಯಲ್ಲಿ ಒಂದು ದಿನ ಪೂರ್ತಿ ಶೂಟಿಂಗ್ ಇತ್ತು ಹಾಗೂ 10 ಗಂಟೆಗಳ ಕಾಲ ಹಿಂದಕ್ಕೆ ಮರಳಿದ ನಾನು ಮತ್ತೊಮ್ಮೆ ರೆಡಿಯಾಗಬೇಕಿತ್ತು. ನಿಮಗೂ ಗೊತ್ತಿರುವಂತೆ ರೆಡಿಯಾಗಲು ಹುಡುಗಿಯರು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾರೆ. ಈ ವೇಳೆ ಮಿಸ್ಟರ್ ಆರ್‌ಪಿ ಬಂದು ಕುಳಿತುಕೊಂಡರು ಹಾಗೂ ನನ್ನನ್ನು ಭೇಟಿಯಾಗಲು ಕಾಯುತ್ತಿದ್ದರು. ಆ ವೇಳೆ ನಾನು ತುಂಬಾ ದಣಿದಿದ್ದೆ. ಇದರಿಂದಾಗಿ ನಿದ್ರೆಗೆ ಜಾರಿದ್ದೆ. ಈ ವೇಳೆ ತುಂಬಾ ಕರೆಗಳು ಬಂದಿದ್ದವು ಎಂದು ನನಗೆ ಅರಿವಾಗಿರಲಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: Urvashi Rautela: ಪಂತ್ ಜತೆ ಡೇಟಿಂಗ್; ಮೌನ ಮುರಿದ ಊರ್ವಶಿ ರೌಟೇಲಾ
ಇದರಿಂದ ಕೋಪಗೊಂಡ ರಿಷಭ್ ಪಂತ್, “ಸಂದರ್ಶನಗಳಲ್ಲಿ ಜನ ಸುಳ್ಳು ಹೇಳುವುದನ್ನು ನೋಡಿದರೆ ಬಹಳಾ ತಮಾಷೆಯಂತೆ ಕಾಣುತ್ತದೆ. ಪ್ರಚಾರ ಮತ್ತು ಮಾಧ್ಯಮಗಳಲ್ಲಿನ ಹೆಡ್‌ಲೈನ್ ಸಲುವಾಗಿ ಇಷ್ಟೆಲ್ಲಾ. ಹೆಸರು ಮತ್ತು ಕೀರ್ತಿಗಾಗಿ ಜನ ಏನೆಲ್ಲಾ ಮಾಡುತ್ತಾರೆಂದು ತಿಳಿದು ಬಹಳಾ ಬೇಸರವಾಗಿದೆ. ಅವರಿಗೆ ದೇವರು ಒಳ್ಳೆಯದ್ದನ್ನೇ ಮಾಡಲಿ. ಮೇರಾ ಪೀಚಾ ಚೋಡೋ ಬೆಹೆನ್ (ನನ್ನನ್ನು ಬಿಟ್ಟು ಬಿಡಿ ಅಕ್ಕಾ) ಜೂಟ್ ಕೀ ಭೀ ಲಿಮಿಟ್ ಹೋತಿ ಹೇ (ಸುಳ್ಳಿಗೂ ಒಂದು ಮಿತಿಯಿದೆ) ಎಂದು ರಿಷಭ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ರೀತಿ ಬರೆದು ನಂತರ ಅದನ್ನು ಡಿಲೀಟ್ ಮಾಡಿದ್ದರು ಎನ್ನಲಾಗಿತ್ತು.