Sunday, 15th December 2024

ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ: ನಟಿ ಊರ್ವಶಿ ರೌಟೇಲಾ

ಮುಂಬೈ: ಬಾಲಿವುಡ್​ನ ಹಾಟ್​ ಬೆಡಗಿ ನಟಿ ಊರ್ವಶಿ ರೌಟೇಲಾ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದ ಬೆನ್ನಲ್ಲೇ ಊರ್ವಶಿಯಿಂದ ಶಾಕಿಂಗ್​ ಉತ್ತರ ಹೊರಬಿದ್ದಿದೆ.

‘ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ. ಈಗ ನಾನು ರಾಜಕೀಯಕ್ಕೆ ಹೋಗಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಬೇಕು’ ಎಂದು ಹಾಸ್ಯಸ್ಪದವಾಗಿ ಹೇಳಿದರು.

ನಾನು ರಾಜಕೀಯಕ್ಕೆ ಹೋಗುತ್ತೇನೋ, ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಆದರೆ ಖಂಡಿತವಾಗಿ ಒಂದಂತು ಅಭಿಮಾನಿಗಳಿಂದ ತಿಳಿಯಲು ಬಯಸುವುದು ಏನಂದ್ರೆ, ನಾನು ರಾಜಕೀಯಕ್ಕೆ ಸೇರಬೇಕೇ ಅಥವಾ ಬೇಡವೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಸದ್ಯ ನಟಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ‘ರಾಜಕೀಯ ಪ್ರವೇಶಿಸಲು ಟಿಕೆಟ್ ಪಡೆದ ಮೊದಲ ಕಿರಿಯ ಭಾರತೀಯ ಏಷ್ಯಾದ ಮಹಿಳೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಜೆಎನ್‌ಯು: ಜಹಾಂಗೀರ್ ನ್ಯಾಷನಲ್ ಯೂನಿವರ್ಸಿಟಿ ಚಿತ್ರದಲ್ಲಿ ರವಿ ಕಿಶನ್, ರಶ್ಮಿ ದೇಸಾಯಿ, ಪಿಯೂಷ್ ಮಿಶ್ರಾ, ಸೊನ್ನಳ್ಳಿ ಸೇಗಲ್, ಮತ್ತು ವಿಜಯ್ ರಾಜ್ ಮುಂತಾದವರು ನಟಿಸಿದ್ದಾರೆ. ಚಿತ್ರವು ಇದೇ ಏಪ್ರಿಲ್ 5, 2024ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ