Sunday, 15th December 2024

ತೆರೆ ಕಂಡ ‘ವಕೀಲ್ ಸಾಬ್’

ಬೆಂಗಳೂರು : ತೆಲುಗು ಸೂಪರ್​​ಸ್ಟಾರ್ ಪವನ್​ ಕಲ್ಯಾಣ್​ ನಟನೆಯ ‘ವಕೀಲ್ ಸಾಬ್’ ಶುಕ್ರವಾರ ಬಿಡುಗಡೆಯಾಗಿದೆ.

ಕೊಲೆಯ ಪ್ರಯತ್ನದ ಆರೋಪ ಎದುರಿಸುತ್ತಿರುವ ಮೂವರು ಯುವತಿಯರ ಕೋರ್ಟ್ ವಿಚಾರಣೆಯ ಸುತ್ತ ಹೆಣೆದಿರುವ ಈ ಚಿತ್ರ, ಬಾಲಿವುಡ್‌ನ ಅಮಿತಾಭ್ ಬಚ್ಚನ್​ರ ಹಿಂದಿ ಚಿತ್ರ ‘ಪಿಂಕ್​​’ನ ತೆಲುಗು ರೀಮೇಕ್ ಆಗಿದೆ.

2016 ರ ಚಿತ್ರ ಪಿಂಕ್​​ನಲ್ಲಿ ಬಚ್ಚನ್​ ಮಾಡಿರುವ ಪ್ರಭಾವೀ ಡೈಲಾಗ್​ಗಳುಳ್ಳ ವಕೀಲನ ಪಾತ್ರವನ್ನು ಪವನ್ ಕಲ್ಯಾಣ್​ ಮಾಡು ತ್ತಿದ್ದಾರೆ. ಎದುರಾಳಿ ವಕೀಲರ ಪಾತ್ರದಲ್ಲಿ ಪ್ರಕಾಶ್ ರಾಜ್​ ರನ್ನು ಕಾಣಬಹುದು. ನಿವೇತಾ ಥಾಮಸ್​, ಅಂಜಲಿ, ಅನನ್ಯ ನಗಲ್ಲ ಅವರೊಂದಿಗೆ ಶ್ರುತಿ ಹಸನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ವೇಣು ಶ್ರೀರಾಮ್ ನಿರ್ದೇಶಿಸಿದ್ದಾರೆ.

ನನ್ನ ನೆಚ್ಚಿನ ನಾಯಕ ಬಚ್ಚನ್ ವಹಿಸಿರುವ ಪಾತ್ರವನ್ನು ಮಾಡುವೆ ಎಂದು ಯೋಚಿಸೇ ಇರಲಿಲ್ಲ’ ಎಂದು ಕಲ್ಯಾಣ್  ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily