ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ನಾಲ್ಕು ವಾರಗಳಾಗಿವೆ. ಆದರೂ ಮನೆಮಂದಿ ಇನ್ನೂ ಸೆಟಲ್ ಆದಂತೆ ಕಾಣುತ್ತಿಲ್ಲ. ಪ್ರತಿ ದಿನ ಒಂದಲ್ಲ ಒಂದು ಸಣ್ಣ ವಿಚಾರಕ್ಕೂ ಜಗಳಗಳು ನಡೆಯುತ್ತಿದೆ. ಹಿಂದಿನ ವೀಕೆಂಡ್ ಕಿಚ್ಚ ಸುದೀಪ್ ಬಂದು ಎಲ್ಲ ಸ್ಪರ್ಧಿಗಳ ತಪ್ಪನ್ನು ಸರಿ ಪಡಿಸುವ ಕೆಲಸ ಮಾಡಿದ್ದರು. ಈ ವಾರ ಮನೆಯಲ್ಲಿ ರಾಜಕೀಯ ಟಾಸ್ಕ್ ನಡೆಯಿತು. ಇದರಲ್ಲೂ ಅನೇಕ ಮಿಸ್ಟೇಕ್ಸ್ ಆಗಿದೆ. ಆದರೆ, ಈ ವೀಕೆಂಡ್ ಇದನ್ನು ಪಂಚಾಯಿತಿ ಕಟ್ಟೆಯಲ್ಲಿ ಮಾತನಾಡಲು ಸುದೀಪ್ ಬರುವುದಿಲ್ಲ.
ವಾರದ ಕತೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ಈ ವಾರ ಇರುವುದಿಲ್ಲ. ಕಳೆದ ವಾರ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಹೀಗಾಗಿ ಅವರು ಈ ವೀಕೆಂಡ್‌ನಲ್ಲಿ ನಿರೂಪಣೆ ಮಾಡುವುದಿಲ್ಲ. ಕಳೆದ ವಾರ ಸುದೀಪ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುವಾಗಲೇ ಅವರ ತಾಯಿ ಐಸಿಯುವಿನಲ್ಲಿದ್ದರು. ಹೀಗಿದ್ದರೂ ಕೂಡ ನಿರೂಪಣೆ ಮುಗಿಸಿಯೇ ಹೊರಟಿದ್ದರು.
ದೊಡ್ಮನೆಗೆ ಯೋಗರಾಜ್ ಭಟ್ ಎಂಟ್ರಿ:
ಈ ವಾರದ ಪಂಚಾಯಿತಿ ಮಾಡಲು ಯೋಗರಾಜ್ ಭಟ್ ಮನೆಯೊಳಗೆ ಬಂದಿದ್ದಾರೆ. ವ್ಯವಸ್ಥೆಗಳು, ನಮಸ್ತೆಗಳು, ಸ್ವಾಗತಗಳು ಎನ್ನುತ್ತಾ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ. ಭಟ್ರನ್ನು ನೋಡಿ ಸ್ಪರ್ಧಿಗಳು ಖುಷಿಯಾಗಿದ್ದಾರೆ. ಮನೆ ಒಳಗೆ ಬರುತ್ತಿದ್ದಂತೆ ಸ್ಪರ್ಧಿಗಳು ಭಟ್ರನ್ನು ಸ್ವಾಗತಿಸಿದರೆ, ಅವರೂ ಕೂಡಾ ಸ್ಪರ್ಧಿಗಳಿಗೆ ಕೈ ಮುಗಿದು ಪ್ರೀತಿಯಿಂದ ಮಾತನಾಡಿಸುತ್ತಾರೆ.
ಉತ್ತರ ಕರ್ನಾಟಕ ಶೈಲಿಯ ಡ್ರೆಸ್ ತೊಟ್ಟು ಮನೆಗೆ ಬಂದಿದ್ದಾರೆ. ಹಾಗೆ ಎಲ್ಲರ ಜೊತೆಗೆ ಬೆರೆತು ಏನು ಹೇಳಬೇಕೋ? ಅದನ್ನ ತಮ್ಮದೇ ಶೈಲಿಯಲ್ಲಿಯೇ ಮನೆಯ ಮಂದಿಗೆ ಹೇಳಿದ್ದಾರೆ. ವಿಶೇಷವಾಗಿಯೇ ಸಿಂಗರ್ ಹನುಮಂತನಿಗೆ ಕ್ಲಾಸ್ ತೆಗೆದುಕೊಡಂತೆ ಇದೆ. ನೀನು ಕಂಟೆಸ್ಟೊಂಟೊ, ಆಡಿಯನ್ಸೊ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಹಾಗೇನೆ ಮನೆಯ ಸದಸ್ಯರಿಗೆ ಏನು ಹೇಳಬೇಕೋ? ಅದನ್ನ ಸಿಂಗರ್ ಹನುಮಂತನ ಮೂಲಕವೂ ಹೇಳಿರುವ ಹಾಗಿದೆ. ಮನೆಯ ಯಾವ ಸದಸ್ಯ ಯಾವ ಕುರಿ ಹೇಳು ಎಂದು ಭಟ್ರು ಹನುಮಂತ ಬಳಿ ಹೇಳಿದ್ದಾರೆ. ಅದಕ್ಕೆ ಸಿಂಗರ್ ಹನುಮಂತ ಸುರೇಶ್ ಕಳ್ಳ ಟಗರು, ಧರ್ಮ ಕೋಡು ಇಲ್ಲದ ಟಗರು ಎಂದು ಹನುಮಂತ ಹೇಳುತ್ತಾರೆ. ಗಂಡಸರಲ್ಲಿ ಮಾನಸಾ ಬಗ್ಗೆ ಕೂಡಾ ಸ್ವಲ್ಪ ಹೇಳು ಎಂದು ಮಾನಸಾ ಕಾಲು ಎಳೆದಿದ್ದಾರೆ.
BBK 11: ಬಿಗ್ ಬಾಸ್ ಮನೆಗೆ ಕಾಲಿಟ್ಟ ವಿಕಟಕವಿ ಯೋಗರಾಜ್ ಭಟ್: ಸ್ಪರ್ಧಿಗಳಿಗೆ ಪ್ರಶ್ನೆಗಳ ಸುರಿಮಳೆ