Saturday, 14th December 2024

‘ಕಾಂತಾರ’ ಸಿನೆಮಾಗೆ ನಾಳೆ ಒಂದು ವರ್ಷ: ‘ವರಾಹ ರೂಪಂ..’ ಸಾಂಗ್ ರಿಲೀಸ್

ಬೆಂಗಳೂರು: ಸ್ಯಾಂಡಲ್ ವುಡ್ ನಟ ರಿಷಬ್ ಶೆಟ್ಟಿ ಅವರು ಸದಭಿರುಚಿ ಚಿತ್ರ ‘ಕಾಂತಾರ’ ಚಿತ್ರದ ಒಟ್ಟಾರೆ ಗಳಿಕೆ 400+ ಕೋಟಿ ರೂಪಾಯಿ ಆಗಿದೆ.

2022ರ ಸೆಪ್ಟೆಂಬರ್ 30ರಂದು ‘ಕಾಂತಾರ’ ಸಿನಿಮಾ ರಿಲೀಸ್ ಆಯಿತು. ರಿಷಬ್ ಶೆಟ್ಟಿ , ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್ ನೋಡಿದ ಅನೇಕರು ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ನಿರೀಕ್ಷೆಗೂ ಮೀರಿ ಸಿನಿಮಾ ಮೂಡಿ ಬಂತು. ಈ ಚಿತ್ರ ರಿಲೀಸ್ ಆಗಿ ಒಂದು ವರ್ಷ ಕಳೆಯಲಿದೆ (ಸೆಪ್ಟೆಂಬರ್ 30).

ಈ ಸಿನಿಮಾ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ‘ವರಾಹ ರೂಪಂ..’ ವಿಡಿಯೋ ಸಾಂಗ್ ರಿಲೀಸ್ ಮಾಡಲು ಹೊಂಬಾಳೆ ಫಿಲ್ಮ್ಸ್ ಪ್ಲ್ಯಾನ್ ಮಾಡಿಕೊಂಡಿದೆ.

ಅಜನೀಶ್ ಲೋಕನಾಥ್ ‘ಕಾಂತಾರ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ವರಾಹ ರೂಪಂ..’ ಹಾಡಂತೂ ಭರ್ಜರಿ ಜನಪ್ರಿಯತೆ ಪಡೆಯಿತು. ಇದರ ವಿಡಿಯೋ ಸಾಂಗ್ ನೋಡಲು ಅಭಿಮಾನಿಗಳು ಕಾದಿದ್ದರು. ಅದಕ್ಕೆ ಸಮಯ ಬಂದಿದೆ.

ಸೆಪ್ಟೆಂಬರ್ 30ರಂದು ಬೆಳಗ್ಗೆ 10 ಗಂಟೆಗೆ ಸಾಂಗ್ ರಿಲೀಸ್ ಆಗಲಿದೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.