Saturday, 14th December 2024

ವರ್ತೂರ್‌ ಸಂತೋಷ್‌ ಬಿಗ್‌ ಬಾಸ್‌ ಮನೆಯಲ್ಲಿರುವರೇ?..ದಂಡ ಪಾವತಿಸುವರೇ…?

ಬೆಂಗಳೂರು: ಬಿಗ್ ಬಾಸ್ ಕನ್ನಡ 10ರಲ್ಲಿ ಈ ಬಾರಿ 34 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ವರ್ತೂರ್‌ ಸಂತೋಷ್‌ ಸೇವ್‌ ಆದರೂ ತಾವು ಹೊರ ಹೋಗುವುದಾಗಿ ಹೇಳಿದ್ದಾರೆ.

ಹುಲಿ ಉಗುರಿನ ಪ್ರಕರಣದಿಂದ ಮನನೊಂದಿರುವ ಸಂತೋಷ್‌ ಬಿಗ್‌ ಬಾಸ್‌ ಮನೆಯಲ್ಲಿರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ವರ್ತೂರ್‌ ಸಂತೋಷ್ ಹುಲಿ ಉಗುರನ್ನು ಧರಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಜಾಮೀನು ಪಡೆದು, ಬಿಗ್‌ ಬಾಸ್‌ ಮನೆಗೆ ಮರಳಿ ಬಂದಿದ್ದಾರೆ. ಆದರೆ ಈ ವಾರ ಸೇಫ್‌ ಆದರೂ ತಾವು ಹೊರ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಬಿಗ್‌ ಬಾಸ್‌ ಮನೆಯಿಂದ ಹಾಗೆಲ್ಲ ಮನಸೋ ಇಚ್ಛೆ ಹೊರ ಬರಲು ಸಾಧ್ಯವಿಲ್ಲ. ಅಲ್ಲಿ ಎಲ್ಲವೂ ಒಪ್ಪಂದದ ಪ್ರಕಾರ ನಡೆಯುತ್ತಿದೆ.

ಮೂರು ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ಒಪ್ಪಂದ ನಡೆದಿರುತ್ತದೆ. ಕಳೆದ ಕೆಲವು ವರ್ಷಗಳಿಂದ ಹಿಂದಿಯಲ್ಲಿ ಸಲ್ಮಾನ್ ಖಾನ್ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಪ್ರತಿ ವರ್ಷ ಕೆಲವರು ಬಿಗ್‌ ಬಾಸ್‌ ಶೋನಿಂದ ಅರ್ಧಕ್ಕೆ ಹೊರ ಹೋಗುವ ಪ್ರಯತ್ನ ಮಾಡ್ತಾರೆ.

ಹಾಗೊಂದು ವೇಳೆ ಅರ್ಧಕ್ಕೆ ಹೊರಬರ ಬೇಕೆಂದರೆ 2 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದೇ ನಿಯಮ ಕನ್ನಡದ ಬಿಗ್‌ ಬಾಸ್‌ ಸ್ಪರ್ಧಿಗಳಿಗೂ ಅನ್ವಯವಾಗುತ್ತಾ ಕಾದು ನೋಡಬೇಕಿದೆ.