Saturday, 14th December 2024

ನವೆಂಬರ್​ 1ರಂದು ಇಟಲಿಯಲ್ಲಿ ವರುಣ್​ ತೇಜ್-ಲಾವಣ್ಯ ತ್ರಿಪಾಠಿ

ಇಟಲಿ: ಟಾಲಿವುಡ್​ ನಟರಾದ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ನವೆಂಬರ್​ 1ರಂದು ಇಟಲಿಯಲ್ಲಿ ಮದುವೆಯಾಗಲಿದ್ದಾರೆ.

ಟಾಲಿವುಡ್​ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ ಮೆಗಾ ಪ್ರಿನ್ಸ್​ ವರುಣ್​ ತೇಜ್​ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ.

ಜೂನ್​ 9ರಂದು ನಟಿ ಲಾವಣ್ಯ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ನವೆಂಬರ್ 1​ರಂದು ಇಟಲಿಯಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾಲ ಡೆಸ್ಟಿನೇಶನ್​ ವೆಡ್ಡಿಂಗ್​ ಪ್ಲಾನ್​ ಮಾಡಲಾಗಿದೆ.

ಹೈದರಾಬಾದ್​ನ ವಿಮಾನ ನಿಲ್ದಾಣದಲ್ಲಿ ವರುಣ್​ ವೈಟ್​ ಟಿ-ಶರ್ಟ್​ಗೆ ಬ್ಲ್ಯಾಕ್​ ಜಾಕೆಟ್​ ಮತ್ತು ಡೆನಿಮ್​ ಧರಿಸಿದ್ದರು. ಲಾವಣ್ಯ ತ್ರಿಪಾಠಿ ಬೀಜ್​ ಬಾಡಿಕಾನ್​ ಡ್ರೆಸ್​ನ್ನು ಆಯ್ಕೆ ಮಾಡಿಕೊಂಡಿದ್ದರು. ಇವರೊಂದಿಗೆ ವರುಣ್​ ಸಹೋದರಿ ನಿಹಾರಿಕಾ ಕೊನಿಡೇಲಾ ಮತ್ತು ನಟನ ಸೋದರ ಸಂಬಂಧಿ ವೈಷ್ಣವ್​ ತೇಜ್​ ಕೂಡ ಇದ್ದರು.

ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಆಮಂತ್ರಣ ಪತ್ರಿಕೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಮದುವೆ ನವೆಂಬರ್​ 1ರಂದು ಇಟಲಿಯ ಟಸ್ಕನಿಯ ಬೊರ್ಗೊ ಸ್ಯಾನ್​ ಫೆಲಿಸ್​ ರೆಸಾರ್ಟ್​ನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಅಕ್ಟೋಬರ್​ 30ರಂದು ಕಾಕ್ಟೈಲ್​ ನೈಟ್​ನೊಂದಿಗೆ ಮದುವೆ ಸಂಭ್ರಮ ಶುರುವಾಗಲಿದೆ. ಅಕ್ಟೋಬರ್​ 31ರಂದು ಹಳದಿ ಮತ್ತು ಮೆಹಂದಿ ಕಾರ್ಯಕ್ರಮಗಳು ನಡೆಯಲಿದೆ. ವಿವಾಹದ ನಂತರ ಈ ದಂಪತಿ ತಮ್ಮ ಉದ್ಯಮದ ಸಹದ್ಯೋಗಿಗಳು, ಸ್ನೇಹಿತರಿಗಾಗಿ ಹೈದರಾಬಾದ್​ನಲ್ಲಿ ಆರತಕ್ಷತೆಯನ್ನು ಆಯೋಜಿಸುವ ನಿರೀಕ್ಷೆಯಿದೆ.