Sunday, 6th October 2024

ರಜಿನಿಕಾಂತ್‌ ಅಭಿನಯದ ʼವೆಟ್ಟೈಯನ್‌ʼ ರಿಲೀಸ್‌ಗೆ ಡೇಟ್‌ ಫಿಕ್ಸ್‌

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ಮುಂದಿನ ಸಿನಿಮಾ ʼವೆಟ್ಟೈಯನ್‌ʼ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಆಗಿದೆ. ಇದೇ ದಿನ ಸೂರ್ಯ ಅವರ ʼಕಂಗುವʼ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಅನೌನ್ಸ್‌ ಮಾಡಿತ್ತು.

ಇದೀಗ ʼಕಂಗುವʼ ರಿಲೀಸ್‌ ಡೇಟ್‌ ಬಗ್ಗೆ ಹೊಸ ಅಪ್ಡೇಟ್‌ ಹೊರಬಿದ್ದಿದೆ. ಅಕ್ಟೋಬರ್‌ 10 ರಂದು ರಿಲೀಸ್‌ ಆಗುವ ಯೋಜನೆಯಿಂದ ಚಿತ್ರತಂಡ ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಶಿವ ನಿರ್ದೇಶನದ, ಸೂರ್ಯ ಅಭಿನಯದ ʼಕಂಗುವʼ ದೀಪಾವಳಿ ಹಬ್ಬಕ್ಕೆ ಅಂದರೆ ಅಕ್ಟೋಬರ್‌ 31ರಂದು ರಿಲೀಸ್‌ ಆಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ʼಕಂಗುವʼ ಮುಂದೂಡಿಕೆ ಆದರೆ ರಜಿನಿಕಾಂತ್‌ ʼವೆಟ್ಟೈಯನ್‌ʼ ಕಾಲಿವುಡ್‌ನಲ್ಲಿ ದೊಡ್ಡ ರಿಲೀಸ್‌ ಆಗಿ ಮೂಡಿಬರಲಿದೆ.

ರಜಿನಿಕಾಂತ್‌ ʼಜೈಲರ್‌ʼ ಬಳಿಕ ಮತ್ತೆ ಖಾಕಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಟಿ.ಜೆ. ಜ್ಞಾನವೇಲ್‌ ನಿರ್ದೇಶನದ ʼವೆಟ್ಟೈಯನ್‌ʼ ಈಗಾಗಲೇ ಟೀಸರ್‌ ನಿಂದ ಗಮನ ಸೆಳೆದಿದ್ದು ನಿರೀಕ್ಷೆ ಹೆಚ್ಚಾಗಿಸಿದೆ.

ಬುಡಕಟ್ಟು ಸಮುದಾಯದ ನಡುವಿನ ಅಳಿವು – ಉಳಿವಿನ ಹೋರಾಟದ ಕಥೆಯನ್ನು ʼಕಂಗುವʼ ಒಳಗೊಂಡಿದೆ. ಸೂರ್ಯ, ಬಾಬಿ ಡಿಯೋಲ್‌ ಪ್ರಧಾನ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.