Thursday, 12th December 2024

30ರ ವಸಂತಕ್ಕೆ ಕಾಲಿಟ್ಟ ‘ಯಾರಿಯಾನ್’ ಬ್ಯೂಟಿ

ಮುಂಬೈ: 2011ರಲ್ಲಿ ಫೆಮಿನಾ ಮಿಸ್‍ ಪೀಜಂಟ್‍ನಲ್ಲಿ ಭಾಗವಹಿಸಿ, ಐದು ಪ್ರಶಸ್ತಿಗಳನ್ನು ಬಾಚಿದ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಕೌರ್‍ ಇಂದು 30ರ ಹರೆಯಕ್ಕೆ ಕಾಲಿಟ್ಟರು.

ಸೌಂದರ್ಯದ ಖನಿಯಾಗಿರುವ ರಾಕುಲ್‍ಗೆ ಯಾರಿಯಾಂ ಚಿತ್ರ ಖ್ಯಾತಿ ತಂದು ಕೊಟ್ಟಿತು. ಟಾಲಿವುಡ್‍ನಲ್ಲಿ ಕೇತರಂ ಮೂಲಕ ಸಿದ್ದಾರ್ಥ್ ರಾಜಕುಮಾರ್ ಗೆ ಸಹನಟಿಯಾಗಿ 2011ರಲ್ಲಿ ನಟಿಸಿದರು. ವೆಂಕಟಾದ್ರಿ ಏಕ್ಸ್’ಪ್ರೆಸ್’ನಲ್ಲಿ ಪ್ರಾರ್ಥನಾ ಪಾತ್ರದಲ್ಲಿ ಯಾವುದೇ ಗ್ಲಾಮರ್‍ ಟಚ್‍ ಇಲ್ಲದೆ ನಟಿಸಿದ್ದಾರೆ.

ಲೌಕ್ಯಮ್‍ನಲ್ಲಿ ಗೋಪಿಚಂದ್‍ಗೆ ಚಂದ್ರಕಲಾ ಆಗಿ, ನನ್ನಾಕೂ ಪ್ರೇಮಥೋ ದಲ್ಲಿ ಜೂನಿಯರ್‍ ಎನ್‍ಟಿಆರ್‍ ಜತೆ ದಿವ್ಯಾಂಕಾ ಪಾತ್ರ, ಸರ್ರಾಯ್ನೊಡು ಚಿತ್ರದಲ್ಲಿ ಅಲ್ಲು ಅರ್ಜುನ್ ಜತೆ ಮಹಾಲಕ್ಷ್ಮೀಯಾಗಿ ಹಾಗೂ ಧ್ರುವದಲ್ಲಿ ಇಶಿಕಾ ಆಗಿ ರಾಮ್‍ ಚರಣ್‍ ತೇಜಗೆ ಉತ್ತಮ ಜೋಡಿಯಾಗಿದ್ದಾರೆ.