Sunday, 15th December 2024

ಯಶ್ 19ನೇ ಸಿನಿಮಾಗೆ ಮಲಯಾಳಂ ನಿರ್ದೇಶಕಿ ನಿರ್ದೇಶನ…!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ.

ಇದೀಗ ಯಶ್ ನಟನೆಯ 19ನೇ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಯಾವ ಚಿತ್ರವೂ ಸಹ ಘೋಷಣೆಯಾಗಿಲ್ಲ. ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡು ಒಂದು ವರ್ಷ ಕಳೆದಿದ್ದು, ಚಿತ್ರದ ಮೊದಲ ವರ್ಷದ ವಾರ್ಷಿಕೋತ್ಸವದ ಆಚರಣೆ ನಡೆದರೂ ಸಹ ಯಶ್ ನಟನೆಯ ಮುಂದಿನ ಚಿತ್ರ ಯಾವುದೆಂಬುದು ಮಾತ್ರ ತಿಳಿದುಬಂದಿಲ್ಲ.

ಯಶ್ ತಮ್ಮ ಮುಂದಿನ ಚಿತ್ರವನ್ನು ಅವರೇ ನಿರ್ದೇಶನ ಮಾಡಿಕೊಳ್ಳಲಿದ್ದಾರಂತೆ, ತೆಲುಗು ನಿರ್ದೇಶಕ ಆಕ್ಷನ್ ಕಟ್ ಹೇಳ್ತಾರಂತೆ, ತಮಿಳಿನ ನಿರ್ದೇಶಕರು ಯಶ್‌ಗೆ ಸಿನಿಮಾ ಮಾಡ್ತಾರಂತೆ.

ಮಲಯಾಳಂ ಚಿತ್ರರಂಗದ ನಿರ್ದೇಶಕಿಯೊಬ್ಬರು ಯಶ್ 19ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಮಲಯಾಳಂ ನಟಿ ಗೀತು ಮೋಹನ್‌ದಾಸ್ ಎಂಬುವವರು ಯಶ್ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗೀತು ಮೋಹನ್‌ದಾಸ್ ನಿಜವಾದ ಹೆಸರು ಗಾಯತ್ರಿ ದಾಸ್. 1986ರಲ್ಲಿ ತೆರೆಗೆ ಬಂದ ಮೋಹನ್ ಲಾಲ್ ನಟನೆಯ ಒಣ್ಣು ಮುದಲ್ ಪೂಜ್ಯಂ ವರೆ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ 2009ರವರೆಗೂ ಸುಮಾರು ಮೂವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದರು.