ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಜಗದೀಶ್ ಹಾಗೂ ರಂಜಿತ್ ನಿರ್ಗಮನದ ಬಳಿಕ ಮನೆಯೊಳಗೆ ದೊಡ್ಡ ಬದಲಾವಣೆ ಆಗುತ್ತಿದೆ. ಕಳೆದ ಭಾನುವಾರ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸಿಂಗರ್ ಹನುಮಂತ ಕಾಲಿಟ್ಟರು. ಬಳಿಕ ಅತಿಥಿಯಾಗಿ ರಾಧಾ ಹಿರೇಗೌಡರ್ ಬಂದರು. ನಂತರ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನಸಾಮಾನ್ಯರು ನೇರವಾಗಿ ದೊಡ್ಡ ಮನೆಯೊಳಗೆ ಪ್ರವೇಶ ಪಡೆದರು. ಇದೀಗ ವಿಕಟಕವಿ ಯೋಗರಾಜ್ ಭಟ್ರ ಸರದಿ.
ಕಲರ್ಸ್ ಕನ್ನಡ ವಾಹಿನಿಯು ಇಂದಿನ ಎಪಿಸೋಡ್ನ ಪ್ರೋಮೋ ಹಂಚಿಕೊಂಡಿದೆ. ಇದರಲ್ಲಿ ಯೋಗರಾಜ್ ಭಟ್ ವ್ಯವಸ್ಥೆಗಳು, ನಮಸ್ತೆಗಳು, ಸ್ವಾಗತಗಳು ಎನ್ನುತ್ತಾ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ. ಭಟ್ರನ್ನು ನೋಡಿ ಸ್ಪರ್ಧಿಗಳು ಖುಷಿಯಾಗಿದ್ದಾರೆ. ಮನೆ ಒಳಗೆ ಬರುತ್ತಿದ್ದಂತೆ ಸ್ಪರ್ಧಿಗಳು ಭಟ್ರನ್ನು ಸ್ವಾಗತಿಸಿದರೆ, ಅವರೂ ಕೂಡಾ ಸ್ಪರ್ಧಿಗಳಿಗೆ ಕೈ ಮುಗಿದು ಪ್ರೀತಿಯಿಂದ ಮಾತನಾಡಿಸುತ್ತಾರೆ.
ಕಿಚ್ಚ ಸುದೀಪ್ ಬದಲು ಯೋಗರಾಜ್ ಭಟ್ರು ಪಂಚಾಯಿತಿ ಮಾಡಲು ಬಂದಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಡ್ರೆಸ್ ತೊಟ್ಟು ಮನೆಗೆ ಬಂದಿದ್ದಾರೆ. ಹಾಗೆ ಎಲ್ಲರ ಜೊತೆಗೆ ಬೆರೆತು ಏನು ಹೇಳಬೇಕೋ? ಅದನ್ನ ತಮ್ಮದೇ ಶೈಲಿಯಲ್ಲಿಯೇ ಮನೆಯ ಮಂದಿಗೆ ಹೇಳಿದ್ದಾರೆ. ವಿಶೇಷವಾಗಿಯೇ ಸಿಂಗರ್ ಹನುಮಂತನಿಗೆ ಕ್ಲಾಸ್ ತೆಗೆದುಕೊಡಂತೆ ಇದೆ. ನೀನು ಕಂಟೆಸ್ಟೊಂಟೊ, ಆಡಿಯನ್ಸೊ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!
— Colors Kannada (@ColorsKannada) October 26, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಇಂದು ರಾತ್ರಿ 9:00#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/pbH1Sahrxi
ಹಾಗೇನೆ ಮನೆಯ ಸದಸ್ಯರಿಗೆ ಏನು ಹೇಳಬೇಕೋ? ಅದನ್ನ ಸಿಂಗರ್ ಹನುಮಂತನ ಮೂಲಕವೂ ಹೇಳಿರುವ ಹಾಗಿದೆ. ಮನೆಯ ಯಾವ ಸದಸ್ಯ ಯಾವ ಕುರಿ ಹೇಳು ಎಂದು ಭಟ್ರು ಹನುಮಂತ ಬಳಿ ಹೇಳಿದ್ದಾರೆ. ಅದಕ್ಕೆ ಸಿಂಗರ್ ಹನುಮಂತ ಸುರೇಶ್ ಕಳ್ಳ ಟಗರು, ಧರ್ಮ ಕೋಡು ಇಲ್ಲದ ಟಗರು ಎಂದು ಹನುಮಂತ ಹೇಳುತ್ತಾರೆ. ಗಂಡಸರಲ್ಲಿ ಮಾನಸಾ ಬಗ್ಗೆ ಕೂಡಾ ಸ್ವಲ್ಪ ಹೇಳು ಎಂದು ಮಾನಸಾ ಕಾಲು ಎಳೆಯುವ ಭಟ್ಟರು ನಂತರ ಸಾರಿ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಮಾನಸಾ, ಎಲ್ಲರೂ ಹಾಗೆ ಹೇಳುತ್ತಾರೆ ಸರ್ ಎನ್ನುತ್ತಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ತಿನ್ನೋ ವಿಚಾರಕ್ಕೂ ಜಗಳ: ಇನ್ಮುಂದೆ ನಾನು ಟೀ ಕುಡಿಯಲ್ಲ ಎಂದು ಚೈತ್ರಾ ಶಪಥ