Thursday, 12th December 2024

ಕರೋನಾ ಸೋಂಕಿಗೆ ಯುವ ನಿರ್ಮಾಪಕ, ನಟ ಮಂಜುನಾಥ್ ಬಲಿ

ಬೆಂಗಳೂರು: ಕರೋನಾ ವೈರಸ್ ಸೋಂಕಿನಿಂದ ಕನ್ನಡ ಸಿನಿಮಾ ಯುವ ನಿರ್ಮಾಪಕ ಹಾಗೂ ನಟ ಡಾ ಡಿ ಎಸ್ ಮಂಜುನಾಥ್ (ಅರ್ಜುನ್ ಮಂಜುನಾಥ್) (35) ಭಾನುವಾರ ಮೃತಪಟ್ಟಿದ್ದಾರೆ.

ಕಳೆದ ಶುಕ್ರವಾರ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಿಗೆ ಕರೋನಾ ಪಾಸಿಟಿವ್ ಕಂಡು ಬಂದಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಡಾ ಡಿ ಎಸ್ ಮಂಜುನಾಥ್ ಅವರು ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಸಿನಿಮಾಗಳನ್ನು ನಿರ್ಮಿಸಿದ್ದರು. ಅಲ್ಲದೇ ಪ್ರಸಂಟ್ ಪ್ರಪಂಚ, 0% ಲವ್ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದರು.