ಸಿವಿವಿ ದತ್ತಿ ದಿನಾಚರಣೆ ಅಂಗವಾಗಿ ನಡೆದ ಪತ್ರಕರ್ತರ ಕ್ರೀಡಾಕೂಟ
ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ೧೦೦ ಮೀ. ಓಟ, ಲಾಂಗ್ ಜಂಪ್, ಬ್ಯಾಸ್ಕೆಟ್ ಬಾಲ್ ಎಸೆತ, ಗುಂಡು ಎಸೆತ, ಬಕೆಟ್‌ಇನ್‌ದ ಬಾಲ್, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ ಇನ್ನಿತರೆ ಕ್ರೀಡೆಗಳಲ್ಲಿ ೫೦ ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿ ಆಟವಾಡಿ ಸಂತೋಷಪಟ್ಟರು.

ಮಂಗಳವಾರ ಪತ್ರಕರ್ತರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಕೇವಲ ವರದಿಗಾರಿಕೆಗೆ ಸೀಮಿತವಾಗಿದ್ದ ಪತ್ರಕರ್ತರು ದಿನವಿಡೀ ಕ್ರೀಡಾಕೂಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಕ್ಕು ನಲಿದರು.

ಚಿಕ್ಕಬಳ್ಳಾಪುರ : ಜು.೩೦ರಂದು ನಡೆಯಲಿರುವ ಪಂಚಗಿರಿ ವಿದ್ಯಾ ಸಂಸ್ಥೆಯ ೨೯ನೇ ದತ್ತಿ ದಿನಾಚರಣೆ ಹಾಗೂ ಸಿ.ವಿ.ವೆಂಕಟರಾಯಪ್ಪಯವರ 110ನೇ ಜಯಂತಿಯ ಅಂಗವಾಗಿ ಮಂಗಳ ವಾರ ಪತ್ರಕರ್ತರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಕೇವಲ ವರದಿಗಾರಿಕೆಗೆ ಸೀಮಿತವಾಗಿದ್ದ ಪತ್ರಕರ್ತರು ದಿನವಿಡೀ ಕ್ರೀಡಾಕೂಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಕ್ಕು ನಲಿದರು.
ನಗರ ಹೊರವಲಯದ ಸಿವಿವಿ ಕ್ಯಾಂಪಸ್‌ನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್, ದತ್ತಿ ದಿನಾಚರಣೆ ಹಾಗೂ ಸಿವಿವಿಯವರ ಜಯಂತಿ ಅಂಗವಾಗಿ ಜುಲೈ ಪೂರ್ತಿ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು, ಗಿಡ ನೆಡುವುದು, ಕ್ರೀಡೆಕೂಟಗಳನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಪತ್ರಕರ್ತರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Accident at Chikkaballapur: ವಾಹನಗಳ ನಡುವೆ ಡಿಕ್ಕಿ: ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಾವು
ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ೧೦೦ ಮೀ. ಓಟ, ಲಾಂಗ್ ಜಂಪ್, ಬ್ಯಾಸ್ಕೆಟ್ ಬಾಲ್ ಎಸೆತ, ಗುಂಡು ಎಸೆತ, ಬಕೆಟ್‌ಇನ್‌ದ ಬಾಲ್, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ ಇನ್ನಿತರೆ ಕ್ರೀಡೆಗಳಲ್ಲಿ ೫೦ ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿ ಆಟವಾಡಿ ಸಂತೋಷಪಟ್ಟರು. ಇಂದಿನ ಕ್ರೀಡೆಗಳಲ್ಲಿ ಭಾಗವಹಿಸಿದ್ದ ವಿಜೇತರಿಗೆ ದತ್ತಿ ದಿನಾಚರಣೆಯಂದು ಬಹುಮಾನ ವಿತರಣೆ ಮಾಡುವ ಪದ್ಧತಿಯಿದ್ದು ಸಂಸ್ಥೆಯ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಯಾಂಪಸ್‌ನಲ್ಲಿ ಜು.೨೩ರಂದು ನಡೆಯುವ ರಕ್ತದಾನ ಶಿಬಿರದಲ್ಲಿ ಕನಿಷ್ಟ ೫ ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ರಕ್ತದಾನಿಗಳ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹಮ್ಮಿಕೊಳ್ಳ ಲಾಗಿದೆ. ಅಲ್ಲದೆ ಬೆಳಗ್ಗೆಯಿಂದ ರಾತ್ರಿಯವರೆಗೆ ಅನ್ನದಾನ ನಡೆಯಲಿದೆ ಎಂದು ನುಡಿದರು.

ಕಳೆದ ಬಾರಿ ಆಯೋಜಿಸಲಾಗಿ ರಕ್ತದಾನ ಶಿಬಿರದಲ್ಲಿ ೨೧೪೫ ಯೂನಿಟ್ ರಕ್ತ ಸಂಗ್ರಹಿಸಿ ಇಡೀ ಜಿಲ್ಲೆಗೆ ಸಂಸ್ಥೆಯು ಹೆಚ್ಚು ರಕ್ತ ಸಂಗ್ರಹಿಸಿದ ದಾಖಲೆಯನ್ನು ಹೊಂದಿತ್ತು. ಬಳಿಕ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಆಯೋಜಿಸಿದ್ದ ಶಿಬಿರದಲ್ಲಿ ೩೨೪೬ ಯೂನಿಟ್ ಸಂಗ್ರಹಿಸಿದ್ದರು. ನಂತರ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಆಯೋಜಿಸಿದ್ದ ಶಿಬಿರದಲ್ಲಿ ೧೭೦೦ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಗಿತ್ತು. ಇದೀಗ ಕೆವಿ ಶಿಕ್ಷಣ ಸಂಸ್ಥೆಯ ಶಿಬಿರದಲ್ಲಿ ೫೦೦೦ ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲೆಯ ಜನತೆ ಹಾಗೂ ಯುವಕರು ರಕ್ತದಾನ ಕುರಿತು ತೋರುತ್ತಿರುವ ಮುತುವರ್ಜಿಯಿಂದಾಗಿ ಮುಂಬರುವ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಕ್ತದಾನಿಗಳ ರಾಜಧಾನಿಯಾಗಲಿದೆ ಎಂದ ಅವರು, ಶಿಬಿರಕ್ಕ ಇದುವರೆಗೂ ೧೪ಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.