Thursday, 12th December 2024

Samsung Washing Machine: ಸ್ಯಾಮ್‌ಸಂಗ್‌ನಿಂದ ದೊಡ್ಡ ಸಾಮರ್ಥ್ಯದ 10 ಬೀಸ್ಪೋಕ್ ಎಐ ವಾಶಿಂಗ್‌ ಮಷಿನ್‌ಗಳ ಬಿಡುಗಡೆ

Samsung washing machines

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung Washing Machine) ಇಂದು ತನ್ನ ದೊಡ್ಡ ಗಾತ್ರದ 10 ಹೊಚ್ಚ ಹೊಸ ಫ್ರಂಟ್ ಲೋಡ್ ವಾಶಿಂಗ್ ಮಷಿನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎಐ ಆಧರಿತ ಉತ್ಪನ್ನ ಶ್ರೇಣಿಯು ಲಾಂಡ್ರಿ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದು, ಭಾರತೀಯ ಗ್ರಾಹಕರಿಗೆ ವಿಶಿಷ್ಟ ಎಐ ಫೀಚರ್‌ಗಳನ್ನು ಒದಗಿಸುವ ಮೂಲಕ ಬಟ್ಟೆ ತೊಳೆಯುವ ಪ್ರಕ್ರಿಯೆಯನ್ನು ತುಂಬಾ ಸರಳಗೊಳಿಸುತ್ತದೆ.

ಹೊಚ್ಚ ಹೊಸ ದೊಡ್ಡ ವಾಶಿಂಗ್ ಮಷಿನ್‌ಗಳು 12 ಕೆಜಿ ಸಾಮರ್ಥ್ಯವನ್ನು ಹೊಂದಿದ್ದು, ಭಾರತೀಯ ಗ್ರಾಹಕರು ಬಹುತೇಕ ಎಲ್ಲಾ ದಿರಿಸುಗಳನ್ನು ಒಂದೇ ಸಲ ತೊಳೆಯಲು ಅನುವು ಮಾಡಿಕೊಡುತ್ತದೆ. ಈ ವಾಶಿಂಗ್ ಮಷಿನ್‌ಗಳು ಪರದೆಗಳು, ಹೊದಿಕೆಗಳು ಮತ್ತು ಸೀರೆಗಳಂತಹ ದೊಡ್ಡ ಗಾತ್ರದ ಬಟ್ಟೆಗಳನ್ನು ತೊಳೆಯಲು ಸೂಕ್ತವಾಗಿದೆ. ಸ್ಯಾಮ್‌ಸಂಗ್ ಇಂಡಿಯಾದ ಹೊಸ 12 ಕೆಜಿ ಸಾಮರ್ಥ್ಯದ ವಾಶಿಂಗ್ ಮಷಿನ್‌ ಶ್ರೇಣಿಯ ಆರಂಭಿಕ ಬೆಲೆ 52,990 ರೂ. ಇದ್ದು,  ಈ ಅತ್ಯಾಧುನಿಕ ಹೊಚ್ಚ ಹೊಸ ವಾಶಿಂಗ್ ಮಷಿನ್‌ಗಳು ಫ್ಲಾಟ್ ಗ್ಲಾಸ್ ಡೋರ್ ಹೊಂದಿದ್ದು, ಬೀಸ್ಪೋಕ್ ವಿನ್ಯಾಸವನ್ನು ಹೊಂದಿವೆ. ಎಐ ವಾಶ್, ಎಐ ಎನರ್ಜಿ ಮೋಡ್, ಎಐ ಕಂಟ್ರೋಲ್ ಮತ್ತು ಎಐ ಇಕೋಬಬಲ್‌ನಂತಹ ಆಧುನಿಕ ಎಐ ಫೀಚರ್‌ಗಳನ್ನು ಹೊಂದಿವೆ.

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಡಿಜಿಟಲ್ ಉಪಕರಣಗಳ ಹಿರಿಯ ನಿರ್ದೇಶಕ ಸೌರಭ್ ಬೈಶಾಖಿಯಾ ಅವರು, “ಭಾರತೀಯ ಗ್ರಾಹಕರು ಕಡಿಮೆ ಶ್ರಮದಲ್ಲಿ ವಿಭಾಗದಲ್ಲಿಯೇ ಅತ್ಯುತ್ತಮವಾಗಿ ಬಟ್ಟೆ ತೊಳೆಯುವ ಮತ್ತು ಅದರ ಜತೆಗೆ ಸಮಯ ಮತ್ತು ವಿದ್ಯುತ್ ಅನ್ನು ಉಳಿಸುವ ಹೊಸ ಕಾಲದ ಡಿಜಿಟಲ್ ವಾಶಿಂಗ್ ಮಷಿನ್‌ಗಳನ್ನು ಬಯಸುತ್ತಿದ್ದಾರೆ. ಅಂತಹ ಗ್ರಾಹಕರಿಗೆ ನಮ್ಮ ಹೊಚ್ಚ ಹೊಸ 12 ಕೆಜಿ ಎಐ- ಚಾಲಿತ ವಾಶಿಂಗ್ ಮಷಿನ್‌ಗಳು ಸೂಕ್ತವಾಗಿವೆ. ಈ ಉತ್ಪನ್ನಗಳು ಗ್ರಾಹಕರಿಗೆ ಒಂದೇ ಸಮಯದಲ್ಲಿ ದೊಡ್ಡ ಗಾತ್ರದ ಬಟ್ಟೆಯ ಲೋಡ್‌ಗಳನ್ನು ತೊಳೆಯಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಅವರಿಗೆ ‘ಕಡಿಮೆ ಶ್ರಮ ಮತ್ತು ಹೆಚ್ಚು ಜೀವನ’ ಆನಂದಿಸಲು ಅನುವು ಮಾಡಿಕೊಡುತ್ತದೆ. ಈ ಹೊಸ ಶ್ರೇಣಿಯ ಫ್ರಂಟ್ ಲೋಡ್ ಬೀಸ್ಪೋಕ್ ಎಐ ವಾಶಿಂಗ್ ಮಷಿನ್‌ಗಳು ಅನುಕೂಲಕತೆ ಒದಗಿಸುತ್ತವೆ ಮತ್ತು ಪರಿಣಾಮಕಾರಿಯಾಗಿ ಬಟ್ಟೆ ತೊಳೆಯುವ ಸೌಕರ್ಯ ಒದಗಿಸುವ ಮೂಲಕ ವಿಶಿಷ್ಟವಾಗಿ ನಿಲ್ಲುತ್ತವೆ. ಪ್ರೀಮಿಯಂ ಬೀಸ್ಪೋಕ್ ಎಐ ವಾಶಿಂಗ್ ಮಷಿನ್‌ ಶ್ರೇಣಿಯ ಮೂಲಕ ನಾವು ಅತ್ಯುತ್ತಮ ಕಾರ್ಯ ನಿರ್ವಹಣೆ, ಅನುಕೂಲಕರ ಸೌಕರ್ಯ ಮತ್ತು ಸೌಂದರ್ಯವನ್ನು ಹಂಬಲಿಸುವ ಮತ್ತು ಹೆಚ್ಚಿನ ಸಾಮರ್ಥ್ಯದ ವಾಶಿಂಗ್‌ಮಷಿನ್ ಅನ್ನು ಬಯಸುವ ಗ್ರಾಹಕರ ಆಸೆಯನ್ನು ಪೂರೈಸುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದರು.

ವೈಯಕ್ತಿಕ ಲಾಂಡ್ರಿ ವಿಭಾಗದಲ್ಲಿ ಇನ್ನೊಂದು ಎತ್ತರವನ್ನು ಸಾಧಿಸಿರುವ ಸ್ಯಾಮ್ ಸಂಗ್‌ನ ಬೀಸ್ಪೋಕ್ ಎಐ ವಾಶಿಂಗ್ ಮೆಷಿನ್‌ಗಳ ಜೊತೆ ಸ್ಮಾರ್ಟ್ ಥಿಂಗ್ಸ್ ಆಪ್ ಅನ್ನು ಸಂಯೋಜಿಸಲಾಗಿದ್ದು, 2.8 ಮಿಲಿಯನ್ ಮಾಹಿತಿಗಳನ್ನು ಬಳಸಿಕೊಂಡು ಅತ್ಯುತ್ತಮ ಮತ್ತು ಪರಿಣಾಮಕಾರಿ ವಾಶಿಂಗ್ ಆಯ್ಕೆಗಳನ್ನು ಒದಗಿಸುತ್ತದೆ. ಈ ಉತ್ಪನ್ನವು ಪ್ರತೀ ಬಾರಿ ವಾಶಿಂಗ್ ಮಾಡುವಾಗಲೂ ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ಉಳಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಎಐ ಎನರ್ಜಿ ಮೋಡ್ ಶೇ.70ರಷ್ಟು ವಿದ್ಯುತ್ ಉಳಿತಾಯ ಮಾಡಲು ನೆರವಾಗುವ ಮೂಲಕ ಗ್ರಾಹಕರ ವಿದ್ಯುತ್ ಬಿಲ್‌ ಬಹಳಷ್ಟು ಕಡಿಮೆ ಮಾಡುತ್ತದೆ.

ಎಐ- ಆಧರಿತ ತಂತ್ರಜ್ಞಾನಗಳ ಮೂಲಕ ಬಳಕೆದಾರರಿಗೆ ಸೊಗಸಾದ ಅನುಭವ ಲಭ್ಯ

ಬೀಸ್ಪೋಕ್ ಎಐ ವಾಶಿಂಗ್ ಮಷಿನ್‌ಗಳಲ್ಲಿರುವ ಎಐ ಚಾಲಿತ ಫೀಚರ್‌ಗಳು ಬಟ್ಟೆ ಒಗೆಯುವ ಪ್ರಕ್ರಿಯೆಯ ಶ್ರಮ ಕಡಿಮೆ ಮಾಡುತ್ತಿದ್ದು, ಹೆಚ್ಚು ಬುದ್ಧಿವಂತ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಅನುಭವವನ್ನು ಒದಗಿಸುವ ಮೂಲಕ ಬಳಕೆದಾರರ ಜೀವನಶೈಲಿಯನ್ನು ಉತ್ತಮ ಗೊಳಿಸುತ್ತದೆ. ವಿಶೇಷ ಎಂದರೆ ಈ ಹೊಸ ಎಐ ವಾಶಿಂಗ್ ಮಷಿನ್ ಬಟ್ಟೆ ಒಗೆಯುವ ಶ್ರಮವನ್ನು ಕಡಿಮೆ ಮಾಡುವ ಮೂಲಕ ಬಟ್ಟೆ ತೊಳೆಯುವ ಆಲೋಚನೆಯನ್ನೇ ಹೊರಹಾಕುವಂತೆ ಮಾಡುತ್ತದೆ.

ಇದರಲ್ಲಿರುವ ಎಐ ವಾಶ್ ಫೀಚರ್ ಬಟ್ಟೆಯ ತೂಕ ಮತ್ತು ಮೃದುತ್ವವನ್ನು ಪತ್ತೆಹಚ್ಚಲು ಅತ್ಯಾಧುನಿಕ ಸೆನ್ಸರ್ ಅನ್ನು ಬಳಸುತ್ತದೆ. ಜತೆಗೆ ಸಾಯಿಲ್ ಲೆವೆಲ್ ಟ್ರ್ಯಾಕಿಂಗ್ ವ್ಯವಸ್ಥೆಯು ನೀರಿನ ಪ್ರಕ್ಷುಬ್ಧತೆಯ ಮಟ್ಟದ ಆಧಾರದ ಮೇಲೆ ಪ್ರಸ್ತುತ ಇರುವ ಮಣ್ಣಿನ ಅಂಶದ ಮೇಲೆ ನಿಗಾ ವಹಿಸಿ ಉತ್ತಮವಾಗಿ ಬಟ್ಟೆಯನ್ನು ತೊಳೆಯಲು ಅವಶ್ಯ ಇರುವ ನೀರು ಮತ್ತು ಡಿಟರ್ಜೆಂಟ್ ಅನ್ನು ಬಳಕೆ ಮಾಡುತ್ತದೆ. ಆಟೋ ಡಿಸ್ಪೆನ್ಸ್ ಫೀಚರ್ ನಿಮಗೆ ಅಂದಾಜು ಮಾಡುವ ಕೆಲಸವನ್ನು ನೀಡದೆ ಸೂಕ್ತ ಪ್ರಮಾಣದ ಡಿಟರ್ಜೆಂಟ್ ಅನ್ನು ಮತ್ತು ಫ್ಯಾಬ್ರಿಕ್ ಸಾಫ್ಟ್‌ನರ್ ಅನ್ನು ಆಟೋಮ್ಯಾಟಿಕ್ ಆಗಿ ಬಿಡುಗಡೆ ಮಾಡುತ್ತದೆ. ಸ್ಮಾರ್ಟ್ ಥಿಂಗ್ಸ್ ಆಪ್ ಮೂಲಕ ಲಭ್ಯವಿರುವ ಎಐ ಎನರ್ಜಿ ಮೋಡ್‌ ಅನ್ನು ಬಳಸಿಕೊಂಡು ನಿಮ್ಮ ಗೃಹೋಪಯೋಗಿ ಉಪಕರಣಗಳ ವಿದ್ಯುತ್ ಬಳಕೆಯನ್ನು ನೀವು ನಿರ್ವಹಿಸಬಹುದು ಮತ್ತು ಈ ಪ್ರಕ್ರಿಯೆಯಲ್ಲಿ ಹಣ ಉಳಿತಾಯ ಮಾಡಬಹುದು. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ವಿದ್ಯುತ್ ಬಳಕೆಯ ಮೇಲೆ ನಿಗಾ ಇಡಬಹುದು. ಜೊತೆಗೆ ಮಾಸಿಕ ವಿದ್ಯುತ್ ಬಿಲ್‌ ಅನ್ನು ಅಂದಾಜು ಮಾಡಬಹುದು. ಒಂದು ವೇಳೆ ಬಿಲ್ ನಿಮ್ಮ ನಿಗದಿತ ಗುರಿಯನ್ನು ಮೀರುವ ಸುಳಿವು ಸಿಕ್ಕಿದರೆ ಆಪ್ ಎನರ್ಜಿ ಸೇವಿಂಗ್ ಮೋಡ್ ಅನ್ನು ಆನ್ ಮಾಡಬಹುದು.

ಎಐ ಕಂಟ್ರೋಲ್ ಫೀಚರ್, ಬಳಕೆದಾರರಿಗೆ ಹೆಚ್ಚು ಸೂಕ್ತವಾದ ಬಟ್ಟೆ ಒಗೆಯುವ ಸಮಯವನ್ನು ಸೂಚಿಸುವುದಕ್ಕೆ ಹ್ಯಾಬಿಟ್ ಲರ್ನಿಂಗ್ ಮೂಲಕ ಗ್ರಾಹಕರ ಅಭ್ಯಾಸಗಳನ್ನು ಕಲಿಯುತ್ತದೆ ಮತ್ತು ಅದಕ್ಕೆ ಹೊಂದಿಕೊಳ್ಳುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಮಾರ್ಟ್ ಥಿಂಗ್ಸ್ ಕ್ಲೋಥಿಂಗ್ ಕೇರ್‌ ಮೂಲಕ ಬಳಕೆದಾರರು ಎಐ ಕಂಟ್ರೋಲ್ ಫೀಚರ್ ಶಿಫಾರಸು ಮಾಡಿದ ಸಮಯವನ್ನು ಆಧರಿಸಿಕೊಂಡು ನಿಮ್ಮ ಬಟ್ಟೆ ಒಗೆಯುವ ಸಮಯ ಅಥವಾ ಸೈಕಲ್ ಅನ್ನು ಸೇವ್ ಮಾಡಬಹುದು. ಸ್ಮಾರ್ಟ್‌ಥಿಂಗ್ಸ್ ಗೋಯಿಂಗ್ ಔಟ್ ಮೋಡ್ ಬಳಕೆದಾರರು ಹೊರಗಡೆ ಹೋಗಿದ್ದಾಗ ಬಟ್ಟೆ ಒಗೆಯುವ ಪ್ರಕ್ರಿಯೆಯ ಸಮಯದ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲದಂತೆ ದೂರದಲ್ಲಿ ಇದ್ದರೂ ತಮ್ಮ ಬಟ್ಟೆ ಒಗೆಯುವ ಪ್ರಕ್ರಿಯೆಯನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಬಳಕೆದಾರರು ತಾವೇ ಸೆಟ್ ಮಾಡಿರುವ ಜಿಯೋಫೆನ್ಸ್ ಮಿತಿಯನ್ನು ದಾಟಿದಾಗ ಬುದ್ಧಿವಂತಿಕೆಯಿಂದ ಬಟ್ಟೆ ತೊಳೆಯುವ ಪ್ರಕ್ರಿಯೆಯನ್ನು ರೀಶೆಡ್ಯೂಲ್ ಮಾಡಲು ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಗೆ ನೋಟಿಫಿಕೇಷನ್ ಅನ್ನು ಕಳುಹಿಸುವಂತೆ ಮಾಡುತ್ತದೆ.

ಒಂದು ವೇಳೆ ಬಟ್ಟೆ ಒಗೆಯುವ ಅವಧಿ ಮುಗಿದ ನಂತರವೂ ವ್ಯಕ್ತಿಗಳು ಬಟ್ಟೆಗಳನ್ನು ಅಲ್ಲಿಂದ ತೆಗೆದುಕೊಳ್ಳದಿದ್ದರೆ ಅದು ಲಾಂಡ್ರಿ ಅಲಾರಾಂ ರಿಮೈಂಡರ್ ಅನ್ನು ಕಳುಹಿಸುತ್ತದೆ ಎಂದುಕೊಳ್ಳೋಣ. ಆಗ ಅವರು ತಮ್ಮ ಬಟ್ಟೆಯಿಂದ ಹೊರಹೊಮ್ಮಬಹುದಾದ ವಾಸನೆಯನ್ನು ತೊಡೆಯಲು ರಿನ್ಸ್ + ಸ್ಪಿನ್ ಆಯ್ಕೆಯನ್ನು ಬಳಸಬಹುದು. ಸ್ಮಾರ್ಟ್ ಥಿಂಗ್ಸ್ ಹೋಮ್ ಕೇರ್* ವಾಶಿಂಗ್ ಮಷಿನ್‌ನ ಕಾರ್ಯ ನಿರ್ವಹಣೆಯನ್ನು ನಿಗಾ ವಹಿಸುತ್ತದೆ. ಗ್ರಾಹಕರಿಗೆ ಮೊದಲೇ ನಿರ್ವಹಣಾ ಮಾಹಿತಿಯನ್ನು ನೀಡುತ್ತದೆ ಮತ್ತು ಗ್ಯಾಲಕ್ಸಿ ಡಿವೈಸ್ ನಲ್ಲಿ ದೋಷನಿವಾರಿಸುವ ಸಲಹೆಗಳನ್ನು ನೀಡುತ್ತದೆ.

ಸೂಪರ್‌ಸ್ಪೀಡ್ ಆಯ್ಕೆಯು ಬಟ್ಟೆ ತೊಳೆಯುವ ಕಾರ್ಯ ನಿರ್ವಹಣೆಯಲ್ಲಿ ರಾಜಿ ಮಾಡಿಕೊಳ್ಳದೆ ಬಟ್ಟೆ ತೊಳೆಯುವ ಸಮಯವನ್ನು 39 ನಿಮಿಷಗಳಿಗೆ ಇಳಿಸುತ್ತದೆ. ಜೊತೆಗೆ ಕ್ಯೂ-ಬಬಲ್ ಮತ್ತು ಸ್ಪೀಡ್ ಸ್ಪ್ರೇಯಂತಹ ಹೊಸ ಫೀಚರ್‌ಗಳು ಅತ್ಯುತ್ತಮವಾಗಿ ಶುಚಿಗೊಳಿಸುವಿಕೆಯ ಪ್ರಕ್ರಿಯೆ ಉಂಟಾಗುವಂತೆ ನೋಡಿಕೊಳ್ಳುತ್ತದೆ ಮತ್ತು ಉತ್ತಮ ಬಟ್ಟೆ ತೊಳೆಯುವಿಕೆಯನ್ನು ಸಾಧ್ಯವಾಗಿಸುತ್ತದೆ. ಟೆಂಪರ್ಡ್ ಗ್ಲಾಸ್ ಡೋರ್‌ ಮೂಲಕ ದೀರ್ಘ ಬಾಳಿಕೆ ಮತ್ತು ಸೊಗಸು ಎರಡೂ ಲಭ್ಯವಾಗುತದೆ. ಜೊತೆಗೆ ಲೆಸ್ ಮೈಕ್ರೋಫೈಬರ್ ಸೈಕಲ್ ಮೈಕ್ರೋಪ್ಲಾಸ್ಟಿಕ್ ಬಿಡುಗಡೆಯನ್ನು ಶೇ.54ವರೆಗೆ ಕಡಿಮೆ ಮಾಡುತ್ತದೆ ಮತ್ತು ಆ ಮೂಲಕ ಸುಸ್ಥಿರತೆಗೆ ಕೊಡುಗೆ ನೀಡುತ್ತದೆ.

ಹೈಜೀನ್ ಸ್ಟೀಮ್ ಸೌಕರ್ಯವು ಅತ್ಯುತ್ತಮ ಸ್ವಚ್ಛತೆಯನ್ನು ಒದಗಿಸುತ್ತಿದ್ದು, ಶೇ. 99.9ರಷ್ಟು ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ ಮತ್ತು ಆರೋಗ್ಯಕರ ಬಟ್ಟೆ ತೊಳೆಯುವಿಕೆಗೆ ಅನುವು ಮಾಡಿಕೊಡಲು ಅಲರ್ಜಿ ಉಂಟು ಮಾಡುವ ಅಂಶಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಡಿಜಿಟಲ್ ಇನ್ವರ್ಟರ್ ತಂತ್ರಜ್ಞಾನದಿಂದ ನಡೆಸಲ್ಪಡುವ ಈ ವಾಶಿಂಗ್ ಮಷಿನ್‌ಗಳು ಕಡಿಮೆ ವಿದ್ಯುತ್ ಬಳಕೆ, ಕಡಿಮೆ ಶಬ್ದ ಮಾಲಿನ್ಯ ಸಾಧ್ಯವಾಗಿಸುತ್ತದೆ ಮತ್ತು ದೀರ್ಘಾವಧಿಯ ಕಾರ್ಯ ನಿರ್ವಹಣಾ ಸಾಮರ್ಥ್ಯ ಒದಗಿಸುತ್ತದೆ. ವಿಶೇಷವಾಗಿ ಈ ಉತ್ಪನ್ನಗಳು 20-ವರ್ಷಗಳ ವಾರಂಟಿಯನ್ನು (ಮೋಟಾರ್‌ ಮೇಲೆ) ಹೊಂದಿವೆ.

ವಿನ್ಯಾಸ ಮತ್ತು ಲಭ್ಯತೆ
ಹೊಳಪಾದ ಗುಣ ಹೊಂದಿರುವ ಬೀಸ್ಪೋಕ್ ಎಐ ವಾಶಿಂಗ್ ಮಷಿನ್‌ಗಳು ಅವುಗಳ ಪ್ರೀಮಿಯಂ ಲುಕ್ ನಿಂದಾಗಿ ಯಾವುದೇ ಶೈಲಿಯ ಆಧುನಿಕ ಒಳಾಂಗಣದ ಜೊತೆಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ವಾಶಿಂಗ್ ಮಷಿನ್‌ಗಳು ಇಂದಿನಿಂದಲೇ ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ Samsung.com, ಸ್ಯಾಮ್ ಸಂಗ್ ಶಾಪ್ ಆಪ್, ರಿಟೇಲ್ ಅಂಗಡಿಗಳು ಮತ್ತು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತವೆ.

ಬೆಲೆ & ಕೈಗೆಟಕುವಿಕೆ
ಬೀಸ್ಪೋಕ್ ಎಐ ವಾಶಿಂಗ್ ಮಷಿನ್‌ಗಳ ಬೆಲೆ 52,990 ರೂ. ರಿಂದ 74990 ರೂ. ವರೆಗೆ ಇದೆ. ಸ್ಯಾಮ್ ಸಂಗ್ ಫೈನಾನ್ಸ್+ ಸಹಾಯ ಪಡೆಯುವ ಮೂಲಕ ಗ್ರಾಹಕರು ಹೊಸ ವಾಶಿಂಗ್ ಮಷಿನ್‌ಗಳನ್ನು ಸುಲಭ ಇಎಂಐ ಆಯ್ಕೆಗಳ ಜೊತೆ ಖರೀದಿಸಬಹುದು. ಸ್ಯಾಮ್‌ಸಂಗ್ ಫೈನಾನ್ಸ್ + ಡಿಜಿಟಲ್ ಮತ್ತು ದಾಖಲೆ ರಹಿತ ಫೈನಾನ್ಸ್ ಒದಗಿಸುವ ವೇದಿಕೆ ಆಗಿದ್ದು, ಕೆಲವೇ ನಿಮಿಷಗಳಲ್ಲಿ ಇಲ್ಲಿ ಸಾಲ ಒದಗಿಸಲಾಗುತ್ತದೆ.\

ಸಾಮರ್ಥ್ಯ ಎಂಆರ್‌ಪಿ (ಬೆಲೆ ರೂ.ಗಳಲ್ಲಿ ) ಬಣ್ಣ
12ಕೆಜಿ 52990  ಐನಾಕ್ಸ್
12ಕೆಜಿ 53990 ನೇವಿ
12ಕೆಜಿ 56990 ಬ್ಲ್ಯಾಕ್
12ಕೆಜಿ 59990 ನೇವಿ
12ಕೆಜಿ 60990 ಬ್ಲ್ಯಾಕ್
12ಕೆಜಿ 60990 ನೇವಿ
12ಕೆಜಿ 65990 ಐನಾಕ್ಸ್
12ಕೆಜಿ 69990 ಬ್ಲ್ಯಾಕ್
12ಕೆಜಿ 73990 ನೇವಿ
12ಕೆಜಿ  74990 ಐನಾಕ್ಸ್

ಸ್ಮಾರ್ಟ್ ಥಿಂಗ್ಸ್ ಆ್ಯಪ್ ಆ್ಯಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಲ್ಲಿ ಲಭ್ಯವಿದೆ. ಪ್ರತ್ಯೇಕ ವೈಫೈ ಸಂಪರ್ಕ ಮತ್ತು ಸ್ಯಾಮ್ ಸಂಗ್ ಖಾತೆಯ ಅಗತ್ಯ ಬಹುಶಃ ಬೀಳಬಹುದು. ಹೊಂದಿಕೊಳ್ಳುವ ಸಾಧನಗಳ ಜೊತೆಗೆ ಕನೆಕ್ಟಿವಿಟಿ ಆಧಾರದಲ್ಲಿ ನಿರ್ಧಾರವಾಗುತದೆ.

ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ – http://news.samsung.com/in