Saturday, 12th October 2024

Stock Market: ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌, ನಿಫ್ಟಿ ಭಾರೀ ಕುಸಿತ

Stock Market

ಮುಂಬೈ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಭಾರತೀಯ ಷೇರುಪೇಟೆ (Stock Market)ಯ ಮೇಲೂ ಪರಿಣಾಮ ಬೀರಿದ್ದು, ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳು ಸೋಮವಾರ ತಮ್ಮ ಲಾಭವನ್ನು ಕಳೆದುಕೊಂಡು ನಷ್ಟದಲ್ಲೇ ವಹಿವಾಟು ಆರಂಭಿಸಿವೆ. ಬಿಎಸ್ಇ ಸೆನ್ಸೆಕ್ಸ್ (BSE Sensex) 721 ಪಾಯಿಂಟ್ಸ್ ಅಥವಾ ಶೇಕಡಾ 0.74ರಷ್ಟು ಕುಸಿದು 84,850ಕ್ಕೆ ತಲುಪಿದರೆ, ನಿಫ್ಟಿ 50 (Nifty50) 193 ಪಾಯಿಂಟ್ಸ್ ಅಥವಾ ಶೇಕಡಾ 0.58ರಷ್ಟು ಕುಸಿದು 25,985ಕ್ಕೆ ಬಂದು ಮುಟ್ಟಿದೆ.

ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಆರಂಭಿಕ ಕುಸಿತ ಕಂಡಿದ್ದು, ಎನ್‌ಟಿಪಿಸಿ, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟೈಟಾನ್ ಮತ್ತು ಬಜಾಜ್ ಫೈನಾನ್ಸ್ ಮುನ್ನಡೆ ಸಾಧಿಸಿದರೆ, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಟಿಸಿಎಸ್ ನಷ್ಟವನ್ನು ಅನುಭವಿಸಿದೆ. ನಿಫ್ಟಿ 50ರಲ್ಲಿ 50 ಷೇರುಗಳ ಪೈಕಿ 28 ಷೇರುಗಳು ನಷ್ಟದಲ್ಲಿವೆ. ಹೀರೋ ಮೋಟೋಕಾರ್ಪ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಮತ್ತು ಮಹೀಂದ್ರಾ ಮತ್ತು ಮಹೀಂದ್ರಾಗಳು ನಷ್ಟವನ್ನು ಮುನ್ನಡೆಸಿದರೆ, BPCL, NTPC, ಹಿಂಡಾಲ್ಕೊ, JSW ಸ್ಟೀಲ್ ಮತ್ತು ಟಾಟಾ ಸ್ಟೀಲ್ ಹಿನ್ನಡೆ ಅನುಭವಿಸಿದೆ.

ಮಾರುಕಟ್ಟೆ ಕುಸಿತದ ಹಿಂದಿನ ಕಾರಣವೇನು?

ಅಮೇರಿಕದಲ್ಲಿ ಉದ್ಯೋಗ ವರದಿಗೆ ಮುಂಚಿತವಾಗಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಇದು ಬಡ್ಡಿದರ ಕಡಿತಕ್ಕೆ ಫೆಡರಲ್ ರಿಸರ್ವ್‌ನ ವಿಧಾನದ ಮೇಲೆ ಪರಿಣಾಮ ಬೀರಲಿದೆ. ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ಇತ್ತೀಚಿನ ಹೇಳಿಕೆಗಳು ಕಾರ್ಮಿಕ ಮಾರುಕಟ್ಟೆ ದುರ್ಬಲಗೊಳ್ಳುತ್ತಿರುವ ಬಗ್ಗೆ ಕಳವಳ ಉಂಟು ಮಾಡಿದೆ. ಇದು ಸೆಪ್ಟೆಂಬರ್‌ನಲ್ಲಿ ಸಂಭಾವ್ಯ ದರ ಕಡಿತಕ್ಕೆ ಕಾರಣವಾಗಿದೆ. ವಿಶ್ಲೇಷಕರು 165,000 ಹೊಸ ಉದ್ಯೋಗಗಳ ಹೆಚ್ಚಳ ಮತ್ತು ನಿರುದ್ಯೋಗ ದರವು ಶೇ. 4.2ಕ್ಕೆ ಇಳಿಯುತ್ತದೆ ಎಂದು ನಿರೀಕ್ಷಿಸಿದ್ದಾರೆ.

ಜಾಗತಿಕ ಮಾರುಕಟ್ಟೆ ಹೇಗಿದೆ?

ಏಷ್ಯಾ ಮಾರುಕಟ್ಟೆ ದೃಢವಾಗಿದ್ದು,ಲೆಬನಾನ್‌ನಾದ್ಯಂತ ಮುಂದುವರಿದ ಇಸ್ರೇಲ್‌ ವೈಮಾನಿಕ ದಾಳಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದೆ. ಆ ಮೂಲಕ ಷೇರುದಾರರು ಭಾರೀ ನಷ್ಟವನ್ನು ಅನುಭವಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Stock Market: ಷೇರುಪೇಟೆಯಲ್ಲಿ ಗೂಳಿ ನೆಗೆತ; ಹೊಸ ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ