Thursday, 12th December 2024

Stock Market: ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ; ಸೆನ್ಸೆಕ್ಸ್‌ 700 ಪಾಯಿಂಟ್‌ ಕುಸಿತ

Stock Market

ಮುಂಬೈ: ಭಾರತೀಯ ಷೇರುಪೇಟೆಯ ಸೂಚ್ಯಂಕ ಶುಕ್ರವಾರ ಸತತ ಎರಡು ಬಾರಿ ಕುಸಿತಕ್ಕೆ ಸಾಕ್ಷಿಯಾಯಿತು. ಆರಂಭದಲ್ಲಿ ಬಿಎಸ್ಇ ಸೆನ್ಸೆಕ್ಸ್ (BSE Sensex) 850 ಪಾಯಿಂಟ್ಸ್ (0.69%) ಕುಸಿದು 81,711.28 ಕ್ಕೆ ತಲುಪಿದರೆ, ನಿಫ್ಟಿ 50 (Nifty50) 230.30 ಪಾಯಿಂಟ್ಸ್ (0.92%) ಕುಸಿದು 24,900.05ಕ್ಕೆ ತಲುಪಿತು. ಬಳಿಕ ಬಿಎಸ್ಇ ಸೆನ್ಸೆಕ್ಸ್ ಮತ್ತೆ 734 ಪಾಯಿಂಟ್ಸ್ ಅಥವಾ 0.89% ಕುಸಿದು 81,467.62ಕ್ಕೆ ತಲುಪಿ ವಹಿವಾಟು ನಡೆಸುತ್ತಿದೆ. ಇದೇ ವೇಳೆ ನಿಫ್ಟಿ 50 ಕೂಡ 223 ಪಾಯಿಂಟ್ಸ್ ಅಥವಾ 0.89% ಕುಸಿದು 24,922.55ಕ್ಕೆ ತಲುಪಿದೆ (Stock Market).

ಸೆನ್ಸೆಕ್ಸ್ ಷೇರುಗಳ ಪೈಕಿ ಎಸ್‌ಬಿಐ, ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನಷ್ಟ ಅನುಭವಿಸಿದರೆ, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್‌, ಏಷ್ಯನ್ ಪೈಂಟ್ಸ್‌ ಮತ್ತು ಟಿಸಿಎಸ್ ಲಾಭದತ್ತ ಮುಖ ಮಾಡಿವೆ.

ವೈಯಕ್ತಿಕ ಷೇರುಗಳಲ್ಲಿ ಕೆಇಸಿ ಇಂಟರ್‌ನ್ಯಾಷನಲ್‌ ಕಂಪನಿಯು 1,423 ಕೋಟಿ ರೂ.ಗಳ ಆರ್ಡರ್‌ಗಳನ್ನು ಪಡೆದ ನಂತರ ಶೇ. 5ರಷ್ಟು ಏರಿಕೆಯಾಗಿದೆ. ವಲಯವಾರು ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇ. 1ಕ್ಕಿಂತ ಹೆಚ್ಚು ಕುಸಿದಿದೆ. ಜತೆಗೆ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ನ ಮೌಲ್ಯವೂ ಇಳಿದಿದೆ. ನಿಫ್ಟಿ ಆಟೋ, ಫೈನಾನ್ಷಿಯಲ್, ಮೆಟಲ್ಸ್, ಕನ್ಸೂಮರ್‌ ಡ್ಯೂರೇಬಲ್ಸ್ ಮತ್ತು ಆಯಿಲ್ & ಗ್ಯಾಸ್ ವಲಯಗಳು ಸಹ ನಷ್ಟದಲ್ಲಿಯೇ ವ್ಯವಹಾರ ಆರಂಭಿಸಿದವು. ದೇಶೀಯವಾಗಿ ಕೇಂದ್ರೀಕೃತವಾದ ಸಣ್ಣ ಕ್ಯಾಪ್‌ಗಳು ಶೇ. 0.4ರಷ್ಟು ಏರಿಕೆ ಕಂಡರೆ, ಮಧ್ಯಮ ಕ್ಯಾಪ್‌ಗಳು ಫ್ಲಾಟ್ ಆಗಿ ಉಳಿದವು.

ಇತ್ತ ಹಿಂದೂಸ್ತಾನ್ ಯೂನಿಲಿವರ್, ಸನ್ ಫಾರ್ಮಾ, ಅಪೊಲೊ ಆಸ್ಪತ್ರೆ, ಚೋಳಮಂಡಲಂ ಇನ್ವೆಸ್ಟ್‌ಮೆಂಟ್‌ & ಫೈನಾನ್ಸ್, ದಿವಿಸ್ ಲ್ಯಾಬ್ಸ್, ಲುಪಿನ್, ಡಿಮಾರ್ಟ್, ಎಚ್‌ಡಿಎಫ್‌ಸಿ ಎಎಂಸಿ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ, ಶ್ರೀರಾಮ್ ಫೈನಾನ್ಸ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಸೇರಿದಂತೆ 320ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.

ಬಿಎಸ್ಇ-ಲಿಸ್ಟೆಡ್ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವ್ಯವಹಾರದಲ್ಲಿ 465.14 ಲಕ್ಷ ಕೋಟಿ ರೂ.ಗಳಿಂದ ಸುಮಾರು 465.66 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿತ್ತು.

ಈ ಸುದ್ದಿಯನ್ನೂ ಓದಿ: Money Tips: PPF ಖಾತೆ ಹೊಂದಿದ್ದೀರಾ? ಬದಲಾದ ಈ ಹೊಸ ನಿಯಮ ತಿಳಿದಿರಲಿ

ಜಾಗತಿಕ ಮಾರುಕಟ್ಟೆಯ ಸ್ಥಿತಿ-ಗತಿ

ಇತ್ತ ಜಾಗತಿಕ ಮಾರುಕಟ್ಟೆಗಳು ಮಿಶ್ರ ಕಾರ್ಯ ಕ್ಷಮತೆಯನ್ನು ತೋರಿಸಿವೆ. ಜಪಾನ್ ಹೊರತುಪಡಿಸಿ ಎಂಎಸ್‌ಸಿಐಯ ಏಷ್ಯಾ-ಪೆಸಿಫಿಕ್ ಷೇರುಗಳ ವಿಶಾಲ ಸೂಚ್ಯಂಕವು ಶೇ. 0.2ರಷ್ಟು ಏರಿಕೆ ಕಂಡರೆ, ಜಪಾನ್‌ ನಿಕೈ ಷೇರುಪೇಟೆ ಸೂಚ್ಯಂಕ ಶೇ. 0.1ರಷ್ಟು ಕುಸಿದಿದೆ. ಚೀನಾದ ಷೇರು ಮಾರುಕಟ್ಟೆಯಲ್ಲಿ ಮಿಶ್ರ ಫಲಿತಾಂಶ ಪ್ರಕಟವಾಗಿದೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಫ್ಲಾಟ್ ಆಗಿ ಉಳಿದಿದೆ. ಇತ್ತ ತೈಲ ಬೆಲೆಗಳು ಸ್ಥಿರವಾಗಿವೆ. ಈ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಶುಕ್ರವಾರ ಏರಿಕೆ ಕಂಡಿದೆ.