Ruchi Gujjar: ಕೇನ್ಸ್ 2025: ಕತ್ತಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಿ ಮಿಂಚಿದ ನಟಿ, ಫೋಟೋ ನೋಡಿ
ಕೇನ್ಸ್ನಲ್ಲಿ ಭಾರತೀಯ ಮೂಲದ ರಾಜಸ್ತಾನದ ನಟಿ ರುಚಿ ಗುಜ್ಜರ್ ಕೂಡ ಭಾಗಿಯಾಗಿದ್ದಾರೆ. ಕತ್ತಲ್ಲಿ ಪಿಎಂ ಮೋದಿ ಭಾವಚಿತ್ರವಿರುವ ನೆಕ್ಲೆಸ್ ಧರಿಸಿ ನಟಿ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿರೋದು ಎಲ್ಲರ ಗಮನ ಸೆಳೆದಿದೆ. ಪ್ರಧಾನಿ ಮೋದಿಗೆ ಗೌರವ ಸಲ್ಲಿಸಲು ಈ ರೀತಿ ಮಾಡಿದ್ದಾಗೆ ನಟಿ ಹೇಳಿದ್ದಾರೆ.



ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್ನಲ್ಲಿ ನಡೆಯುತ್ತಿದೆ. ಭಾರತೀಯ ಚಿತ್ರರಂಗ ಸೇರಿದಂತೆ ಜಗತ್ತಿನ ಸಿನಿಮಾ ತಾರೆಯರು ಭಾಗವಹಿಸಿದ್ದಾರೆ. ಅವರು ಧರಿಸುವ ಉಡುಗೆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುತ್ತದೆ. 2025ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ರುಚಿ ಗುಜ್ಜರ್ (Ruchi Gujjar) ಭಾರತವನ್ನು ಪ್ರತಿನಿಧಿಸಿದ್ದರು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ರುಚಿ ಗುಜ್ಜರ್ ತಮ್ಮ ಸ್ಟೈಲಿಶ್ ಲುಕ್ನಲ್ಲಿ ಮಿಂಚಿದ್ದಾರೆ.

ರುಚಿ ಗುಜ್ಜರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ನೆಕ್ಲೇಸ್ ಧರಿಸಿ ಮಿಂಚಿದ್ದಾರೆ. ಸಾಂಪ್ರದಾಯಿಕ ರಾಜಸ್ಥಾನಿ ವಿನ್ಯಾಸವಿರುವ ಈ ಆಭರಣ, ಪ್ರಧಾನಿ ಮೋದಿ ಅವರ ಕಾರ್ಯವೈಖರಿಯಿಂದ ಪ್ರೇರಿತವಾಗಿದ್ದು, ನಟಿಯ ನೋಟಕ್ಕೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಆಳವನ್ನು ಸೇರಿಸಿದೆ. ನಟಿ ತೊಟ್ಟ ಈ ಉಡುಪನ್ನು ರೂಪಾ ಶರ್ಮಾ ವಿನ್ಯಾಸಗೊಳಿಸಿದ್ದಾರೆ. ರಾಜಸ್ಥಾನಿ ಲೆಹೆಂಗಾದಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ರುಚಿ ಗುಜ್ಜರ್ ತಮ್ಮ ನೆಕ್ಲೇಸ್ಗೆ ಸರಿಹೊಂದುವ ಕಿವಿಯೋಲೆ ಮತ್ತು ಸಾಂಪ್ರದಾಯಿಕ ಬಳೆಗಳನ್ನು ಧರಿಸಿದ್ದರು. ತಮ್ಮ ಕೈಗಳಿಗೆ ಕೆಂಪು ಆಲ್ತಾವನ್ನೂ ಹಚ್ಚಿಕೊಂಡಿದ್ದರು.

ರುಚಿ ಧರಿಸಿದ್ದ ನೆಕ್ಲೇಸ್ನಲ್ಲಿ ಪ್ರಧಾನಿ ಮೋದಿಯವರ ಫೋಟೋವಿದೆ. . ಈ ಮೂಲಕ ಮೋದಿ ಅವರಿಗೆ ನಟಿ ವಿಶೇಷವಾಗಿ ಗೌರವ ಸೂಚಿಸಿದ್ದಾರೆ. ನಟಿಯ ವಿಭಿನ್ನ ಲುಕ್ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿ, ಈ ನೆಕ್ಲೆಸ್ ಜ್ಯುವೆಲರಿ ಎನ್ನುವುದಕ್ಕಿಂತ ಹೆಚ್ಚಾಗಿ ಬಲದ ಸಂಕೇತ, ಗುರಿ ಹಾಗೂ ವಿಶ್ವ ಮಟ್ಟದಲ್ಲಿ ಭಾರತ ಬೆಳವಣೆಯಾಗುತ್ತಿರುವುದರ ಸಂಕೇತ. ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಾನು ಈ ನೆಕ್ಸೆಸ್ ಅನ್ನು ಧರಿಸಿ ಬಂದಿದ್ದೇನೆ ಎಂದರು.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸೂಚಿಸುತ್ತಿದ್ದೇನೆ. ಅವರ ನಾಯಕತ್ವದಿಂದ ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎಂದು ನಟಿ ಹೇಳಿದ್ದಾರೆ. ಕೇನ್ಸ್ನಲ್ಲಿ ರಾಜಸ್ಥಾನ ಮತ್ತು ಭಾರತವನ್ನು ಪ್ರತಿನಿಧಿಸುವುದು ಕೇವಲ ಒಂದು ಕ್ಷಣವಲ್ಲ. ನಾವು ಯಾರೆಂದು ಜಗತ್ತಿಗೆ ತಿಳಿಸುವ ಸಂದೇಶವಿದು ಎಂದು ರುಚಿ ಹೇಳಿದ್ದಾರೆ.

ಪ್ರತಿಷ್ಠಿತ ದೀ ಗ್ರ್ಯಾಂಡ್ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಕನ್ನಡದ ನಟಿ ಹಾಗೂ ಮಾಡೆಲ್ ಆಗಿರುವ ದಿಶಾ ಮದನ್ ಕೂಡ ಭಾಗವಹಿಸಿ ಗಮನ ಸೆಳೆದರು. . ಕಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಮಸ್ತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.