Thursday, 12th December 2024

ಇಂದಿನ ತೀರ್ಪಿನತ್ತ ಮಹಾ ಚಿತ್ತ

ಹೋಟೆಲ್‌ನಲ್ಲಿ ಶಾಸಕರ ಪರೇಡ್ ಸಂಸತ್‌ನಲ್ಲಿ ಗದ್ದಲ, ಕಲಾಪ ಮುಂದಕ್ಕೆೆ

ನವದೆಹಲಿ: ದೇವೇಂದ್ರ ಫಡ್ನವಿಸ್‌ಗೆ ಸರಕಾರ ರಚನೆ ಮಾಡಲು ತರಾತುರಿಯಲ್ಲಿ ಅವಕಾಶ ನೀಡಿದ ಮಹಾರಾಷ್ಟ್ರದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಿಸಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆೆಸ್ ಸಲ್ಲಿಸಿದ್ದ ಅರ್ಜಿ ಕುರಿತು ಮಂಗಳವಾರ ತನ್ನ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಾ. ಎನ್.ವಿ.ವರ್ಮಾ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾಾ ಅವರನ್ನೊೊಳಗೊಂಡ ಪೀಠವು ಸೋಮವಾರ ವಿಚಾರಣೆ ನಡೆಸಿದ ಬಳಿಕ ಈ ಮಾತನ್ನು ತಿಳಿಸಿತು. ಇಂದು 10.30ಕ್ಕೆೆ ಪೀಠವು ಆದೇಶ ನೀಡಲಿದ್ದು, ಸದನದಲ್ಲಿ ಬಹುಮತ ಸಾಬೀತು ಕುರಿತ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಮೂರೂ ಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರವೂ ಮುಂದುವರಿದು, ಎಲ್ಲ ಪಕ್ಷಗಳ ವಕೀಲರು ತಮ್ಮ ವಾದ ಮಂಡಿಸಿದರು.
ಮಹಾರಾಷ್ಟ್ರ ಬಿಜೆಪಿ ಪರವಾಗಿ ವಾದ ಮಂಡಿಸಿದ ಮುಕುಲ್ ರೋಹಟಗಿ ಅವರು,‘ಮುಖ್ಯಮಂತ್ರಿಿ ನೇಮಕವು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ. ಬಹುಮತ ಪರೀಕ್ಷೆೆ ಯಾವಾಗ ನಡೆಯಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸಬೇಕಾಗುತ್ತದೆ’ ಎಂದರು.
ಮಹಾರಾಷ್ಟ್ರ ರಾಜ್ಯಪಾಲರ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ‘54 ಎನ್‌ಸಿಪಿ ಶಾಸಕರ ಸಹಿಯುಳ್ಳ ಬೆಂಬಲ ಪತ್ರವನ್ನು ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಅಜಿತ್ ಪವಾರ್ ಅವರು ನ.22ರಂದು ಸಲ್ಲಿಸಿದ್ದು, ಅದರನ್ವಯ 23ರಂದು ಫಡ್ನವಿಸ್ ಅವರನ್ನು ಸರಕಾರ ರಚಿಸಲು ಆಹ್ವಾಾನಿಸಿದ್ದಾಾರೆ’ ಎಂದು ಹೇಳಿದರು.
ಶಿವಸೇನಾ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್ ಅವರು, 154 ಶಾಸಕರು ನೀಡಿರುವ ಪ್ರಮಾಣಪತ್ರ ತಮ್ಮ ಬಳಿ ಇದೆ. 24 ಗಂಟೆಗಳೊಳಗೆ ಬಹುಮತ ಸಾಬೀತುಪಡಿಸುವಂತೆ ಬಿಜೆಪಿ ಸರಕಾರಕ್ಕೆೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಇದು ಘೋರ ವಂಚನೆ ಎಂದು ಬಣ್ಣಿಿಸಿದ ಅಭಿಷೇಕ್ ಮನು ಸಿ್ಂವ , ‘ಬಿಜೆಪಿ ಜತೆ ಹೋಗಬೇಕು ಎಂದು ಒಬ್ಬ ಎನ್‌ಸಿಪಿ ಶಾಸಕನಾದರೂ ಹೇಳಿದ್ದಾಾರಾ’ ಎಂದು ಪ್ರಶ್ನಿಿಸಿದರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್, ಸರಕಾರ ರಚಿಸುವಂತೆ ಫಡ್ನವಿಸ್ ಅವರನ್ನು ಆಹ್ವಾಾನಿಸಿ ರಾಜ್ಯಪಾಲರು ಬರೆದ ಪತ್ರವನ್ನು ಪರಾಮರ್ಶಿಸಿತು. ಸದನದಲ್ಲಿ ಮುಖ್ಯಮಂತ್ರಿಿಗೆ ಬಹುಮತ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಾನು ನಿರ್ಧರಿಸಬೇಕಿದೆ ಎಂದು ತಿಳಿಸಿತು.

ರಾಜ್ಯಪಾಲರ ಭೇಟಿಯಾದ ಕೂಟ
ಮತ್ತೊೊಂದು ಸುತ್ತಿಿನ ರಾಷ್ಟ್ರಪತಿ ಆಡಳಿತ ಹೇರುವ ಸಂಭವನೀಯತೆಯನ್ನು ತಪ್ಪಿಿಸುವ ಕ್ರಮವಾಗಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆೆಸ್ ನಾಯಕರು ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರನ್ನು ಸೋಮವಾರ ಭೇಟಿ ಮಾಡಿದರು. ತಮಗೆ ಅಗತ್ಯ ಬಹುಮತ ಇದೆ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ಮಾರ್ದನಿಸಿದ ಮಹಾ ಬಿಕ್ಕಟ್ಟು
ಮಹಾರಾಷ್ಟ್ರದಲ್ಲಿ ಸರಕಾರ ರಚನೆ ವಿಷಯವಾಗಿ ಸಂಸತ್ತಿಿನಲ್ಲಿ ಕೋಲಾಹಲ ಉಂಟಾಯಿತು. ಪ್ರತಿಪಕ್ಷ, ಅದರಲ್ಲೂ ವಿಶೇಷವಾಗಿ ಕಾಂಗ್ರೆೆಸ್ ಸದಸ್ಯರ ಭಾರಿ ಪ್ರತಿಭಟನೆಯಿಂದಾಗಿ ಉಭಯ ಸದನಗಳ ಕಲಾಪವನ್ನು ಮಂಗಳವಾರಕ್ಕೆೆ ಮುಂದೂಡಲಾಯಿತು. ಇದಕ್ಕೂ ಮುನ್ನ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಶ್ನೋೋತ್ತರ ಅವಧಿಯಲ್ಲಿ ಪ್ರಶ್ನೆೆಯೊಂದನ್ನು ಕೇಳಬೇಕಿತ್ತು. ಆದರೆ ಅವರು ಎದ್ದು ನಿಂತು, ‘ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊೊಲೆಯಾಗಿದೆ. ಹೀಗಿರುವಾಗ ನಾನು ಪ್ರಶ್ನೆೆ ಕೇಳಿ ಏನು ಪ್ರಯೋಜನ’ ಎಂದು ಹೇಳಿ ಕುಳಿತರು. ಕಾಂಗ್ರೆೆಸ್ ಸದಸ್ಯರು ಭಿತ್ತಿಿಪತ್ರಗಳ್ನು ಹಿಡಿದು ಲೋಕಸಭೆಯ ಬಾವಿಯತ್ತ ನುಗ್ಗಿಿ ಘೋಷಣೆಗಳನ್ನು ಕೂಗಿದರು. ಇದರಿಂದ ಕೋಪಗೊಂಡ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆೆಸ್‌ನ ಇಬ್ಬರು ಸದಸ್ಯರಾದ ಹಿಬಿ ಈಡನ್ ಹಾಗೂ ಟಿ.ಎನ್.ಪ್ರತಾಪನ್ ಅವರನ್ನು ಹೊರಗೆ ಕಳಿಸಿದರು. ಗದ್ದಲ ನಿಯಂತ್ರಿಿಸಲು ಕಲಾಪವನ್ನು ಹಲವು ಬಾರಿ ನಿಯಂತ್ರಿಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಮಂಗಳವಾರಕ್ಕೆೆ ಮುಂದೂಡಲಾಯಿತು.

ಶಾಸಕರ ಪರೇಡ್
ಸರಕಾರ ರಚನೆಯ ಬಿಕ್ಕಟ್ಟಿಿನ ನಡುವೆ ಶಿವಸೇನೆಯ ಶಾಸಕರನ್ನು ಹೋಟೆಲ್‌ವೊಂದಕ್ಕೆೆ ಸ್ಥಳಾಂತರಿಸಲಾಯಿತು. ಎನ್‌ಸಿಪಿ-ಶಿವಸೇನಾ-ಕಾಂಗ್ರೆೆಸ್ ಪಕ್ಷದ ಒಟ್ಟು 162 ಶಾಸಕರಿದ್ದು, ಅವರನ್ನು ಈ ಹೋಟೆಲ್‌ನಲ್ಲಿ ಪರೇಡ್ ಮಾಡಿಸಲಾಯಿತು.

ಅಜಿತ್ ಪವಾರ್‌ಗೆ ಕ್ಲೀನ್‌ಚಿಟ್ ನೀಡಿಲ್ಲ
ಮಹಾರಾಷ್ಟ್ರದ ಉಪಮುಖ್ಯಮಂತ್ರಿಿ ಅಜಿತ್ ಪವಾರ್ ಅವರಿಗೆ ಸಂಬಂಧಿಸಿದ 2013ರ ನೀರಾವರಿ ಹಗರಣದ ಪ್ರಕರಣವನ್ನು ತಾನು ಕೈಬಿಟ್ಟಿಿಲ್ಲ ಎಂದು ಆ ರಾಜ್ಯದ ಭ್ರಷ್ಟಾಾಚಾರ ನಿಗ್ರಹ ದಳ (ಎಸಿಬಿ) ಸ್ಪಷ್ಟಪಡಿಸಿದೆ. ಈ ಕುರಿತು ಪ್ರತಿಪಕ್ಷಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದೆ. 9 ಪ್ರಕರಣಗಳನ್ನು ಕ್ಲೋೋಸ್ ಮಾಡಲಾಗಿದೆ. ಆದರೆ ಇವಾವವೂ ಅಜಿತ್ ಪವಾರ್‌ಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಲಸ ಆರಂಭಿಸಿದ ಫಡ್ನವಿಸ್
ಈ ಹಗ್ಗಜಗ್ಗಾಾಟದ ನಡುವೆಯೇ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ಮಖ್ಯಮಂತ್ರಿಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಮಾಡಿದ ಮೊದಲ ಕೆಲಸವೆಂದರೆ ಮುಖ್ಯಮಂತ್ರಿಿ ಪರಿಹಾರ ನಿಧಿಯಿಂದ ಹಣ ಬಿಡುಗಡೆಗೆ ಚೆಕ್‌ವೊಂದಕ್ಕೆೆ ಸಹಿ ಮಾಡಿದ್ದು.