Friday, 22nd November 2024

ಎಸ್‌ಬಿಐಗೆ 411 ಕೋಟಿ ರು ಪಂಗನಾಮ ಹಾಕಿ 3 ಉದ್ಯಮಿಗಳು ವಿದೇಶಕ್ಕೆ ಎಸ್ಕೇಪ್

ದೆಹಲಿ:

ರಾಷ್ಟ್ರೀಕೃತ ಬ್ಯಾಾಂಕ್‌ಗಳಿಂದ ಕೋಟ್ಯಂತರ ರು.ಗಳ ಸಾಲ ಪಡೆದು ವಂಚಿಸಿ ಉದ್ಯಮಿಗಳು ವಿದೇಶಕ್ಕೆ ಪರಾರಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಸಾಲಿಗೆ ಈಗ ಮತ್ತೊೊಂದು ಹಗರಣ ಸೇರ್ಪಡೆಯಾಗಿದೆ.

ಆರು ಬ್ಯಾಾಂಕ್‌ಗಳಿಂದ ರಾಮ್ ದೇವ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮೂವರು ಪ್ರವರ್ತಕರು 411 ಕೋಟಿ ರು.ಗಳ ಸಾಲ ಪಡೆದು ವಂಚಿಸಿ ಈಗ ವಿದೇಶಕ್ಕೆ ಪರಾರಿಯಾಗಿದ್ದು, ಈಗ ಸ್ಟೇಟ್ ಬ್ಯಾಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೂರಿನ ಅನ್ವಯ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದೆ.

ಈ ಸಂಸ್ಥೆಯು ಪಶ್ಚಿಮ ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಬಾಸುಮತಿ ಅಕ್ಕಿಯನ್ನು ರಫ್ತು ಮಾಡುವ ವಹಿವಾಟು ನಡೆಸುತ್ತಿತ್ತು. ಈ ಸಂಸ್ಥೆಯ ನಿರ್ದೇಶಕರು ಮತ್ತು ಪ್ರೊಮೊಟರ್‌ಗಳಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗೀತಾ ಆರು ಬ್ಯಾಾಂಕ್‌ಗಳಿಂದ ಒಟ್ಟು 411 ಕೋಟಿ ರು. ಸಾಲ ಪಡೆದು ಮರುಪಾವತಿಸದೇ ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ಆರ್ಥಿಕ ಅಪರಾಧಿಗಳಾಗಿ ವಿದೇಶಕ್ಕೆ ಪರಾರಿಯಾಗಿದ್ದಾರೆ.

ಇವರು ಎಸ್‌ಬಿಐ ಶಾಖೆಯೊಂದರಿಂದ 173 ಕೋಟಿ ರು. ಸಾಲ ಪಡೆದು ವಂಚಿಸಿರುವ ಬಗ್ಗೆ ಸಿಬಿಐಗೆ ದೂರು ನೀಡಲಾಗಿದೆ. ಈ ಕಂಪನಿಯು ಕರ್ನಾಲ್ ಜಿಲ್ಲೆಯಲ್ಲಿ ರೈಲ್ ಮಿಲ್ಲಿಂಗ್ ಫ್ಲಾಾಂಟ್‌ಗಳು, ಅಕ್ಕಿ ಗಿರಣಿಗಳು, ಸಂಸ್ಕರಣೆ ಮತ್ತು ಶ್ರೇಣಿ ಘಟಕಗಳನ್ನು ಹೊಂದಿವೆ. ಅಲ್ಲದೆ, ವಾಣಿಜ್ಯ ವ್ಯವಹಾರ ಉದ್ದೇಶಕ್ಕಾಗಿ ಸೌದಿ ಅರೇಬಿಯಾ ಮತ್ತು ದುಬೈನಲ್ಲಿ ಕಚೇರಿಗಳನ್ನು ಹೊಂದಿವೆ.
ಎಸ್‌ಬಿಐ ಅಲ್ಲದೇ ಈ ಮೂವರು ಪ್ರವರ್ತಕರು, ಕೆನರಾ ಬ್ಯಾಾಂಕ್, ಯೂನಿಯನ್ ಬ್ಯಾಾಂಕ್ ಆಫ್ ಇಂಡಿಯಾ, ಐಡಿಬಿಐ, ಸೆಂಟ್ರಲ್ ಬ್ಯಾಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೊರೇಷನ್ ಬ್ಯಾಾಂಕ್‌ಗಳಿಂದಲೂ ಸಾಲ ಪಡೆದು ವಂಚಿಸಿದ್ದಾರೆ.