Sunday, 15th December 2024

ಕರೋನಾ ಸೇನಾನಿಗಳಿಗೆ ಶಾ ಹಾಗೂ ರಾಜನಾಥ್ ಶ್ಲಾಘನೆ

ದೇಶಾದ್ಯಂತ ಕರೋನಾ ಸೇನಾನಿಗಳಿಗೆ ಹೂಮಳೆ ಸುರಿಸಿ ಗೌರವ ತೋರಿದ ಭಾರತೀಯ ಸೇನಾ ಪಡೆಗಳ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಧನ್ಯವಾದ ಸಮರ್ಪಿಸಿದ್ದಾರೆ.

ಭಾರತೀಯ ಸೇನೆ, ಭಾರತೀಯ ನೌಕಾ ಪಡೆ ಮತ್ತು ಭಾರತೀಯ ವಾಯು ಪಡೆಗಳು ಭಾನುವಾರ ದೆಹಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕದ ಬಳಿ ಕರೋನಾ ಸಾಂಕ್ರಾಮಿಕದ ವಿರುದ್ದ ಹೋರಾಡುತ್ತಿರುವರಿಗೆ ಗೌರವ ತೋರಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.

ಇದನ್ನು ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ದೇಶವನ್ನು ಕರೋನಾ ಮುಕ್ತವಾಗಿಸುವತ್ತ ಹಗಲು ರಾತ್ರಿ ಕೆಲಸ ಮಾಡುತ್ತಿರುವ ವೈದ್ಯರು, ಪೊಲೀಸರು, ಅರೆ ಸೇನಾಪಡೆಗಳೂ ಮತ್ತು ಇತರ ಸೇನಾನಿಗಳಿಗೆ ಭಾರತೀಯ ಸೇನಾ ಪಡೆ ಗೌರವ ತೋರಿರುವುದು ಹೃದಯಸ್ವರ್ಶಿಯಾಗಿದೆ ಎಂದಿದ್ದಾರೆ.