Saturday, 14th December 2024

ಜಿಯೋ ಜತೆಗೆ ಸಿಲ್ವರ್ ಲೇಕ್ ಒಬ್ಬಂದ

ದೆಹಲಿ:

ವಿಶ್ವ ವಿಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಮತ್ತೊೊಂದು ಭರ್ಜರಿ ಡೀಲ್ ಕುದುರಿದ್ದು, ವಿಶ್ವದ ಬೃಹತ್ ತಂತ್ರಜ್ಞಾನ ಹೂಡಿಕೆ ಸಂಸ್ಥೆೆಯಾದ ಸಿಲ್ವರ್ ಲೇಕ್ ರಿಲಾಯನ್‌ಸ್‌ ಒಡೆತನದ ಸಂಸ್ಥೆೆಯಲ್ಲಿ 5,656 ಕೋಟಿ ರು.ಗಳ ಬಂಡವಾಳ ತೊಡಗಿಸಿದೆ.

ಪ್ರತಿಷ್ಠಿತ ಫೇಸ್‌ಬುಕ್ ಮುಖೇಶ್ ಒಡೆತನದ ಜಿಯೋ ಪ್ಲಾಟ್‌ಫಾರಂನಲ್ಲಿ 43,574 ಕೋಟಿ ರು.ಗಳ ಬಂಡವಾಳ ಹೂಡಿಕೆ ಮಾಡಿದ ಕೆಲವೇ ದಿನಗಳಲ್ಲಿ ಮತ್ತೊೊಂದು ಭರ್ಜರಿ ವ್ಯವಹಾರಕ್ಕೆ ಒಪ್ಪಂದ ಏರ್ಪಟ್ಟಿದೆ. ಈ ಹೂಡಿಕೆಯೊಂದಿಗೆ ಮುಖೇಶ್ ಅಂಬಾನಿ ಏಷ್ಯಾದ ನಂಬರ್. 1 ಶ್ರೀಮಂತ ಎಂಬ ಪಟ್ಟ ಮತ್ತಷ್ಟು ಸುಭದ್ರವಾಗಿದೆ. ಫೇಸ್‌ಬುಕ್, ಅಂಬಾನಿ ಒಡೆತನದ ಸಂಸ್ಥೆಯಲ್ಲಿ ಭಾರೀ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ಮುಖೇಶ್, ಏಷ್ಯಾ ಖಂಡದ ನಂ.1 ಸಿರಿವಂತ ಸ್ಥಾನ ಅಲಂಕರಿಸಿದ್ದ ಚೀನಾದ ಖ್ಯಾತ ಉದ್ಯಮಿ ಜಾಕ್ ಮಾ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಗಳಿಸಿದ್ದರು.

ಜಗತ್ತಿನ ಟೆಕ್ ಇನ್‌ವೆಸ್‌ಟ್‌‌ನಲ್ಲಿ ಬೃಹತ್ ಸಂಸ್ಥೆಗಳಲ್ಲಿ ಒಂದಾದ ಸಿಲ್ವರ್ ಲೇಕ್ ಅಂಬಾನಿ ಅವರ ಡಿಜಿಟಲ್ ಯೂನಿಟ್‌ನಲ್ಲಿ ಶೇ.1.15ರಷ್ಟು ಪ್ರಮಾಣವನ್ನು ಖರೀದಿಸಲು 5,655.75 ಕೋಟಿ ರು.ಗಳನ್ನು ಹೂಡಲು ಸಮ್ಮತಿಸಿದೆ. ಜಿಯೋ ಫ್ಲಾಟ್‌ಫಾರಂನಲ್ಲಿ ಫೇಸ್‌ಬುಕ್ ಏ.22ರಂದು 43,574 ಕೋಟಿ ರು.ಗಳನ್ನು ಶೇ.12.5ರಷ್ಟು ಪ್ರೀಮಿಯಂ ದರದಲ್ಲಿ ಹೂಡಿಕೆ ಮಾಡಿದೆ.

ಸಿಲ್ವರ್ ಲೇಕ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರಂಗಳಲ್ಲಿ 5,655.75 ಕೋಟಿ ರು.ಗಳನ್ನು ತೊಡಗಿಸಲಿದೆ. ಈ ಹೂಡಿಕೆಯಿಂದಾಗಿ ಜಿಯೋ ಪ್ಲಾಟ್‌ಫಾರಂಗಳ ಬಂಡವಾಳ  ಮೌಲ್ಯವು 4.90 ಲಕ್ಷ ಕೋಟಿಯಷ್ಟಿದೆ ಹಾಗೂ ಉದ್ಯಮ ಮೌಲ್ಯವು 5.15 ಲಕ್ಷ ಕೋಟಿ ಇದೆ ಎಂದು ರಿಲಾಯನ್‌ಸ್‌ ಸಂಸ್ಥೆ  ತಿಳಿಸಿದೆ.