Sunday, 15th December 2024

ದೆಹಲಿಯಲ್ಲಿ 1 ತಿಂಗಳಲ್ಲಿ 3 ಭೂಕಂಪ

ದೆಹಲಿ:

ರಾಷ್ಟ್ರ ರಾಜಧಾನಿ ಮತ್ತು  ಅದರ ಸುತ್ತಮುತ್ತಲಿನ ಪ್ರದೇಶಗಳು ಕರೋನಾ ವಿರುದ್ದ ಹೋರಾಡುತ್ತಿರುವುದು ಮಾತ್ರವಲ್ಲದೆ ಈ ಪ್ರದೇಶವು ಒಂದು ತಿಂಗಳಲ್ಲಿ ಮೂರು ಭೂಕಂಪಗಳನ್ನು ಕಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಭೂಕಂಪದಿಂದ  ಆಸ್ತಿಪಾಸ್ತಿ ನಷ್ಟವಾಗಿಲ್ಲ ಹಾಗೂ ಯಾರಿಗೂ ಹಾನಿಯಾಗಿಲ್ಲ. ಈ ಘಟನೆಯನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ.
ದೆಹಲಿಯ ಎನ್‌ಸಿಆರ್‌ನಲ್ಲಿ ಭಾನುವಾರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿತ್ತು. ಇದರ ಕೇಂದ್ರ ಬಿಂದು ದೆಹಲಿ ಉತ್ತರ ಪ್ರದೇಶ ಗಡಿಯಾಗಿದೆ.