Sunday, 24th November 2024

ನರ್ಸ್ ಹಾಗೂ ಆರೋಗ್ಯ ಕಾರ್ಯಕರ್ತರಿಲ್ಲದೆ ಸಾಂಕ್ರಾಮಿಕ ರೋಗ ಗೆಲ್ಲಲು ಅಸಾಧ್ಯ: ಡಾ.ಹರ್ಷವರ್ಧನ್

ದೆಹಲಿ:

ಕರೋನಾ ವಿರುದ್ದದ ಹೋರಾಟದಲ್ಲಿ ತೊಡಗಿರುವ ನರ್ಸಿಂಗ್ ವೃತ್ತಿಯ ಸಿಬ್ಬಂದಿಯ ಕೆಲಸ ಮತ್ತು ಸ್ವಾರ್ಥ ರಹಿತ
ಸೇವೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಂಗಳವಾರ ಶ್ಲಾಸಿದ್ದಾರೆ.

ವಿಡಿಯೋ ಕಾನ್ಪರೆನ್‌ಸ್‌ ಮೂಲಕ ಅಂತಾರಾಷ್ಟೀಯ ನರ್ಸ್‌ಗಳ ದಿನ ಮತ್ತು ಪ್ಲೋರೆನ್‌ಸ್‌ ನೈಟಿಂಗಲ್ ಅವರ 200ನೇ ಜನ್ಮವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ಪಾಲ್ಲೊೊಂಡ ಶುಶ್ರೂಷಕರು ಭಾರತದ ಆರೋಗ್ಯ ಸೇವಾ  ವ್ಯವಸ್ಥೆಯ ಆಧಾರ ಸ್ತಂಬಗಳು ಎಂದು ತಿಳಿಸಿದ್ದಾರೆ.

ಶುಶ್ರೂಷಕರು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಲ್ಲದೆ, ನಾವು ಸಾಂಕ್ರಾಮಿಕದ ವಿರುದ್ದ ಹೋರಾಡಲು ಸಾಧ್ಯವಿಲ್ಲ. ಅದರಲ್ಲಿಯೂ ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷವನ್ನು ಶುಶ್ರೂಷಕರು ಮತ್ತು ದಾದಿಯರ ವರ್ಷ ಎಂದು ಘೋಷಿಸಿದೆ ಎಂದು ತಿಳಿಸಿದ್ದಾರೆ. ನರ್ಸ್‌ಗಳ ಬದ್ದತೆ ಮತ್ತು ನಿಯತ್ತಿನ ಕೆಲಸವನ್ನು ಬಣ್ಣಿಸಲು ಸಾಧ್ಯವಿಲ್ಲ. ನಿಮ್ಮ ಕರುಣೆ, ಬದ್ದತೆ ಮತ್ತು ಆತ್ಮೀಯ ಸ್ಪರ್ಷ ಹಾಗೂ ಯಾವಾಗಲೂ ರೋಗಿಗಳಿಗೆ ಪ್ರಾಧಾನ್ಯತೆ ನೀಡುವ ಗುಣಗಳಿಗೆ ಧನ್ಯವಾದಗಳನ್ನು ತಿಳಿಸಿದರು.