Sunday, 15th December 2024

ನಾಲ್ಕೇ ದಿನಕ್ಕೆ ದೇವೇಂದ್ರ ದರ್ಬಾರ್ ಢಮಾರ್

ಮಹಾ ಆ್ಯಂಟಿ ಕ್ಲೈಮ್ಯಾಾಕ್‌ಸ್‌ ಪವರ್ ಫೇಲ್‌ನಿಂದ ಫಡ್ನವಿಸ್ ಕಂಗಾಲ್ ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಾಗ ಸಿಎಂ ಆಗಿ ಉದ್ಧವ್ ಠಾಕ್ರೆೆ ಆಯ್ಕೆೆ ಜಯಂತ್ ಪಾಟೀಲ್, ಬಾಳಾಸಾಹೇಬ್ ಥೋರಟ್ ಡಿಸಿಎಂ ಡಿ.1ರಂದು ಪ್ರಮಾಣವಚನ ಬುಧವಾರವೇ ಬಹುಮತ ಸಾಬೀತಿಗೆ ಕೋರ್ಟ್ ಸೂಚನೆ ಬೆನ್ನಲ್ಲೇ ಕ್ಷಿಿಪ್ರ ರಾಜಕೀಯ ಬೆಳವಣಿಗೆ

ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಮಹಾನಾಟಕ ಒಂದು ಸುತ್ತು ಬಂದು ಇದೀಗ ಆ್ಯಂಟಿ ಕ್ಲೈಮಾಕ್‌ಸ್‌ ಹಂತ ತಲುಪಿದೆ.
ದೇವೇಂದ್ರ ಫಡ್ನವಿಸ್ ಅವರು ಕೇವಲ ನಾಲ್ಕು ದಿನಗಳಲ್ಲೇ ಮುಖ್ಯಮಂತ್ರಿ ಸ್ಥಾಾನಕ್ಕೆೆ ರಾಜೀನಾಮೆ ನೀಡುತ್ತಿದ್ದಂತೆ ಶಿವಸೇನೆ-ಎನ್‌ಸಿಪಿ-ಕಾಂಗ್ರೆೆಸ್ ಪಕ್ಷಗಳ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾದವು.
ಖಾಸಗಿ ಹೋಟೆಲ್‌ನಲ್ಲಿ ನಡೆದ ಜಂಟಿ ಸಭೆಯಲ್ಲಿ ಈ ಮೂರೂ ಪಕ್ಷಗಳು ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆೆ ಅವರನ್ನು ಮುಖ್ಯಮಂತ್ರಿಿ ಘೋಷಿಸಿದವು. ಇದಾದ ಬಳಿಕ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಮಂಡಿಸಿದರು.

ಡಿಸೆಂಬರ್ 1ರಂದು ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಸಿಪಿಯ ಜಯಂತ್ ಪಾಟೀಲ್ ಹಾಗೂ ಕಾಂಗ್ರೆೆಸ್‌ನ ಬಾಳಾಸಾಹೇಬ್ ಥೋರಟ್ ಅವರು ಉಪಮುಖ್ಯಮಂತ್ರಿಿಗಳಾಗಲಿದ್ದಾಾರೆ ಎಂದೂ ಮೂಲಗಳು ತಿಳಿಸಿವೆ. ‘ಮಹಾರಾಷ್ಟ್ರ ವಿಕಾಸ್ ಆಘಾಡಿ’ ಎಂದು ಈ ಮೈತ್ರಿಿಕೂಟವನ್ನು ಕರೆಯಲಾಗಿದೆ.

ಉದ್ಧವ್ ಠಾಕ್ರೆೆ ಅವರು ಠಾಕ್ರೆೆ ಕುಟುಂಬದ ಮೊದಲ ಮುಖ್ಯಮಂತ್ರಿ ಹೊಸದಾಗಿ ಆಯ್ಕೆೆಯಾದ ಶಾಸಕರು ಬುಧವಾರ 8 ಗಂಟೆಯ ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾಾರೆ. ಕಾಳಿದಾಸ್ ಕೊಲಂಬಕರ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಅವರು ಪ್ರಮಾಣವಚನ ಬೋಧಿಸಲಿದ್ದಾಾರೆ.

ಇದಕ್ಕೆೆ ಮುನ್ನ, ಮಂಗಳವಾರವಿಡೀ ಬಿರುಸಿನ ಹಾಗೂ ಚುರುಕಿನ ರಾಜಕೀಯ ವಿದ್ಯಮಾನಗಳು ನಡೆದುಹೋದವು. ಬುಧವಾರ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕು ಎಂದು ಪಡ್ನವಿಸ್ ಸರಕಾರಕ್ಕೆೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದೇ ತಡ, ಒಂದೊಂದಾಗಿ ಘಟನೆಗಳು ಅನಾವರಣಗೊಳ್ಳತೊಡಗಿದವು. ಉಪಮುಖ್ಯಮಂತ್ರಿಿ ಸ್ಥಾಾನಕ್ಕೆೆ ಅಜಿತ್ ಪವಾರ್ ಸಲ್ಲಿಸುತ್ತಿಿದ್ದಂತೆ ವಿಚಲಿತರಾದ ದೇವೇಂದ್ರ ಪಡ್ನವಿಸ್ ಅವರು, ಮಧ್ಯಾಾಹ್ನ 3.30ಕ್ಕೆೆ ಪತ್ರಿಿಕಾಗೋಷ್ಠಿಿ ಕರೆದು ತಾವು ರಾಜೀನಾಮೆ ನೀಡುತ್ತಿಿರುವುದಾಗಿ ಪ್ರಕಟಿಸಿದರು. ತಮ್ಮ ಬಳಿ ಬಹುಮತ ಸಂಖ್ಯೆೆ ಇಲ್ಲದಿರುವುದರಿಂದ ಈ ಕ್ರಮ ಎಂದರು. ತದನಂತರ ನೇರ ರಾಜಭವನಕ್ಕೆೆ ತೆರಳಿ ರಾಜ್ಯಪಾಲ ಕೋಶಿಯಾರಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಇದನ್ನು ಅಂಗಿಕರಿಸಿದ ಗವರ್ನರ್, ಮುಂದಿನ ಸರಕಾರ ರಚನೆಯಾಗುವವವರೆಗೆ ಮುಖ್ಯಮಂತ್ರಿಿಯಾಗಿ ಮುಂದುವರಿಯುವಂತೆ ಸೂಚನೆ ನೀಡಿದರು.