Thursday, 12th December 2024

ಪಶ್ಚಿಮ ಬಂಗಾಳ ತಲುಪಿದ 1,200 ಪ್ರಯಾಣಿಕರ ಬೆಂಗಳೂರು ಟ್ರೈನ್

ಪಶ್ಚಿಮ ಬಂಗಾಳ:

ಬೆಂಗಳೂರಿನಿಂದ 1,200ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಮಂಗಳವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಬಂಕುರಾ ತಲುಪಿದೆ.

ಈ ರೈಲಿನಲ್ಲಿ ರೋಗಿಗಳು, ವಲಸೆ ಕಾರ್ಮಿಕರು, ವಿದ್ಯಾಾರ್ಥಿಗಳೂ ಸೇರಿದಂತೆ 1,200ಕ್ಕೂ ಹೆಚ್ಚು ಮಂದಿ ಇದ್ದರು.
ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮೇ 10ರಂದು ಪ್ರಯಾಣ ಬೆಳಸಿದ 22 ಭೋಗಿಗಳ ವಿಶೇಷ ರೈಲು ಎರಡು ದಿನಗಳ ನಂತರ ಬಂಕುರಾವನ್ನು ಸುರಕ್ಷಿತವಾಗಿ ತಲುಪಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಕುರಾ ರೈಲು ನಿಲ್ದಾಣ ತಲುಪಿದ ಎಲ್ಲ ಪ್ರಯಾಣಿಕರನ್ನು ಕರೋನಾ ರೋಗ ಲಕ್ಷಣಗಳ ಪತ್ತೆಯಾಗಿ ವೈದ್ಯಕೀಯ ತಪಾಸಣೆ ಪಡಿಸಲಾಗಿದೆ. ಫಲಿತಾಂಶದ ನಂತರ ಅವರವರ ಮನೆಗಳನ್ನು ತಲುಪಲು ಪಶ್ಚಿಮ ಬಂಗಾಳ ಸರಕಾರಿ ಬಸ್‌ಗಳ ವ್ಯವಸ್ಥೆ ಮಾಡಲಿದೆ.