Thursday, 12th December 2024

ಪೊಲೀಸರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ

ಶ್ರೀನಗರ: ಸಾರ್ವಜನಿಕರನ ನಡುವೆಯೇ ಭಯೋತ್ಪಾದಕರು ರಾಜಾರೋಷವಾಗಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ.

ಶೋಪಿಯಾನ್ʼನಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಎನ್ ಕೌಂಟರ್ ಕಾರ್ಯಾಚರಣೆ ನಡೆಸಿರುವಂತೆಯೇ, ಇದಕ್ಕೆ ಪ್ರತಿ ಯಾಗಿ ಉಗ್ರರು ಶ್ರೀನಗರದ ಬಾಗಾಟ್ ಬಾರ್ಜುಲ್ಲಾ ಪ್ರದೇಶದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ.

ಶ್ರೀನಗರದ ಬಾಗಾಟ್ ಬಾರ್ಜುಲ್ಲಾ ಪ್ರದೇಶದಲ್ಲಿ ಅಂಗಡಿಯೊಂದರ ಬಳಿ ಇಬ್ಬರು ಪೊಲೀಸರು ನಿಂತಿದ್ದ ವೇಳೆ  ಶಸ್ತ್ರಧಾರಿ ಭಯೋತ್ಪಾದಕ ಬಂದೂಕು ತೆಗೆದು ಪೊಲೀಸರ ಮೇಲೆ ಗುಂಡು ಹಾಕಿಸಿ, ಪಾರಾರಿಯಾಗಿದ್ದಾನೆ.